ಹಳಿಯಾಳದಲ್ಲಿ ಜಿಂಕೆ ಭೇಟೆ; ಇಬ್ಬರ ಬಂಧನ

| Updated By: ಕಿರಣ್ ಹನುಮಂತ್​ ಮಾದಾರ್

Updated on: Mar 16, 2024 | 10:14 PM

ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ(Haliyala)  ತಾಲೂಕಿನ ರಾಮಾಪುರದ ಮೊದಲಗೇರಾದಲ್ಲಿ ಜಿಂಕೆ ಭೇಟೆಯಾಡಿ ಮಾಂಸವನ್ನು ಹಂಚಿಕೊಳ್ಳುತ್ತಿದ್ದ ವೇಳೆ ಪೋಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ. ಮೊದಲಗೇರಾ ನಿವಾಸಿಗಳಾದ ಪರಶುರಾಮ ಶಿವಾಜಿ ಕೊಡಗೇಕರ (37 ), ಸುನೀಲ ಮಾವಳು ತುಫಾರಿ (31) ಬಂಧಿತ ಆರೋಪಿಗಳು.

ಹಳಿಯಾಳದಲ್ಲಿ ಜಿಂಕೆ ಭೇಟೆ; ಇಬ್ಬರ ಬಂಧನ
ಹಳಿಯಾಳದಲ್ಲಿ ಜಿಂಕೆ ಬೇಟೆ
Follow us on

ಉತ್ತರ ಕನ್ನಡ, ಮಾ.16: ವನ್ಯ ಪ್ರಾಣಿಗಳ ಸಂತತಿ ನಶಿಸಿ ಹೋಗುತ್ತಿದ್ದು, ಇದರ ಮಧ್ಯೆ ಬೇಟೆಗಾರರ ಹಾವಳಿ ಹೆಚ್ಚಾಗಿದೆ. ಅದರಂತೆ ಇದೀಗ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ(Haliyala)  ತಾಲೂಕಿನ ರಾಮಾಪುರದ ಮೊದಲಗೇರಾದಲ್ಲಿ ಜಿಂಕೆ ಭೇಟೆಯಾಡಿ ಮಾಂಸವನ್ನು ಹಂಚಿಕೊಳ್ಳುತ್ತಿದ್ದ ವೇಳೆ ಪೋಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ. ಮೊದಲಗೇರಾ ನಿವಾಸಿಗಳಾದ ಪರಶುರಾಮ ಶಿವಾಜಿ ಕೊಡಗೇಕರ (37 ), ಸುನೀಲ ಮಾವಳು ತುಫಾರಿ (31) ಬಂಧಿತ ಆರೋಪಿಗಳು.

ಅಕ್ರಮವಾಗಿ ನಾಡಬಂದೂಕನ್ನು ಹೊಂದಿದ್ದ ಆರೋಪಿಗಳು

ಇನ್ನು ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ, ಬಂಧಿತರಿಂದ ಒಂಟಿ ನಳಿಕೆಯ ನಾಡ ಬಂದೂಕು, ಕಟ್ಟಿಗೆಯ ಹಿಡಿಕೆ ಇರುವ ಕಬ್ಬಿಣದ ಸಣ್ಣ ಕೈ ಕೊಡ, ದೊಡ್ಡ ಗಾತ್ರದ ಕಬ್ಬಿಣದ ಕೊಡಲಿ ಜೊತೆಗೆ 7.940ಕೆ.ಜಿ. ಮಾಂಸಗಳಿರುವ ಮೂರು ಪ್ಲಾಸ್ಟಿಕ್ ಬ್ಯಾಗ್‌ಗಳು ಹಾಗೂ ಜಿಂಕೆಯ ತಲೆಬುರುಡೆಯನ್ನ ವಶಕ್ಕೆ ಪಡೆಯಲಾಗಿದೆ. ಇವರು ಯಾವುದೇ ಪರವಾನಗಿ ಪಡೆಯದೇ ಅಕ್ರಮವಾಗಿ ನಾಡಬಂದೂಕನ್ನು ಹೊಂದಿದ್ದರು.

ಇದನ್ನೂ ಓದಿ:ಕರಡಿಯನ್ನು ಬೇಟೆಯಾಡಿ ಕೊಂದು ತಿಂದ ಹುಲಿ! ಸಿಕ್ಕಾಪಟ್ಟೆ ವೈರಲ್ ಆಯ್ತು ವಿಡಿಯೋ

ವನ್ಯ ಪ್ರಾಣಿ ಸಂರಕ್ಷಣಾ ಕಾಯ್ದೆಯಡಿ ಸಂರಕ್ಷಣೆ

ಜಿಂಕೆಯನ್ನು ಬೇಟೆಯಾಡಿ ತಲೆಯ ಭಾಗವನ್ನು ಸುಟ್ಟು, ಇನ್ನುಳಿದ ಮಾಂಸವನ್ನು ಸಮವಾಗಿ ಹಂಚಿಕೊಳ್ಳಲು ಕತ್ತರಿಸುತ್ತಿದ್ದಾಗ ಪೊಲೀಸರು ದಾಳಿ ನಡೆಸಿದ್ದು, ಸಂರಕ್ಷಣಾ ಕಾಯ್ದೆ 1972 ಹಾಗೂ ಭಾರತೀಯ ಆಯುಧ ಕಾಯ್ದೆ 1959ರ ಅನ್ವಯ ಪ್ರಕರಣ ದಾಖಲು ಮಾಡಲಾಗಿದೆ. ಅರಣ್ಯ ಸಂಚಾರಿ ದಳದ ಪಿಎಸ್ಐ ಕಿರಣ್​ ಪಾಟೀಲ್​ ಅವರು ಪ್ರಕರಣ ದಾಖಲಿಸಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ. ಪೋಲೀಸ ಸಿಬ್ಬಂದಿ ಮುಲ್ಲಾ, ಚಂದ್ರಶೇಖರ್​, ಪ್ರಶಾಂತ, ಭಾನು ಕಾಂತ, ಗಜಾನನ , ಮಂಜುನಾಥ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ