ಹಾನಗಲ್‌ ಗ್ಯಾಂಗ್ ರೇಪ್ ಕೇಸ್: ಸಂತ್ರಸ್ತೆ ಮಹಿಳೆಯ ಮೊದಲ ಪ್ರತಿಕ್ರಿಯೆ, ಗಂಭೀರ ಆರೋಪ

| Updated By: ರಮೇಶ್ ಬಿ. ಜವಳಗೇರಾ

Updated on: Jan 14, 2024 | 5:49 PM

Hangal Gang Rape Case: ಹಾನಗಲ್ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಮಹಿಳೆಯನ್ನು ಇದೀಗ ಶಿರಸಿಯ ಅವರ ನಿವಾಸಕ್ಕೆ ಕರೆದೊಯ್ಯಲಾಗಿದೆ. ಹಾನಗಲ್ ಪೊಲೀಸರು ಸಂತ್ರಸ್ತೆ ಮಹಿಳೆಯನ್ನು ಮನೆಗೆ ಹೋಗಿ ಬಿಟ್ಟು ಬಂದಿದ್ದಾರೆ. ಇದರ ಬೆನ್ನಲ್ಲೇ ಇದೀಗ ಸಂತ್ರಸ್ತೆ ಮಾಧ್ಯಮಗಳಿಗೆ ಮೊದಲ ಬಾರಿಗೆ ಮಾತನಾಡಿದ್ದು, ಕೆಲ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಹಾನಗಲ್‌ ಗ್ಯಾಂಗ್ ರೇಪ್ ಕೇಸ್: ಸಂತ್ರಸ್ತೆ ಮಹಿಳೆಯ ಮೊದಲ ಪ್ರತಿಕ್ರಿಯೆ, ಗಂಭೀರ ಆರೋಪ
ಪ್ರಾತಿನಿಧಿಕ ಚಿತ್ರ
Follow us on

ಶಿರಸಿ, (ಜನವರಿ 14): ಹಾನಗಲ್ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಮಹಿಳೆಯನ್ನು ಇದೀಗ ಶಿರಸಿಯ ಅವರ ನಿವಾಸಕ್ಕೆ ಕರೆದೊಯ್ಯಲಾಗಿದೆ. ಹಾನಗಲ್ ಪೊಲೀಸರು ಸಂತ್ರಸ್ತೆ ಮಹಿಳೆಯನ್ನು ಮನೆಗೆ ಹೋಗಿ ಬಿಟ್ಟು ಬಂದಿದ್ದಾರೆ. ಇದರ ಬೆನ್ನಲ್ಲೇ ಇದೀಗ ಸಂತ್ರಸ್ತೆ ಮಾಧ್ಯಮಗಳಿಗೆ ಮೊದಲ ಬಾರಿಗೆ ಮಾತನಾಡಿದ್ದು, ಅತ್ಯಾಚಾರ ಎಸಗಿದವರಿಗೆ ಕಠಿಣ ಶಿಕ್ಷೆಯಾಗಬೇಕು. ನನ್ನ ಮೇಲೆ ಹಲ್ಲೆ ನಡೆಸಿದ್ದಲ್ಲದೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಲೈಂಗಿಕ ದೌರ್ಜನ್ಯ ಎಸಗಿದವರಲ್ಲಿ ಇಬ್ಬರು ಈ ಪ್ರಕರಣದಲ್ಲಿ ಇಲ್ಲದವರು. ಪೊಲೀಸರು ಬೇರೆಯವರನ್ನ ಅರಸ್ಟ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಪೊಲೀಸರು ಇಬ್ಬರ ಫೋಟೋ ತೋರಿಸಿದ್ರು. ಆ ಇಬ್ಬರು ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವರಲ್ಲ.
ಆರು ಮಂದಿ ಬಂಧಿಸಿದವರಲ್ಲಿ ಇಬ್ಬರು ಈ ಪ್ರಕರಣದಲ್ಲಿ ಇಲ್ಲದವರು. ವಿಡಿಯೋದಲ್ಲಿ ಇದ್ದವರು ಆ ಇಬ್ಬರಲ್ಲ. ಸ್ಥಳ ಪರಿಶೀಲನೆ ಎಂದು ಹೇಳಿ ಇದೀಗ ಮನೆಗೆ ತಂದು ಬಿಟ್ಟಿದ್ದಾರೆ. ನನ್ನ ಕುಟುಂಬಸ್ಥರಿಗೂ ಮಾಹಿತಿ ನೀಡದೆ ಮನೆಗೆ ಬಿಟ್ಟು ಹೋಗಿದ್ದಾರೆ. ಜೀವ ಭಯವಿದ್ದರೂ ಪೊಲೀಸರನ್ನು ಮನೆ ಬಳಿ ನಿಯೋಜಿಸಿಲ್ಲ ಎಂದು ಆರೋಪಿಸಿದರು.

ಇದನ್ನೂ ಓದಿ: ಹಾನಗಲ್‌ ಗ್ಯಾಂಗ್ ರೇಪ್ ಕೇಸ್​ ಮುಚ್ಚಿ ಹಾಕುವುದರಲ್ಲಿ ಪೊಲೀಸರೇ ಭಾಗಿಯಾಗಿದ್ದಾರೆ: ರಾಜ್ಯಾಧ್ಯಕ್ಷ ವಿಜಯೇಂದ್ರ ಆರೋಪ

ಇಂದು ಬೆಳ್ಳಂ ಬೆಳಿಗ್ಗೆ ಸಂತ್ರಸ್ತೆಯನ್ನ ಸಾಂತ್ವನ ಕೇಂದ್ರದಿಂದ ಶಿರಸಿ ನಿವಾಸಕ್ಕೆ ಬಿಟ್ಟು ಬಂದ ಹಾನಗಲ್ ಪೊಲೀಸರು, ಹಾನಗಲ್ ನಲ್ಲಿ ಸಂತ್ರಸ್ತೆಯನ್ನ ಬಿಜೆಪಿ ನಿಯೋಗ ಬೇಟಿ ಮಡಲು ಮುಂದಾಗಿತ್ತು. ಬಿಜೆಪಿ ನಿಯೋಗ ಭೇಟಿ ಹಿನ್ನೆಲೆ ಪೊಲೀಸರು ಏಕಾಏಕಿ ಸಂತ್ರಸ್ತೆ ಮಹಿಳೆಯನ್ನು ಮನೆಗೆ ಶಿಫ್ಟ್ ಮಾಡಿದ್ದರು.