ಆನ್‌ಲೈನ್ ಡೇಟಿಂಗ್ ಕಾಲದಲ್ಲಿ ಜನರಿಗೆ ಪ್ರೇಮ ಪತ್ರ ಬರೆಯಲು ಪ್ರೋತ್ಸಾಹಿಸುತ್ತಿದೆ ಈ ನಗರ! ಕಾರಣ ಏನು ಗೊತ್ತಾ?
ಜಪಾನ್‌ನ ಮಿಯಾಜಾಕಿ ನಗರವು ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಲು ಪ್ರೇಮ ಪತ್ರ ಬರೆಯಲು ಪ್ರೋತ್ಸಾಹಿಸಲಾಗುತ್ತಿದೆ. ಇದರ ಹಿಂದೆ ಬಲವಾದ ಕಾರಣವೊಂದು ಇದೆ. ಅದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.
ಆಧುನಿಕರಣದತ್ತ ಸಾಗುತ್ತಿರುವ ಈ ಜಗತ್ತಿನಲ್ಲಿ ಎಲ್ಲವೂ ಆನ್‌ಲೈನ್ ಸಂಪರ್ಕವಾಗಿ ಪರಿಣಮಿಸಿದೆ. ಸಂಗಾತಿಯನ್ನು ಹುಡುಕಲು ಆನ್‌ಲೈನ್ ಡೇಟಿಂಗ್ ಅಪ್ಲಿಕೇಶನ್ಗಳು ಲಭ್ಯ ಇವೆ. ಹೆಚ್ಚಿನವರು ಈ ಜಾಲತಾಣಗಳನ್ನು ಬಳಕೆ ಮಾಡಿಕೊಂಡು ಸಂಗಾತಿಯನ್ನು ಆಯ್ಕೆ ಮಾಡುತ್ತಾರೆ. ಆದರೆ ಜಪಾನ್(Japan)ನ ಮಿಯಾಜಾಕಿ ನಗರವು ಇದಕ್ಕೆ ತದ್ವಿರುದ್ದವೆಂಬಂತೆ, ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಲು ಪ್ರೇಮ ಪತ್ರ (Love Letter) ಬರೆಯಲು ಪ್ರೋತ್ಸಾಹಿಸಲಾಗುತ್ತಿದೆ.
ಈ ಮ್ಯಾಚ್‌ಮೇಕಿಂಗ್ ಅಭಿಯಾನವು ಜನನ ಪ್ರಮಾಣವನ್ನು ಹೆಚ್ಚಿಸಲು ಸ್ಥಳೀಯ ಅಧಿಕಾರಿಗಳ ಪ್ರಯತ್ನಗಳ ಒಂದು ಭಾಗವಾಗಿದೆ ಎಂದು ವರದಿಗಳಲ್ಲಿ ಹೇಳಲಾಗಿದೆ. ಇಂಥ ಒಂದು ಯೋಜನೆ ಜಾರಿಯಾಗಿ 2 ವರ್ಷಗಳಾಗಿದ್ದು, ಈವರೆಗೆ ಯಾವುದೇ ಮದುವೆಗಳು ನಡೆದಿಲ್ಲ. ವರದಿಯ ಪ್ರಕಾರ, ಸರಿಸುಮಾರು 450 ಜನರು ಇಲ್ಲಿಯವರೆಗೆ ಸೈನ್ಅಪ್ ಮಾಡಿದ್ದಾರೆ. ಇದು ನಗರದ ಆರಂಭಿಕ ಅಂದಾಜಿನ ಎರಡು ಪಟ್ಟು ಹೆಚ್ಚು ಎನ್ನಲಾಗುತ್ತಿದೆ. ಪತ್ರ ವ್ಯವಹಾರ ಮಾಡಿದವರ ಪೈಕಿ ಶೇ.70ರಷ್ಟು ಮಂದಿ 20 ಅಥವಾ 30ರ ಹರೆಯದವರಾಗಿದ್ದಾರೆ.
ಇದನ್ನೂ ಓದಿ: Viral Video: ಮದುವೆಯಲ್ಲಿ ಗೆಳೆಯನನ್ನೇ ಶೂಟ್ ಮಾಡಿದ ಮದುಮಗ; ಹಸೆಮಣೆ ಏರಬೇಕಾದ ವರ ಜೈಲು ಸೇರಿದ
View this post on Instagram
ಯೋಜನೆಯನ್ನು ನಡೆಸಲು ನಿಯೋಜಿಸಲಾದ ಸ್ಥಳೀಯ ಸಲಹಾ ಸಂಸ್ಥೆಯ ಮುಖ್ಯಸ್ಥ ರೈ ಮಿಯಾಟಾ ಅವರು ಏಜೆನ್ಸ್ ಫ್ರಾನ್ಸ್-ಪ್ರೆಸ್ ಜೊತೆ ಮಾತನಾಡಿ, “ಇದು ಆನ್‌ಲೈನ್ ಡೇಟಿಂಗ್‌ಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಆದರೆ ಪತ್ರ ಬರೆಯುವವರು ಮತ್ತು ಓದುವವರು ಸಂವಹನದಲ್ಲಿರುವ ವ್ಯಕ್ತಿಯನ್ನು ಊಹಿಸಲು ಪ್ರೇರೇಪಿಸುತ್ತದೆ. ನೀವು ಪ್ರತಿಯೊಂದು ವಿಷಯವನ್ನು ಪ್ರಾಮಾಣಿಕವಾಗಿ ಮತ್ತು ಕಾಳಜಿಯಿಂದ ಬರೆಯುತ್ತೀರಿ, ಬರೆಯುತ್ತಿರುವ ವ್ಯಕ್ತಿಯ ಬಗ್ಗೆ ಆಳವಾಗಿ ಯೋಚಿಸುತ್ತಾರೆ. ಇದು ಅಕ್ಷರಗಳನ್ನು ತುಂಬಾ ಶಕ್ತಿಯುತವಾಗಿಸುತ್ತದೆ” ಎಂದಿದ್ದಾರೆ.
ಪತ್ರ ಬರೆದ ಮಾತ್ರಕ್ಕೆ ಸಂಗಾತಿ ಸಿಗುತ್ತದೆ ಎಂದಲ್ಲ, ವ್ಯಕ್ತಿಯು ಬರೆದ ಪತ್ರದಲ್ಲಿ ಹಂಚಿಕೊಂಡ ಮಾಹಿತಿ (ಪುಸ್ತಕಗಳು, ಚಲನಚಿತ್ರಗಳು ಇತ್ಯಾದಿ)ಯ ತೂಕದ ಮೇಲೆ ಸಂಗಾತಿ ಆಯ್ಕೆಯಾಗುತ್ತದೆ. ಜಪಾನ್‌ನ ಮೈನಿಚಿ ಶಿಂಬುನ್ ಎಂಬ ಪತ್ರಿಕೆಯ ಪ್ರಕಾರ, ಜನರು ತಮ್ಮ ಹೆಸರು ಮತ್ತು ವಿಳಾಸವನ್ನು ವಿನಿಮಯ ಮಾಡಿಕೊಳ್ಳದೆಯೇ ಐದು ಪತ್ರಗಳನ್ನು ಕಳುಹಿಸಬಹುದು ಮತ್ತು ಸ್ವೀಕರಿಸಬಹುದು. ಅವರು ಭೇಟಿಯಾಗಲು ಬಯಸಿದರೆ ಸಲಹಾ ಸಂಸ್ಥೆಯು ಅವರಿಗೆ ಸಂಪರ್ಕ ವಿವರಗಳನ್ನು ಒದಗಿಸಬಹುದು.
View this post on Instagram
ಈ ಯೋಜನೆಯ ಹಿಂದೆ ಜನಸಂಖ್ಯೆಯನ್ನು ಹೆಚ್ಚಿಸುವ ಕಾರಣ ಕೂಡ ಇದೆ. ಜಪಾನ್ ದೇಶವು ಕಡಿಮೆ ಜನನ ಪ್ರಮಾಣ ಹೊಂದಿರುವುದರಿಂದ ದೇಶದ ಜನಸಂಖ್ಯೆ ಕ್ಷೀಣಿಸುತ್ತಿದೆ. ಈ ನಿಟ್ಟಿನಲ್ಲಿ ಯುವಜನರನ್ನು ಮದುವೆಗೆ ಹುರಿದುಂಬಿಸುವ ಮೂಲಕ ದೇಶದಲ್ಲಿ ಜನನ ಪ್ರಮಾಣ ಹೆಚ್ಚಿಸುತ್ತಾ ದೇಶದ ಜನಸಂಖ್ಯೆಯನ್ನು ಏರಿಸುವ ಉದ್ದೇಶವನ್ನು ಹೊಂದಲಾಗಿದೆ.
ಇದನ್ನೂ ಓದಿ: Viral News: ಹೆಂಡತಿಯ ಜೊತೆ ಆಕೆಗೆ ಕಚ್ಚಿದ ಹಾವನ್ನೂ ಆಸ್ಪತ್ರೆಗೆ ಹೊತ್ತೊಯ್ದ ಗಂಡ; ಕಾರಣ ಕೇಳಿ ಶಾಕ್ ಆಗ್ಬೇಡಿ!
Published On - 4:06 pm, Fri, 24 June 22