AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕನಸಿನಲ್ಲಿ ಹಾವುಗಳು ಕಾಣಿಸಿಕೊಂಡರೆ ಏನರ್ಥ? ಒಳ್ಳೆಯದಾ ಕೆಟ್ಟದಾ?

ಕೆಲವರು ಹಾವುಗಳಿಗೆ ಸಂಬಂಧಿಸಿದ ಕನಸುಗಳನ್ನು ಮಂಗಳಕರವೆಂದು ಪರಿಗಣಿಸಿದರೆ, ಕೆಲವರು ಅಶುಭವೆಂದು ನಂಬುತ್ತಾರೆ. ಹೀಗಾಗಿ ಕನಸಿನಲ್ಲಿ ಹಾವುಗಳು ಕಾಣಿಸಿಕೊಂಡರೆ ಏನರ್ಥ ಎಂದು ಈ ಆರ್ಟಿಕಲ್ ನಲ್ಲಿ ತಿಳಿಸಲಾಗಿದೆ.

ಕನಸಿನಲ್ಲಿ ಹಾವುಗಳು ಕಾಣಿಸಿಕೊಂಡರೆ ಏನರ್ಥ? ಒಳ್ಳೆಯದಾ ಕೆಟ್ಟದಾ?
ಸಾಂದರ್ಭಿಕ ಚಿತ್ರ
TV9 Web
| Updated By: ಆಯೇಷಾ ಬಾನು|

Updated on: May 06, 2022 | 7:30 AM

Share

ಪ್ರತಿಯೊಬ್ಬ ವ್ಯಕ್ತಿಯು ರಾತ್ರಿ ಮಲಗಿದ್ದಾಗ ಕನಸು ಕಾಣುವುದು ಸಹಜ. ಆದ್ರೆ ಪ್ರತಿಯೊಂದು ಕನಸಿಗೂ ಒಂದೊಂದು ಅರ್ಥವಿದೆ. ಈ ಕನಸುಗಳು ಭವಿಷ್ಯದಲ್ಲಿ ನಡೆಯುವ ಅಥವಾ ಮುಂಬರುವ ಸಮಸ್ಯೆ, ಶುಭಗಳ ಮುಂಸೂಚನೆಯಾಗಿರುತ್ತೆ. ಹೀಗಾಗಿ ಯಾವ ಕನಸುಗಳನ್ನೂ ನಾವು ಕಡೆಗಣಿಸುವಂತಿಲ್ಲ. ಅದರಲ್ಲೂ ಪದೇ ಪದೇ ಬರುವ ಕನಸುಗಳು ಮಹತ್ತರ ಸಂದೇಶವನ್ನು ಹೇಳಲು ಬಯಸುತ್ತಿರುತ್ತವೆ. ಕೆಲವರು ಹಾವುಗಳಿಗೆ ಸಂಬಂಧಿಸಿದ ಕನಸುಗಳನ್ನು ಮಂಗಳಕರವೆಂದು ಪರಿಗಣಿಸಿದರೆ, ಕೆಲವರು ಅಶುಭವೆಂದು ನಂಬುತ್ತಾರೆ. ಹೀಗಾಗಿ ಕನಸಿನಲ್ಲಿ ಹಾವುಗಳು ಕಾಣಿಸಿಕೊಂಡರೆ ಏನರ್ಥ ಎಂದು ಈ ಆರ್ಟಿಕಲ್ ನಲ್ಲಿ ತಿಳಿಸಲಾಗಿದೆ.

ಕನಸಿನಲ್ಲಿ ಹಾವು ದಾಳಿ ಮಾಡಿದರೆ ಏನರ್ಥ ಸ್ವಪ್ನ ಶಾಸ್ತ್ರವು ಒಂದು ಅದ್ಭುತ ಶಾಸ್ತ್ರ. ಇದರಲ್ಲಿ ಮನುಷ್ಯನಿಗೆ ಬೀಳುವ ಕನಸಿನ ಅರ್ಥವನ್ನು ತಿಳಿಸಲಾಗಿದೆ. ಈ ಸ್ವಪ್ನ ಶಾಸ್ತ್ರದ ಪ್ರಕಾರ, ಹಾವು ನಿಮ್ಮ ಕನಸಿನಲ್ಲಿ ದಾಳಿ ಮಾಡಿದರೆ ಅಥವಾ ಬೇರೆಯವರ ಮೇಲೆ ಆಕ್ರಮಣ ಮಾಡಿದಂತೆ ಕಂಡು ಬಂದರೆ ಅದು ನಿಮ್ಮ ಜೀವನದಲ್ಲಿ ಬರುವ ದೊಡ್ಡ ತೊಂದರೆಗಳ ಸಂಕೇತವಾಗಿದೆ. ಇನ್ನು ಹಾವು, ಮುಂಗುಸಿಗಳ ಹೋರಾಟವು ಕನಸಿನಲ್ಲಿ ಬಂದರೆ ಅದು ನಿಮ್ಮ ಜೀವನದಲ್ಲಿ ಎದುರಾಗಬಹುದಾದ ಕಾನೂನು ತೊಂದರೆಗಳ ಸಂಕೇತವಾಗಿದೆ ಎಂದು ನಂಬಲಾಗಿದೆ.

ಕನಸಲ್ಲಿ ಜೋಡಿ ಹಾವು ಕಂಡರೆ ಏನರ್ಥ ಕನಸಿನಲ್ಲಿ ಜೋಡಿ ಹಾವು ಮತ್ತು ಸರ್ಪ ಕಾಣಿಸಿಕೊಂಡರೆ ಅದು ಅಶುಭದ ಸಂಕೇತ. ಪಿತೃಗಳ ಕೋಪದಿಂದ ಈ ಕನಸು ಬರುತ್ತದೆ ಎನ್ನುವ ನಂಬಿಕೆಯಿದೆ. ಇಂತಹ ಪರಿಸ್ಥಿತಿಯಲ್ಲಿ, ನಾವು, ಎಂದಿಗೂ ಪೂರ್ವಜರ ಕಡೆಗೆ ತಪ್ಪು ಆಲೋಚನೆಗಳನ್ನು ಮಾಡಬಾರದು ಮತ್ತು ಇಂತಹ ಕನಸು ಕಂಡಾಗಲೆಲ್ಲಾ ಆ ದಿನದಿಂದ ಪೂರ್ವಜರ ಹೆಸರಿನಲ್ಲಿ ದೀಪ ಬೆಳಗಬೇಕು.

ಕನಸಿನಲ್ಲಿ ಹಾವು ಕಚ್ಚಿದರೆ ಏನರ್ಥ ಕನಸಿನಲ್ಲಿ ಹಾವು ಕಚ್ಚಿ ಇಡೀ ದೇಹವು ವಿಷದಿಂದ ಕೂಡಿರುವಂತೆ ಭಾಸವಾದ್ರೆ ಅದರ ಅರ್ಥ ನೀವು ಯಾವುದೋ ಕೆಟ್ಟ ವ್ಯಕ್ತಿಯೊಡನೆ ಸಂಬಂಧವನ್ನು ಬೆಳೆಸಿದ್ದೀರಿ ಎಂದು. ನೀವು ಯಾವುದಾದರೂ ಓರ್ವ ಕೆಟ್ಟ ವ್ಯಕ್ತಿಯೊಡನೆ ಅಥವಾ ನಿಮಗೆ ಕೆಟ್ಟದ್ದನ್ನೇ ಬಯಸುವ ವ್ಯಕ್ತಿಯೊಡನೆ ಸ್ನೇಹವನ್ನು ಬೆಳೆಸಿದ್ದರೆ ನಿಮಗೆ ಈ ರೀತಿಯಾಗಿ ಕನಸು ಬೀಳುತ್ತದೆ.

ಕನಸಿನಲ್ಲಿ ಹುತ್ತದಿಂದ ಹಾವು ಹೊರಬರುವಂತಾದ್ರೆ? ಕನಸಿನಲ್ಲಿ ಉದ್ದವಾದ ಅಥವಾ ಹುತ್ತದಿಂದ ಹಾವು ಬರುತ್ತಿರುವುದನ್ನು ನೋಡಿದರೆ ಅದು ಮುಂಬರುವ ಕೆಲವು ದೊಡ್ಡ ತೊಂದರೆಗಳನ್ನು ಎದುರಿಸಬೇಕಾಗಬಹುದು ಎಂಬ ಸೂಚನೆ. ಹುತ್ತದಿಂದ ಹಾವು ಹೊರಬರುವುದನ್ನು ನೋಡಿದರೆ, ಜನರು ಉದ್ಯೋಗ ಅಥವಾ ವ್ಯವಹಾರದಲ್ಲಿ ನಷ್ಟವನ್ನು ಅನುಭವಿಸಬಹುದು ಎಂದರ್ಥ.

ಹಾವು ಮೇಲಿಂದ ಬೀಳುತ್ತಿರುವುದು ಕಂಡುಬಂದರೆ ಜಾಗರೂಕರಾಗಿರಿ ಕನಸಿನಲ್ಲಿ ಹಾವು ಮೇಲಿನಿಂದ ಬೀಳುವುದನ್ನು ನೋಡಿದರೆ ಅದು ಒಳ್ಳೆಯ ಸಂಕೇತವಲ್ಲ. ಈ ಕನಸು ಮುಂಬರುವ ಸಮಯದಲ್ಲಿ ಕೆಲವು ಗಂಭೀರ ಅನಾರೋಗ್ಯದ ಸಂಕೇತವಾಗಿದೆ ಎಂದು ನಂಬಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಈ ಕನಸು ಕಂಡಾಗಲೆಲ್ಲಾ, ತಕ್ಷಣವೇ ಭಗವಾನ್‌ ಶಿವನನ್ನು ನೆನಪಿಸಿಕೊಳ್ಳುವುದು ಮತ್ತು ‘ಓಂ ನಮಃ ಶಿವಾಯ’ ಎನ್ನುವ ಮಂತ್ರವನ್ನು 11, 21, 51 ಮತ್ತು 101 ಬಾರಿ ಜಪಿಸುವುದು ಅವಶ್ಯಕ. ಇದು ನಿಮ್ಮ ಕನಸುಗಳ ದುಷ್ಪರಿಣಾಮಗಳನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ.

ಹಾವಿನ ಶುಭ ಸ್ವಪ್ನಗಳು ಹಾವು ದೇವಸ್ಥಾನದಲ್ಲಿರುವಂತೆ ಕನಸಿನಲ್ಲಿ ಕಂಡರೆ ಇದರ ಅರ್ಥ ಕೆಲ ದಿನಗಳಲ್ಲಿ ನಿಮ್ಮ ಇಷ್ಟಾರ್ಥ ಸಿದ್ಧಿಸುತ್ತದೆ ಎಂದು. ಹಾವು ಮರದ ಮೇಲೆ ಹತ್ತುತ್ತಿರುವಂತೆ ಕನಸಿನಲ್ಲಿ ಕಂಡರೆ ಮುಂಬರುವ ದಿನಗಳಲ್ಲಿ ಬರಬೇಕಿದ್ದ ಹಣ ವಾಪಸ್ ಬರುತ್ತದೆ ಎಂಬ ಸಂಕೇತವನ್ನು ಸೂಚಿಸುತ್ತದೆ. ಸ್ವಪ್ನದಲ್ಲಿ ಹಾವು ಶಿವಲಿಂಗವನ್ನು ಸುತ್ತಿಕೊಂಡಿರುವಂತೆ ಕಂಡರೆ ನಿಮ್ಮ ಮೇಲೆ ಸದಾಶಿವನ ಕೃಪೆ ಇದೆ ಎಂದರ್ಥ. ಅಷ್ಟೇ ಅಲ್ಲದೆ ಮಾಡುವ ಕೆಲಸಗಳಲ್ಲಿ ಸಫಲತೆ ಸಿಗುತ್ತದೆ. ಶ್ವೇತ ವರ್ಣದ ಸರ್ಪವನ್ನು ಅಥವಾ ಹಾವನ್ನು ನೋಡಿದರೆ ಶುಭವೆಂದು ಹೇಳಲಾಗುತ್ತದೆ.

ಇದನ್ನೂ ಓದಿ: Snakes Village: ಮನುಷ್ಯರೊಂದಿಗೆ ಹಾವುಗಳು ವಾಸಿಸುವ ಸ್ಥಳ ಯಾವುದು ಗೊತ್ತಾ..! ಇಲ್ಲಿದೆ ಕುತೂಹಲಕಾರಿ ಸಂಗತಿ

ಇಂಗ್ಲೆಂಡ್​ಗೆ ಉಚಿತವಾಗಿ ವಿಕೆಟ್ ನೀಡಿದ ರಿಷಭ್ ಪಂತ್
ಇಂಗ್ಲೆಂಡ್​ಗೆ ಉಚಿತವಾಗಿ ವಿಕೆಟ್ ನೀಡಿದ ರಿಷಭ್ ಪಂತ್
ಲಾರ್ಡ್ಸ್‌ ಮೈದಾನದಲ್ಲಿ ಆಶಯ ವ್ಯಕ್ತಪಡಿಸಿದ ರಹಾನೆ
ಲಾರ್ಡ್ಸ್‌ ಮೈದಾನದಲ್ಲಿ ಆಶಯ ವ್ಯಕ್ತಪಡಿಸಿದ ರಹಾನೆ
ಗ್ಯಾರಂಟಿ ಯೋಜನೆಗಳಿಂದ ಯಾರೂ ಸೋಂಬೇರಿಗಳಾಗಿಲ್ಲ: ಸಿದ್ದರಾಮಯ್ಯ
ಗ್ಯಾರಂಟಿ ಯೋಜನೆಗಳಿಂದ ಯಾರೂ ಸೋಂಬೇರಿಗಳಾಗಿಲ್ಲ: ಸಿದ್ದರಾಮಯ್ಯ
ನಗರಪಾಲಿಕೆ ನೌಕರರ ಸಮಸ್ಯೆಗಳ ಕಡೆ ಸಿಎಂ ಕೂಡಲೇ ಗಮನಹರಿಸಬೇಕು: ವಿಜಯೇಂದ್ರ
ನಗರಪಾಲಿಕೆ ನೌಕರರ ಸಮಸ್ಯೆಗಳ ಕಡೆ ಸಿಎಂ ಕೂಡಲೇ ಗಮನಹರಿಸಬೇಕು: ವಿಜಯೇಂದ್ರ
ಜುಲೈ 14 ರಂದು ಸೇತುವೆಯನ್ನು ಉದ್ಘಾಟಿಸಲಿರುವ ಕೇಂದ್ರ ಸಚಿವ ಗಡ್ಕರಿ
ಜುಲೈ 14 ರಂದು ಸೇತುವೆಯನ್ನು ಉದ್ಘಾಟಿಸಲಿರುವ ಕೇಂದ್ರ ಸಚಿವ ಗಡ್ಕರಿ
ಹರಿಪ್ರಸಾದ್​ರ ಪಕ್ಷಕ್ಕೆ ಮಹಿಳಾ ಸಿಎಂ ಮಾಡುವ ಯೋಗ್ಯತೆ ಇಲ್ಲ: ಅಧ್ಯಕ್ಷೆ
ಹರಿಪ್ರಸಾದ್​ರ ಪಕ್ಷಕ್ಕೆ ಮಹಿಳಾ ಸಿಎಂ ಮಾಡುವ ಯೋಗ್ಯತೆ ಇಲ್ಲ: ಅಧ್ಯಕ್ಷೆ
ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ಮಾಧುಸ್ವಾಮಿಯಿಂದ ಗೊಂದಲಮಯ ಹೇಳಿಕೆ
ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ಮಾಧುಸ್ವಾಮಿಯಿಂದ ಗೊಂದಲಮಯ ಹೇಳಿಕೆ
ಅಮೆರಿಕದಲ್ಲಿ ತಮಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಸನ್ಮಾನ ಮಾಡಿದ ಶಿವಣ್ಣ
ಅಮೆರಿಕದಲ್ಲಿ ತಮಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಸನ್ಮಾನ ಮಾಡಿದ ಶಿವಣ್ಣ
VIDEO: ಮಿಂಚಿನ ದಾಳಿ ಸಂಘಟಿಸಿದ ಬುಮ್ರಾಗೆ ಸಿಕ್ಕ ಸ್ವಾಗತ ಹೇಗಿತ್ತು ನೋಡಿ
VIDEO: ಮಿಂಚಿನ ದಾಳಿ ಸಂಘಟಿಸಿದ ಬುಮ್ರಾಗೆ ಸಿಕ್ಕ ಸ್ವಾಗತ ಹೇಗಿತ್ತು ನೋಡಿ
ಅಧಿಕಾರ ಯಾವತ್ತಿಗೂ ಶಾಶ್ವತವಲ್ಲ, ನಿರೀಕ್ಷಿಸಿದ್ದೆಲ್ಲ ನಡೆಯಲ್ಲ: ತನ್ವೀರ್
ಅಧಿಕಾರ ಯಾವತ್ತಿಗೂ ಶಾಶ್ವತವಲ್ಲ, ನಿರೀಕ್ಷಿಸಿದ್ದೆಲ್ಲ ನಡೆಯಲ್ಲ: ತನ್ವೀರ್