AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti: ಜೀವನದಲ್ಲಿ ಈ 4 ಸಂಗತಿಗಳಿಗೇ ಕಿಮ್ಮತ್ತು ಇರುವುದು-ಕಿಮ್ಮತ್ತು ಬರುವುದು, ಉಳಿದದ್ದೆಲ್ಲಾ ವ್ಯರ್ಥ! ಅವು ಯಾವುವು?

Donation: ಆಚಾರ್ಯ ಚಾಣಕ್ಯನ ಪ್ರಕಾರ ಜಗತ್ತಿನಲ್ಲಿ ಅತ್ಯಂತ ದೊಡ್ಡ ಧರ್ಮವೆಂದರೆ ಅದು ದಾನದ ಧರ್ಮ. ಅರ್ಹರಿಗೆ, ಅಗತ್ಯ ಇರುವವರಿಗೆ ದಾನ ಮಾಡುವುದು ಅತ್ಯಂತ ದೊಡ್ಡ ಧರ್ಮ. ಇದು ಅತ್ಯಂತ ಅಮೂಲ್ಯ. ನಾವು ಮಾಡುವ ದಾನ ಬೆಲೆ ಕಟ್ಟಲಾಗದಂತಹುದು. ದಾನದ ಮುಂದೆ ಬೇರೊಂದಿಲ್ಲ.

Chanakya Niti: ಜೀವನದಲ್ಲಿ ಈ 4 ಸಂಗತಿಗಳಿಗೇ ಕಿಮ್ಮತ್ತು ಇರುವುದು-ಕಿಮ್ಮತ್ತು ಬರುವುದು, ಉಳಿದದ್ದೆಲ್ಲಾ ವ್ಯರ್ಥ! ಅವು ಯಾವುವು?
ಈ ನಾಲ್ಕು ವಿಧಗಳಲ್ಲಿ ಹಣ ಸಂಪಾದಿಸಿದರೆ.. ಅಂತಹವರ ಜೀವನ ಯಾವಾಗಲೂ ಕಷ್ಟಕರವಾಗಿರುತ್ತದೆ!
TV9 Web
| Edited By: |

Updated on: May 05, 2022 | 9:58 PM

Share

ಚಾಣಕ್ಯನ ನೀತಿ (Acharya Chanakya) ಮಾತುಗಳು ನಮ್ಮ ಜೀವನದ ಪ್ರಗತಿ, ಅಭ್ಯುದಯಕ್ಕೆ ತುಂಬಾ ಪ್ರಯೋಜನಕಾರಿ. ಚಾಣಕ್ಯ ನೀತಿ ತುಂಬಾ ಸರಳ, ಇಂದಿಗೂ ಎಂದೆಂದಿಗೂ ಪ್ರಸ್ತುತ. ಜೀವನದಲ್ಲಿ ಎದುರಾಗುವ ಸರಳ ಸತ್ಯಗಳನ್ನೇ ಆಚಾರ್ಯ ಚಾಣಕ್ಯ ಹೇಳಿರುವುದು. ಚಾಣಕ್ಯನ ಪ್ರಕಾರ ಮನುಷ್ಯನ ದೈನಂದಿನ ಜೀವನದಲ್ಲಿ ಈ ನಾಲ್ಕು ಸಂಗತಿಗಳಿಗೇ ಕಿಮ್ಮತ್ತು ಇರುವುದು ಮತ್ತು ಕಿಮ್ಮತ್ತು ಬರುವುದು. ಉಳಿದವೆಲ್ಲಾ ವ್ಯರ್ಥ, ವ್ಯರ್ಥ! ಅವು ಯಾವುವು? ಬನ್ನೀ ತಿಳಿಯೋಣ.

  1. ದಾನ (Donation): ಆಚಾರ್ಯ ಚಾಣಕ್ಯನ ಪ್ರಕಾರ ಜಗತ್ತಿನಲ್ಲಿ ಅತ್ಯಂತ ದೊಡ್ಡ ಧರ್ಮವೆಂದರೆ ಅದು ದಾನದ ಧರ್ಮ. ಅರ್ಹರಿಗೆ, ಅಗತ್ಯ ಇರುವವರಿಗೆ ದಾನ ಮಾಡುವುದು ಅತ್ಯಂತ ದೊಡ್ಡ ಧರ್ಮ. ಇದು ಅತ್ಯಂತ ಅಮೂಲ್ಯ. ನಾವು ಮಾಡುವ ದಾನ ಬೆಲೆ ಕಟ್ಟಲಾಗದಂತಹುದು. ದಾನದ ಮುಂದೆ ಬೇರೊಂದಿಲ್ಲ. ಹಾಗಾಗಿ ಜನ ತಮ್ಮ ಶಕ್ತಿ ಸಾಮರ್ಥ್ಯಕ್ಕೆ ಅನುಸಾರವಾಗಿ ಅರ್ಹರಿಗೆ ದಾನ ಮಾಡುವುದು ಅತ್ಯಗತ್ಯವಾಗುತ್ತದೆ.
  2. ಏಕಾದಶಿ ವ್ರತ (Ekadashi Fasting): ಹಿಂದೂ ಧರ್ಮದಲ್ಲಿ ಏಕಾದಶಿ ವ್ರತಕ್ಕೆ ವಿಶೇಷ ಮಹತ್ವವಿದೆ. ಏಕಾದಶಿಯ ದಿನ ವ್ರತ ಆಚರಿಸುವವರು ಮತ್ತು ಪೂಜೆ ಮಾಡುವವರು ಭಗವಂತ ವಿಷ್ಣುವಿನ ಆಶೀರ್ವಾದ ಸದಾ ಸಿಗುತ್ತದೆ. ಇದರಿಂದ ಆತ್ಮ ಮತ್ತು ಶರೀರ ಎರಡೂ ಶುದ್ಧಗೊಳ್ಳುತ್ತವೆ.
  3. ಗಾಯತ್ರಿ ಮಂತ್ರ ಜಪಿಸುವುದು (Gayatri Mantra): ಸನಾತನ ಹಿಂದೂ ಧರ್ಮದಲ್ಲಿ ಅನೇಕ ಮಂತ್ರಗಳನ್ನು ಜಪಿಸುತ್ತಾರೆ/ ಪಠಿಸುತ್ತಾರೆ. ಇದರಲ್ಲಿ ಅತ್ಯಂತ ಶಕ್ತಿಶಾಲಿ ಮಂತ್ರವೆಂದರೆ ಗಾಯತ್ರಿ ಮಂತ್ರ ಎಂದು ಪರಿಗಣಿಸಲಾಗಿದೆ. ಆಚಾರ್ಯ ಚಾಣಕ್ಯ ಹೇಳುವಂತೆ ಜನ ನಿಯಮ ಪ್ರಕಾರವಾಗಿ ಗಾಯತ್ರಿ ಮಂತ್ರ ಜಪಿಸಬೇಕು. ಇದರಿಂದ ಮನಸ್ಸಿಗೆ ಶಾಂತಿ ಲಭಿಸುತ್ತದೆ. ಜೀವನದಲ್ಲಿ ಎದುರಾಗುವ ಯಾವುದೇ ಸಮಸ್ಯೆಗಳು/ ಸಂಂಘರ್ಷಗಳನ್ನು ಯಶಸ್ವಿಯಾಗಿ ಎದುರಿಸಲು ಶಕ್ತಿ ಸಿಗುತ್ತದೆ.
  4. ತಾಯಿಯ ಆಶೀರ್ವಾದ (Mother Blessing): ಆಚಾರ್ಯ ಚಾಣಕ್ಯನ ಪ್ರಕಾರ ಜೀವನದಲ್ಲಿ ಅತ್ಯಂತ ಮಹತ್ವದ ಸ್ಥಾನ ಸಲ್ಲಬೇಕಿರುವುದು ಹೆತ್ತಮ್ಮನಿಗೆ. ನಾವು ನಮ್ಮ ತಂದೆ-ತಾಯಿಯ ಸೇವೆಯನ್ನು ಅಗತ್ಯವಾಗಿ ಮಾಡಬೇಕು. ಇದರಿಂದ ಅವರ ಆಶಿರ್ವಾದ/ ಹಾರೈಕೆಗಳೂ ಹೇರಳವಾಗಿ ಪ್ರಾಪ್ತಿಯಾಗುತ್ತದೆ. ಇದರಿಂದ ನಮ್ಮ ಜೀವನ ಸುಖ-ನೆಮ್ಮದಿಯಿಂದ ಕೂಡಿರುತ್ತದೆ (ಬರಹ -ವಾಟ್ಸಪ್ ಸಂದೇಶ)ಆಧ್ಯಾತ್ಮ ಕುರಿತಾದ ಲೇಖನಗಳನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ

    ಇದನ್ನೂ ಓದಿ: Suspend: ಅಧಿಕೃತವಾಗಿ ಆಯ್ಕೆಯಾಗುವುದಕ್ಕೂ ಮೊದಲೆ ಸಮವಸ್ತ್ರ ಧರಿಸಿ, ತಮ್ಮೂರಿನಲ್ಲಿ ಭಾಷಣ ಬಿಗಿದಿದ್ದ ಕಾನ್ಸ್​​ಟೇಬಲ್ ಸಸ್ಪೆಂಡ್!

    ಇದನ್ನೂ ಓದಿ: ವ್ಯವಸ್ಥೆಗೇ ಸಡ್ಡು ಹೊಡೆಯುವಂತೆ, ಪಿಎಸ್ಐ ನೇಮಕ ಅಕ್ರಮ ಪ್ರಕರಣವನ್ನೇ ರದ್ದುಗೊಳಿಸುವಂತೆ ಹೈಕೋರ್ಟ್​​ಗೆ ಮೊರೆಹೋದ ಇಬ್ಬರು ಆರೋಪಿಗಳು

ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು