ಕುಮಟಾದಲ್ಲಿ ಭಾರೀ ಮಳೆ; ಧರೆಗುರುಳಿದ 30ಕ್ಕೂ ಹೆಚ್ಚು ಮರಗಳು, ಗೋಕರ್ಣದ ಭೋಜನ ಶಾಲೆ ಮೇಲೆ ಬಿದ್ದ ಮರ

| Updated By: ಗಣಪತಿ ಶರ್ಮ

Updated on: Jul 06, 2023 | 8:27 PM

ಹಂದಿಗೋಣ ಸರ್ಕಾರಿ ಶಾಲೆಯಲ್ಲಿ ಕಾಳಜಿ ಕೇಂದ್ರ ಸ್ಥಾಪಿಸಲಾಗಿದ್ದು, ಆರು ಕುಟುಂಬಗಳನ್ನು ಅಧಿಕಾರಿಗಳು ಕಾಳಜಿ ಕೇಂದ್ರಕ್ಕೆ ರವಾನಿಸಿದ್ದಾರೆ.

ಕುಮಟಾದಲ್ಲಿ ಭಾರೀ ಮಳೆ; ಧರೆಗುರುಳಿದ 30ಕ್ಕೂ ಹೆಚ್ಚು ಮರಗಳು, ಗೋಕರ್ಣದ ಭೋಜನ ಶಾಲೆ ಮೇಲೆ ಬಿದ್ದ ಮರ
ಕುಮಟಾದಲ್ಲಿ ಮಳೆಯಿಂದಾಗಿ ಮನೆಹಯೊಂದು ಜಲಾವೃತಗೊಂಡಿರುವುದು
Follow us on

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ (Kumta) ಭಾರೀ ಬಿರುಗಾಳಿ ಸಹಿತ ಮಳೆಯಾಗಿದ್ದು, ಮಾಸ್ತಿಕಟ್ಟೆ ಬಳಿ 30ಕ್ಕೂ ಹೆಚ್ಚು ಮರಗಳು ಧರೆಗೆ ಉರುಳಿವೆ. ಗೂಡಂಗಡಿ ಮೇಲೆ ಮರ ಬಿದ್ದಿದ್ದರಿಂದ ಒಬ್ಬ ವ್ಯಕ್ತಿ ಗಂಭೀರ ಗಾಯಗೊಂಡಿದ್ದಾರೆ. ಮರ ಬಿದ್ದು 2 ಬೈಕ್‌ಗಳು, 4 ಮನೆಗಳು, ಶಾಲಾ ಕೊಠಡಿಗೆ ಹಾನಿಯಾಗಿದೆ. ಗೋಕರ್ಣದ ಮಹಾಬಲೇಶ್ವರ ದೇವಸ್ಥಾನ(Gokarna Temple) ಅಮೃತಾನ್ನ ಭೋಜನ ಶಾಲೆಯ ಮೇಲೆ ಬೃಹತ್ ಮರ ಬಿದ್ದಿದ್ದು, ಹಾನಿಯಾಗಿದೆ.

ಹಂದಿಗೋಣ ಸರ್ಕಾರಿ ಶಾಲೆಯಲ್ಲಿ ಕಾಳಜಿ ಕೇಂದ್ರ ಸ್ಥಾಪಿಸಲಾಗಿದ್ದು, ಆರು ಕುಟುಂಬಗಳನ್ನು ಅಧಿಕಾರಿಗಳು ಕಾಳಜಿ ಕೇಂದ್ರಕ್ಕೆ ರವಾನಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ಧಾರಾಕಾರ ಮಳೆಯಾಗುತ್ತಿರುವುದರಿಂದ ರಕ್ಷಣಾ ಕಾರ್ಯಾಚರಣೆಗಾಗಿ ಬೆಳಗಾವಿಯಿಂದ ಉತ್ತರ ಕನ್ನಡ ಜಿಲ್ಲೆಗೆ ಎಸ್​​ಡಿಆರ್​​ಎಫ್ ತಂಡಗಳನ್ನು ರವಾನಿಸಲಾಗಿದೆ. ಅಂಕೋಲ, ಹೊನ್ನಾವರಕ್ಕೆ 10 ಸದಸ್ಯರಿರುವ 2 ತಂಡ ರವಾನಿಸಲಾಗಿದೆ.

ಅಂಕೋಲ, ಹೊನ್ನಾವರ, ಭಟ್ಕಳ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಎಸ್​​ಡಿಆರ್​​ಎಫ್ ತಂಡಗಳನ್ನು ಕಳುಹಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ