ಡಾಕ್ಟರಿಕೆ ಪದವಿಯೂ ಇಲ್ಲದೆ, ಅಂಕೋಲಾದಲ್ಲಿ ಆಯುರ್ವೇದ ಆಸ್ಪತ್ರೆ ನಡೆಸುತ್ತಿದ್ದ ನಕಲಿ ವೈದ್ಯನ ವಿರುದ್ಧ ಪ್ರಕರಣ ದಾಖಲು

| Updated By: ವಿವೇಕ ಬಿರಾದಾರ

Updated on: Jul 02, 2022 | 8:24 PM

ಅಂಕೋಲಾ ನಗರದ ಜಟಗೇಶ್ವರ ಆಯುರ್ವೇದ ಆಸ್ಪತ್ರೆಯಮೇಲೆ ಅಂಕೋಲಾ ತಾಲೂಕು ವೈದ್ಯಾಧಿಕಾರಿ ಅಶೋಕ್ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ಮಾಡಿ ಆಸ್ಪತ್ರೆಯನ್ನು ಸೀಜ್ ಮಾಡಿದ್ದಾರೆ.

ಡಾಕ್ಟರಿಕೆ ಪದವಿಯೂ ಇಲ್ಲದೆ, ಅಂಕೋಲಾದಲ್ಲಿ ಆಯುರ್ವೇದ ಆಸ್ಪತ್ರೆ ನಡೆಸುತ್ತಿದ್ದ ನಕಲಿ ವೈದ್ಯನ ವಿರುದ್ಧ ಪ್ರಕರಣ ದಾಖಲು
ಅಂಕೋಲ ಆಯುರ್ವೇದ ಆಸ್ಪತ್ರೆ
Follow us on

ಉತ್ತರ ಕನ್ನಡ: ಅಂಕೋಲಾ (Ankola) ನಗರದ ಜಟಗೇಶ್ವರ ಆಯುರ್ವೇದ (Ayurveda) ಆಸ್ಪತ್ರೆಯ (Hospital) ಮೇಲೆ ಅಂಕೋಲಾ ತಾಲೂಕು ವೈದ್ಯಾಧಿಕಾರಿ (Health officer) ಅಶೋಕ್ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ಮಾಡಿ ಆಸ್ಪತ್ರೆಯನ್ನು ಸೀಜ್ ಮಾಡಿದ್ದಾರೆ. ವೈದ್ಯ ವೈ.ಆರ್.ರೆಡ್ಡಿ ಯಾವುದೇ ಅನುಮತಿ ಇಲ್ಲದೆ ವೈದ್ಯ ಪದವಿ ಸರ್ಟಿಫಿಕೇಟ್ ಸಹ ಇಲ್ಲದೆ ನಡೆಸುತ್ತಿರುವ ಹಿನ್ನೆಲೆ ದಾಳಿ ಮಾಡಿದ್ದು, ಅಂಕೋಲಾ ಠಾಣೆಯಲ್ಲಿ ನಕಲಿ ವೈದ್ಯ ವೈ.ಆರ್.ರೆಡ್ಡಿ ವಿರುದ್ಧ ಪ್ರಕರಣ ದಾಖಲಾಗಿದೆ.

ಇದನ್ನು ಓದಿ: ಇಂದಿನಿಂದ ಎರಡು ದಿನ ಹೈದರಾಬಾದ್​​ನಲ್ಲಿ ನಡೆಯಲಿದೆ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ

ಸಿಎಂ ಬಸವರಾಜ ಬೊಮ್ಮಾಯಿ ಅವರ ಧರ್ಮಪತ್ನಿ ಚೆನ್ನಮ್ಮ ಗೋಕರ್ಣಕ್ಕೆ ಭೇಟಿ

ಉತ್ತರ ಕನ್ನಡ: ಕುಮಟಾ ತಾಲೂಕಿನ ಗೋಕರ್ಣದಲ್ಲಿರುವ ಪುರಾಣ ಪ್ರಸಿದ್ಧ ಮಹಾಬಲೇಶ್ವರ ದೇವಸ್ಥಾನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಧರ್ಮಪತ್ನಿ ಚೆನ್ನಮ್ಮ ಭೇಟಿ ನೀಡಿದ್ದಾರೆ.  ನಂತರ ಮಹಾಗಣಪತಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಚೆನ್ನಮ್ಮ ಅವರೊಂದಿಗೆ ಕುಟುಂಬ ಸದಸ್ಯರು ದೇವರ ದರ್ಶನ ಪಡೆದಿದ್ದಾರೆ. ಖಾಸಗಿ ಕಾರ್ಯಕ್ರಮದ ನಿಮಿತ್ತ ಚೆನ್ನಮ್ಮ ಗೋಕರ್ಣದಲ್ಲಿ ವಾಸ್ತವ್ಯ ಹೂಡಿದ್ದಾರೆ.

Published On - 7:54 pm, Sat, 2 July 22