AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: ಹೆಂಡತಿಯ ಜೊತೆ ಆಕೆಗೆ ಕಚ್ಚಿದ ಹಾವನ್ನೂ ಆಸ್ಪತ್ರೆಗೆ ಹೊತ್ತೊಯ್ದ ಗಂಡ; ಕಾರಣ ಕೇಳಿ ಶಾಕ್ ಆಗ್ಬೇಡಿ!

ಉತ್ತರ ಪ್ರದೇಶದ ಉನ್ನಾವೋದಲ್ಲಿ ಮಹಿಳೆಯೊಬ್ಬರಿಗೆ ಮನೆಯಲ್ಲಿ ಹಾವು ಕಚ್ಚಿತ್ತು. ಆಗ ಆಕೆಯ ಪತಿಯೇ ಆ ಸರ್ಪವನ್ನು ಹಿಡಿದು ಬಾಟಲಿಗೆ ಹಾಕಿಕೊಂಡು ಹೆಂಡತಿ ಮತ್ತು ಹಾವನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾನೆ.

Viral News: ಹೆಂಡತಿಯ ಜೊತೆ ಆಕೆಗೆ ಕಚ್ಚಿದ ಹಾವನ್ನೂ ಆಸ್ಪತ್ರೆಗೆ ಹೊತ್ತೊಯ್ದ ಗಂಡ; ಕಾರಣ ಕೇಳಿ ಶಾಕ್ ಆಗ್ಬೇಡಿ!
ಹಾವುImage Credit source: India.com
TV9 Web
| Edited By: |

Updated on: Jun 24, 2022 | 3:46 PM

Share

ಉನ್ನಾವೋ: ಮನೆಯಲ್ಲಿ ತನ್ನ ಹೆಂಡತಿಗೆ ಹಾವು (Snake) ಕಚ್ಚಿದ ವಿಷಯ ತಿಳಿದು ಕಂಗಾಲಾದ ಗಂಡ ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೊರಟಿದ್ದಾನೆ. ಅಷ್ಟರಲ್ಲೇ ಆತನ ತಲೆಯಲ್ಲೊಂದು ಪ್ರಶ್ನೆ ಮೂಡಿದೆ. ಕೂಡಲೇ ಮನೆಯೊಳಗೆ ಹೋದ ಆತ ಬಾಟಲಿಯಲ್ಲಿ ತನ್ನ ಹೆಂಡತಿಗೆ ಕಚ್ಚಿದ್ದ ಹಾವನ್ನು ಹಾಕಿಕೊಂಡು, ಆ ಬಾಟಲಿಯನ್ನು ಬಟ್ಟೆಯಲ್ಲಿ ಬಿಗಿಯಾಗಿ ಕಟ್ಟಿಕೊಂಡು ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾನೆ. ಹೆಂಡತಿಯ ಜೊತೆ ಆ ಹಾವನ್ನು ಕೂಡ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಕ್ಕೆ ಕಾರಣವೇನಿರಬಹುದು ಎಂದು ಯೋಚನೆ ಮಾಡುತ್ತಿದ್ದೀರಾ? ಈ ಕಾರಣ ಕೇಳಿದರೆ ನಗುತ್ತೀರೋ ಅಥವಾ ಶಾಕ್ ಆಗುತ್ತೀರೋ ಎಂಬ ಆಯ್ಕೆ ನಿಮಗೇ ಬಿಟ್ಟಿದ್ದು!

ಉತ್ತರ ಪ್ರದೇಶದ ಉನ್ನಾವೋದಲ್ಲಿ ಮಹಿಳೆಯೊಬ್ಬರಿಗೆ ಮನೆಯಲ್ಲಿ ಹಾವು ಕಚ್ಚಿತ್ತು. ಆಗ ಆಕೆಯ ಪತಿಯೇ ಆ ಸರ್ಪವನ್ನು ಹಿಡಿದು ಬಾಟಲಿಗೆ ಹಾಕಿದ್ದಾನೆ. ಬಾಟಲಿಯಲ್ಲಿ ಹಾವನ್ನು ಹಾಕಿಕೊಂಡು ಹೆಂಡತಿ ಮತ್ತು ಹಾವನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾನೆ. ಆ ಮಹಿಳೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: Viral Video : ಹಾವುಗಳ ಸರಸ ಸಲ್ಲಾಪ ವಿಡಿಯೋ ವೈರಲ್ ! ನೆಟ್ಟಿಗರು ಹೇಳಿದ್ದೇನು ಗೊತ್ತಾ?

ಆಕೆಯ ಪತಿ ರಾಮೇಂದ್ರ ಯಾದವ್ ತಮ್ಮ ಜೊತೆ ಹಾವನ್ನು ಕೂಡ ತಂದಿದ್ದನ್ನು ನೋಡಿ ಅಚ್ಚರಿಗೊಂಡ ವೈದ್ಯರು ಆಸ್ಪತ್ರೆಗೆ ಹಾವನ್ನು ಯಾಕೆ ತಂದಿದ್ದು ಎಂದು ಕೇಳಿದ್ದಾರೆ. ನನ್ನ ಹೆಂಡತಿಗೆ ಯಾವ ಹಾವು ಕಚ್ಚಿದೆ? ಎಂದು ನೀವು ನನ್ನನ್ನು ಕೇಳಿದರೆ ನನಗೆ ಆ ಹಾವಿನ ಬಗ್ಗೆ ಏನೂ ಗೊತ್ತಿಲ್ಲದ ಕಾರಣ ನೀವೇ ಹಾವನ್ನು ನೋಡಿಕೊಂಡು ಚಿಕಿತ್ಸೆ ನೀಡಲು ಅನುಕೂಲವಾಗಬಹುದು ಎಂದು ನನ್ನ ಹೆಂಡತಿಗೆ ಕಚ್ಚಿದ ಹಾವನ್ನು ಕೂಡ ತಂದಿದ್ದೇನೆ ಎಂದು ಆತ ಉತ್ತರಿಸಿದ್ದಾನೆ. ಇದನ್ನು ಕೇಳಿ ವೈದ್ಯರು ಶಾಕ್ ಆಗಿದ್ದಾರೆ.

ಉನ್ನಾವೋದ ಮಖಿ ಪೊಲೀಸ್ ವೃತ್ತದ ಅಫ್ಜಲ್ ನಗರ ಪ್ರದೇಶದಲ್ಲಿ ಇಂದು ಮುಂಜಾನೆ ಈ ಘಟನೆ ನಡೆದಿದೆ. ಆತನ ಪತ್ನಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರ ಅರಣ್ಯ ಪ್ರದೇಶದಲ್ಲಿ ಹಾವನ್ನು ಬಿಡುವುದಾಗಿ ಯಾದವ್ ನಂತರ ಸುದ್ದಿಗಾರರಿಗೆ ತಿಳಿಸಿದ್ದಾರೆ.