Viral Video: ಮಾವಿನ ಮರವೇರಿ ಕೊಂಬೆಗಳಲ್ಲಿ ತಗಲಾಕೊಂಡ ಚಿರತೆ! ಮುಂದೇನಾಯ್ತು ಗೊತ್ತಾ?
ಸಾಹಸದ ರೀತಿಯಲ್ಲಿ ದೊಡ್ಡ ಮಾವಿನ ಮರವೊಂದಕ್ಕೆ ಹತ್ತಿದ ಚಿರತೆಯೊಂದು ಅದರ ಕೊಂಬೆಗಳಲ್ಲಿ ಸಿಕ್ಕಿಹಾಕಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಕೆಲವೊಂದು ಮರಗಳಲ್ಲಿ ಅಡ್ಡದಿಡ್ಡಿ ಕೊಂಬೆಗಳು ಇರುತ್ತವೆ. ಇಂಥ ಮರಗಳಿಗೆ ಮನುಷ್ಯರು ಮಾತ್ರವಲ್ಲ ಪ್ರಾಣಿಗಳು ಕೂಡ ಹತ್ತಿದರೆ ಇಳಿಯುವುದು ಕಷ್ಟ. ಅದೇ ರೀತಿ ಸಾಹಸದ ರೀತಿಯಲ್ಲಿ ದೊಡ್ಡ ಮಾವಿನ ಮರವೊಂದಕ್ಕೆ ಹತ್ತಿದ ಚಿರತೆ(Leopard)ಯೊಂದು ಅದರ ಕೊಂಬೆಗಳಲ್ಲಿ ಸಿಕ್ಕಿಹಾಕಿಕೊಂಡ ವಿಡಿಯೋ (Video) ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral) ಆಗುತ್ತಿದೆ.
ಪಶ್ಚಿಮ ಬಂಗಾಳದ ಐಎಫ್‌ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ಚಿರತೆಯ ಸಾಹಸದ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, “ಜೀವನದಲ್ಲಿ ಈ ಮಟ್ಟದ ಪ್ರೇರಣೆ ಬೇಕು !!” ಎಂದು ಶೀರ್ಷಕೆ ನೀಡಿದ್ದಾರೆ. ಹಳ್ಳಿಯ ಜೀವನವನ್ನು ನೋಡುತ್ತಾ, ಬಹುಶಃ ಆ ನೋಟವನ್ನು ಮೆಚ್ಚಿಸಲು ಸ್ವಲ್ಪ ಶಾಂತಿಯನ್ನು ಕಂಡುಕೊಳ್ಳಲು ಕಾಡು ಬೆಕ್ಕು ಎಷ್ಟು ಮೇಲೇರಿದೆ ನೋಡಿ ಎಂದು ಕಸ್ವಾನ್ ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ: Viral News: ಹೆಂಡತಿಯ ಜೊತೆ ಆಕೆಗೆ ಕಚ್ಚಿದ ಹಾವನ್ನೂ ಆಸ್ಪತ್ರೆಗೆ ಹೊತ್ತೊಯ್ದ ಗಂಡ; ಕಾರಣ ಕೇಳಿ ಶಾಕ್ ಆಗ್ಬೇಡಿ!
ಈ ಬಗ್ಗೆ ಸರಣಿ ಟ್ವೀಟ್ ಮಾಡಿ ಮಾಹಿತಿಯೊಂದಿಗೆ ಫೋಟೋ ಹಂಚಿಕೊಂಡ ಕಸ್ವಾನ್, ಚಿರತೆಯು ಮರದ ಮೇಲೆ ದೀರ್ಘಕಾಲ ಸಿಲುಕಿಕೊಂಡಿತ್ತು ಮತ್ತು ರಕ್ಷಣಾ ಕಾರ್ಯಾಚರಣೆಯು ಎಂಟು ಗಂಟೆಗಳ ಕಾಲ ನಡೆಯಿತು ಎಂದರು. ಅರಣ್ಯ ಅಧಿಕಾರಿಗಳು ಮತ್ತು ಅಗ್ನಿಶಾಮಕ ದಳದವರು ಪ್ರಾಣಿಗೆ ಸಹಾಯ ಮಾಡಲು ಕೆಲಸ ಮಾಡುತ್ತಿರುವಾಗ ಮರದ ಬಳಿ ಅಪಾರ ಜನಸಮೂಹ ಜಮಾಯಿಸಿದ್ದಾರೆ.
“ಹೆಚ್ಚು ಜನನಿಬಿಡ ಪ್ರದೇಶದಲ್ಲಿ ಇಂಥ ಸಮಯದಲ್ಲಿ ಜನಸಮೂಹ ನಿರ್ವಹಣೆಯ ಅಗತ್ಯವಿದೆ. ನಮ್ಮ ತಂಡಗಳು ಅದ್ಭುತ ಕೆಲಸ ಮಾಡಿದೆ” ಎಂದು ಕಸ್ವಾನ್ ಬರೆದುಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ನೆಟ್ಟಿಗರು, ಮರದ ಮೇಲಿರುವ ಪ್ರಾಣಿಯನ್ನು ನೋಡಿ ಅಚ್ಚರಿಪಟ್ಟಿದ್ದಾರೆ. ಇನ್ನೂ ಕೆಲವರು ಪ್ರಾಣಿಯು ಬಹುಶಃ ಬೇಸಿಗೆಯ ಹಣ್ಣನ್ನು ಆನಂದಿಸಲು ಬಯಸಿದೆ ಎಂದು ತಮಾಷೆ ಮಾಡಿದ್ದಾರೆ. ಆದರೆ ಇತರರು ಪ್ರಾಣಿಯನ್ನು ರಕ್ಷಿಸಿದ್ದಕ್ಕಾಗಿ ಅರಣ್ಯ ಅಧಿಕಾರಿಗಳಿಗೆ ಧನ್ಯವಾದ ಹೇಳಿದ್ದಾರೆ.
ಇದನ್ನೂ ಓದಿ: Viral Video: 122 ಮೊಟ್ಟೆಗಳೊಂದಿಗೆ, 84 ಕೆಜಿಯ ಬರ್ಮೀಸ್ ಹೆಬ್ಬಾವನ್ನು ಪತ್ತೆ ಹಚ್ಚಿದ ಫ್ಲೋರಿಡಾ ಜೀವಶಾಸ್ತ್ರಜ್ಞರು
Published On - 4:42 pm, Fri, 24 June 22