Viral Video: 122 ಮೊಟ್ಟೆಗಳೊಂದಿಗೆ, 84 ಕೆಜಿಯ ಬರ್ಮೀಸ್ ಹೆಬ್ಬಾವನ್ನು ಪತ್ತೆ ಹಚ್ಚಿದ ಫ್ಲೋರಿಡಾ ಜೀವಶಾಸ್ತ್ರಜ್ಞರು
ಸೌತ್‌ವೆಸ್ಟ್ ಫ್ಲೋರಿಡಾದ ಕನ್ಸರ್ವೆನ್ಸಿನಲ್ಲಿ ಹಿಡಿದ ದೈತ್ಯ ಹಾವು 18 ಅಡಿ ಉದ್ದವಾಗಿದ್ದು ಮತ್ತು ಅಂದಾಜು 98 ಕೆಜಿ ಇದೆ ಎಂದು ಹೇಳಲಾಗಿದೆ. ಈ ಕುರಿತು ಅನೇಕ ಜೀವಶಾಸ್ತ್ರಜ್ಞರು ಇದರ ಬಗ್ಗೆ ಅಧ್ಯಯನವನ್ನು ಮಾಡುತ್ತಿದ್ದಾರೆ.
ಅಮೆರಿಕಾದಲ್ಲಿ ಬೃಹತ್ ಆಕಾರ ಹೆಬ್ಬಾವು ಒಂದು ಪತ್ತೆಯಾಗಿದೆ. ಜೀವಶಾಸ್ತ್ರಜ್ಞರು ಯುಎಸ್ಎಯ ಫ್ಲೋರಿಡಾ ರಾಜ್ಯದಲ್ಲಿ ಪತ್ತೆಯಾಗಿರುವ ಅತಿದೊಡ್ಡ ಬರ್ಮೀಸ್ ಹೆಬ್ಬಾವನ್ನು ಸೆರೆಹಿಡಿದಿದ್ದಾರೆ. ಸೌತ್‌ವೆಸ್ಟ್ ಫ್ಲೋರಿಡಾದ ಕನ್ಸರ್ವೆನ್ಸಿನಲ್ಲಿ ಹಿಡಿದ ದೈತ್ಯ ಹಾವು 18 ಅಡಿ ಉದ್ದವಾಗಿದ್ದು ಮತ್ತು ಅಂದಾಜು 98 ಕೆಜಿ ಇದೆ ಎಂದು ಹೇಳಲಾಗಿದೆ. ಈ ಕುರಿತು ಅನೇಕ ಜೀವಶಾಸ್ತ್ರಜ್ಞರು ಇದರ ಬಗ್ಗೆ ಅಧ್ಯಯನವನ್ನು ಮಾಡುತ್ತಿದ್ದಾರೆ. ಈ ಬಗ್ಗೆ ಸಂರಕ್ಷಣಾ ಸಂಸ್ಥೆ ಪತ್ರಿಕಾಗೋಷ್ಠಿಯನ್ನು ನಡೆಸಿ ಇದೊಂದು ಹೆಣ್ಣು ಹಾವು, ಜೊತೆಯಲ್ಲಿ ಈ ಹಾವು ಗರ್ಭಿಣಿಯಾಗಿದೆ. ಇದರ ಹೊಟ್ಟೆಯಲ್ಲಿ ಮೊಟ್ಟೆ ಇದೆ ಅದಕ್ಕೆ ಇಷ್ಟು ಗಾತ್ರವನ್ನು ಹೊಂದಿದೆ ಎಂದು ಹೇಳಿದ್ದಾರೆ. ಇದನ್ನು ನಾವು ಪರೀಕ್ಷೆ ಮಾಡಿದಾಗ 122 ಮೊಟ್ಟೆಗಳನ್ನು ಹೊಂದಿದೆ ಎಂದು ತಿಳಿದಿದೆ. ಈ ಹಾವು ತನ್ನ ದೇಹದ ಆರೋಗ್ಯವನ್ನು ವೃದ್ಧಿಸಿಕೊಳ್ಳ ಹೆಚ್ಚಿನ ಮತ್ತು ಗರ್ಭಿಣಿಯಾಗಿರುವ ಕಾರಣ ಯಾರಿಗೂ ಹಾನಿಯನ್ನು ಮಾಡಿಲ್ಲ. ಜೊತೆಯಲ್ಲಿ ಇದಕ್ಕೆ ತುಂಬಾ ದೂರು ಚಲಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಹೆಬ್ಬಾವುಗಳು ಈ ಸಮಯದಲ್ಲಿ ತನ್ನ ಜೀರ್ಣಕ್ರಿಯೆಗಾಗಿ ಕೆಲವೊಂದು ಆಹಾರಗಳನ್ನು ಮಾತ್ರ ಸೇವನೆ ಮಾಡುತ್ತದೆ, ಇದು ತನ್ನ ಗರ್ಭ ವ್ಯವಸ್ಥೆಯಲ್ಲಿ ಬಿಳಿ ಬಾಲದ ಜಿಂಕೆಗಳನ್ನು ಮತ್ತು ಅಳಿವಿನಂಚಿನಲ್ಲಿರುವ ಫ್ಲೋರಿಡಾ ಪ್ಯಾಂಥರ್ನಗಳನ್ನು ಮಾತ್ರ ಸೇವನೆ ಮಾಡುತ್ತದೆ. ಆಗ್ನೇಯ ಏಷ್ಯಾದ ಫ್ಲೋರಿಡಾ ಕಾಡಿನಲ್ಲಿ ಇಂತಹ ಹಾವುಗಳು ಸಿಗಲು ಸಾಧ್ಯ ಮತ್ತು ಆ ಭಾಗದಲ್ಲಿ ಪರಭಕ್ಷಕಗಳು ಕೂಡ ಸಿಗುತ್ತದೆ. ಇದರ ಬೆಳವಣೆ ಕೂಡ ಇಂತಹ ಆಹಾರಗಳಿಂದ ಮಾತ್ರ ಆಗಬೇಕು ಮತ್ತು ಇವುಗಳಲ್ಲಿ ಆಕ್ರಮಣಕಾರಿ ಪ್ರಭೇಧಗಳನ್ನು ನೀವು ಕಾಣಬಹುದು. ಇದರ ಜೊತೆಗೆ ಇವುಗಳು ಪರಿಸರಗಳಿಗೆ ಅನುಸರವಾಗಿ ಬದಲಾವಣೆ ಕೂಡ ಆಗುತ್ತದೆ.
Biologists in Florida just caught an 18-foot long, 215-pound python — the biggest of its kind ever recorded in the state. https://t.co/O2MalXTu38 pic.twitter.com/ZiQTdppfHP
— CNN (@CNN) June 23, 2022
ಈ ಆಕ್ರಮಣಕಾರಿ ಜಾತಿಯ ಹಾವುಗಳು ಯುಎಸ್ ನಲ್ಲಿ 1970ರಲ್ಲಿ ವಿಲಕ್ಷಣ ಸಾಕುಪ್ರಾಣಿಗಳಾಗಿ ಕಾಣುಬಹುದು. ಇದು ಅಲ್ಲಿ ಮೀರಿ ಕ್ಷಿಪ್ರ ಸಂತಾನೋತ್ಪತ್ತಿಗೆ ಹೆಸರುವಾಸಿಯಾಗಿದೆ, ಮತ್ತು ಇದು ಅಲ್ಲಿನ ಕಾಡುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣುತ್ತಿತ್ತು. ಅದರಲ್ಲೂ ಹೆಣ್ಣು ಹೆಬ್ಬಾವುಗಳು ಹೆಚ್ಚು ಅಪಾಯಕರಿ ಹಾವುಗಳು. ಇದರ ಸಂತಾನೋತ್ಪತ್ತಿ ಚಕ್ರವನ್ನು ನಾಶ ಮಾಡಲು ಪ್ರಯತ್ನ ಮಾಡಿದರೂ ಫಲಶುತ್ರಿ ಆ ಕಾಲದಲ್ಲಿ ಕಂಡಿರಲಿಲ್ಲ, ಆದರೆ ಇದೀಗ ಜಾತಿಯ ಹಾವುಗಳು ಕಾಣಲು ಸಿಗುವುದು ಅಪರೂಪವಾಗಿದೆ.
ಈ ಸುದ್ದಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ : ಹೆಂಡತಿಯ ಜೊತೆ ಆಕೆಗೆ ಕಚ್ಚಿದ ಹಾವನ್ನೂ ಆಸ್ಪತ್ರೆಗೆ ಹೊತ್ತೊಯ್ದ ಗಂಡ; ಕಾರಣ ಕೇಳಿ ಶಾಕ್ ಆಗ್ಬೇಡಿ!
ಈ ಹಾವುವನ್ನು ಪತ್ತೆ ಮಾಡಲು ತಂಡವು 2013ರಿಂದ ಕಾರ್ಯನಿರ್ವಹಿಸುತ್ತಿದೆ. ಇದೀಗ ಈ ಹೆಣ್ಣು ಹಾವು ಪತ್ತೆ ಆಗಿದೆ. ಅಂದಾಜು 84 ಕೆಜಿ ತೂಕವನ್ನು ಹೊಂದಿತ್ತು, ಇದು ಫ್ಲೋರಿಡಾದಲ್ಲಿ ಸೆರೆಹಿಡಿಯಲಾದ ಅತ್ಯಂತ ಭಾರವಾದ ಹೆಬ್ಬಾವು ಆಗಿತ್ತು.