ಕುಮಟಾದಲ್ಲಿ ಪತ್ತೆಯಾಯ್ತು ಭಾರತದಲ್ಲೇ ಅತೀ ದೊಡ್ಡ ಬಿಳಿ ಹೆಬ್ಬಾವು; ಇಲ್ಲಿದೆ ವಿಡಿಯೋ

| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 31, 2023 | 5:13 PM

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೆಗಡೆ ಗ್ರಾಮದ ಗಾಂಧಿನಗರದ ದೇವಿ ಮುಕ್ರಿ ಎಂಬುವವರ ಮನೆಯ ಅಂಗಳದಲ್ಲಿ ಅಪರೂಪವಾಗಿರುವ ಬಿಳಿ ಹೆಬ್ಬಾವೊಂದು ಸೋಮವಾರ ಕಂಡುಬಂದಿತ್ತು. ಬಳಿಕ ಹೆಬ್ಬಾವನ್ನು ರಕ್ಷಣೆ ಮಾಡಿ, ರಾತ್ರಿಯಾಗಿದ್ದರಿಂದ ಬೆಳಿಗ್ಗೆ ಕುಮಟಾ ಅರಣ್ಯ ಇಲಾಖೆಗೆ ಒಪ್ಪಿಸಲಾಗಿತ್ತು. ನಂತರ ಹೆಬ್ಬಾವಿನ ಮೈಮೇಲೆ ಸಣ್ಣ ಪುಟ್ಡ ಗಾಯಗಳಿರುವುದರಿಂದ ಮೈಸೂರ್ ಜೂ ಕಳಿಸಲಾಗಿದೆ.

ಉತ್ತರ ಕನ್ನಡ, ಆ.31: ಹಚ್ಚಹಸಿರನ್ನೇ ಹೊದ್ದು ಮಲಗಿರುವ ಉತ್ತರ ಕನ್ನಡ (Uttara Kannada) ಜಿಲ್ಲೆಯ ಕುಮಟಾ (Kumta) ತಾಲೂಕಿನ ಹೆಗಡೆ ಗ್ರಾಮದ ಗಾಂಧಿನಗರದಲ್ಲಿ. ದೇವಿ ಮುಕ್ರಿ ಎಂಬುವವರ ಮನೆಯ ಅಂಗಳದಲ್ಲಿ ಅಪರೂಪವಾಗಿರುವ ಬಿಳಿ ಹೆಬ್ಬಾವೊಂದು (White Python) ಸೋಮವಾರ ಕಂಡುಬಂದಿದೆ. ಕೂಡಲೇ ಆರ್​ಟಿಓ ಒಫಿಸ್ ಹೋಮ್ ಗಾರ್ಡ್ ಆಗಿರುವ ಗಣೇಶ್ ಮುಕ್ರಿಯವರು ಉರಗ ತಜ್ಞ ಪವನ್ ನಾಯ್ಕ ಅವರಿಗೆ ಕರೆ ಮಾಡಿದ್ದಾರೆ. ಬಳಿಕ ತಡರಾತ್ರಿ 12 ಘಂಟೆಗೆ ಸ್ಥಳಕ್ಕೆ ತೆರಳಿ ಬಿಳಿ ಹೆಬ್ಬಾವನ್ನು ರಕ್ಷಣೆ ಮಾಡಿದ್ದಾರೆ.

ಕರ್ನಾಟಕದಲ್ಲಿಯೇ ಮೂರು ಬಾರಿ ರಕ್ಷಣೆ

ಇಂತಹ ಹಾವು ಕರ್ನಾಟಕದಲ್ಲೇ ಮೂರನೇ ಬಾರಿ ರಕ್ಷಣೆಯಾಗಿದ್ದು, ಅದರಲ್ಲಿ 2 ಭಾರಿ ಕುಮಟಾದಲ್ಲೇ ರಕ್ಷಣೆಯಾಗಿದೆ. ಹಾಗೂ ಭಾರತದಲ್ಲೇ ಅತೀ ದೊಡ್ಡ ಬಿಳಿ ಹೆಬ್ಬಾವಿನ ರಕ್ಷಣೆಯ ಕೀರ್ತಿಯೂ ಪವನ್ ನಾಯ್ಕ ಅವರಿಗೆ ಸಿಕ್ಕಿರುತ್ತದೆ. ಕಳೆದ ವರ್ಷವಷ್ಟೇ ಮಿರ್ಜಾನ್​ನಲ್ಲಿ ಸಣ್ಣ ಗಾತ್ರದ ಬಿಳಿ ಹೆಬ್ಬಾವು ಕಾಣಿಸಿದ್ದು, ರಾತ್ರಿಯ ವೇಳೆ ಪವನ್ ನಾಯ್ಕ ಹೋಗಿ ರಕ್ಷಣೆ ಮಾಡಿದ್ದರು. ಈ ವಿಡಿಯೋ ರಾಷ್ಟ್ರಾದ್ಯಂತ ವೈರಲ್ ಕೂಡ ಆಗಿತ್ತು. ಈಗ ಬಹುತೇಕ 3 ಪಟ್ಟು ದೊಡ್ಡ ಗಾತ್ರದ ಹೆಬ್ಬಾವು ಹೆಗಡೆಯಲ್ಲಿ ಕಾಣಿಸಿದೆ.

ಇದನ್ನೂ ಓದಿ:Viral Video: 122 ಮೊಟ್ಟೆಗಳೊಂದಿಗೆ, 84 ಕೆಜಿಯ ಬರ್ಮೀಸ್ ಹೆಬ್ಬಾವನ್ನು ಪತ್ತೆ ಹಚ್ಚಿದ ಫ್ಲೋರಿಡಾ ಜೀವಶಾಸ್ತ್ರಜ್ಞರು

ಇನ್ನು ಹೆಬ್ಬಾವನ್ನು ರಕ್ಷಣೆ ಮಾಡಿ, ರಾತ್ರಿಯಾಗಿದ್ದರಿಂದ ಬೆಳಿಗ್ಗೆ ಕುಮಟಾ ಅರಣ್ಯ ಇಲಾಖೆಗೆ ಒಪ್ಪಿಸಲಾಗಿತ್ತು. ಬಳಿಕ ಹೆಬ್ಬಾವಿನ ಮೈಮೇಲೆ ಸಣ್ಣ ಪುಟ್ಡ ಗಾಯಗಳಿರುವುದರಿಂದ ಮೈಸೂರ್ ಜೂ ಕಳಿಸಲಾಗಿದೆ. ಈ ವೇಳೆ ಡಿ ಎಫ್​ಓ ಶ್ರೀ ರವಿಶಂಕರ್, ಎಸಿಎಫ್ ಶ್ರೀ ಜಿ ಲೋಹಿತ್, ಆರ್​ಎಫ್​ಓ ಶ್ರೀ ಎಸ್​ಟಿ ಪಟಗಾರ್, ಡಿಆರ್​ಎಫ್​ಓ ಹೂವಣ್ಣ ಗೌಡ ಸ್ಥಳದಲ್ಲಿದ್ದರು. ಇನ್ನು ಹಾವಿನ ಛಾಯಾಗ್ರಹಣವನ್ನು ಪ್ರಸಿದ್ದ ಛಾಯಾಗ್ರಾಹಕರಾದ ಗೋಪಿ ಜೊಲಿಯವರು ತಮ್ಮ ಕೆಮರಾದಲ್ಲಿ ಸೆರೆಹಿಡಿದಿದ್ದಾರೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:12 pm, Thu, 31 August 23

Follow us on