ವ್ಯವಸ್ಥೆಗೇ ಸಡ್ಡು ಹೊಡೆಯುವಂತೆ, ಪಿಎಸ್ಐ ನೇಮಕ ಅಕ್ರಮ ಪ್ರಕರಣವನ್ನೇ ರದ್ದುಗೊಳಿಸುವಂತೆ ಹೈಕೋರ್ಟ್​​ಗೆ ಮೊರೆಹೋದ ಇಬ್ಬರು ಆರೋಪಿಗಳು

ವ್ಯವಸ್ಥೆಗೇ ಸಡ್ಡು ಹೊಡೆಯುವಂತೆ, ಪಿಎಸ್ಐ ನೇಮಕ ಅಕ್ರಮ ಪ್ರಕರಣವನ್ನೇ ರದ್ದುಗೊಳಿಸುವಂತೆ ಹೈಕೋರ್ಟ್​​ಗೆ ಮೊರೆಹೋದ ಇಬ್ಬರು ಆರೋಪಿಗಳು
ಸಾಂದರ್ಭಿಕ ಚಿತ್ರ

PSI ನೇಮಕಾತಿ ಅಕ್ರಮದಲ್ಲಿ ದೊಡ್ಡವರಿಗೆ ರಕ್ಷಣೆ ಕೊಡ್ತಿದ್ದಾರೆ. ಸಣ್ಣ ಮೀನು ಹಿಡಿದು, ಶಿಕ್ಷೆಕೊಟ್ಟು ಏನೋ ಮಾಡಿದ್ದೇವೆ ಅಂತಾರೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಬಾವಿಕೆರೆ ಗ್ರಾಮದಲ್ಲಿ ಮಾಜಿ ಸಿಎಂ H.D.ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.

TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

May 05, 2022 | 7:41 PM

ಬೆಂಗಳೂರು: ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ಪ್ರಕರಣದಲ್ಲಿ ಪೊಲೀಸ್ ಇಲಾಖೆಯಲ್ಲಿನ ಕುಳಗಳೇ ಬಲೆಗೆ ಬೀಳ್ತಿವೆ. ಪಿಎಸ್ಐ ನೇಮಕ ಅಕ್ರಮ ಪ್ರಕರಣವನ್ನೇ ರದ್ದುಗೊಳಿಸುವಂತೆ ಕೋರಿ ಇಬ್ಬರು ಆರೋಪಿಗಳು ಹೈಕೋರ್ಟ್​ ಮೆಟ್ಟಿಲೇರಿದ್ದು, ವ್ಯವಸ್ಥೆಗೇ ಸಡ್ಡು ಹೊಡೆದಿದ್ದಾರೆ. ರಚನಾ, ಜಾಗೃತ್​ರಿಂದ ಹೈಕೋರ್ಟ್​​ಗೆ ಅರ್ಜಿ ಸಲ್ಲಿಸಿದ್ದು, ಪರೀಕ್ಷಾ ಕೇಂದ್ರದಲ್ಲಿ ಸಿಸಿಟಿವಿ ಅಳವಡಿಸಲಾಗಿದೆ. ಪರೀಕ್ಷಾ ಅಕ್ರಮ ನಡೆಯಲು ಸಾಧ್ಯವಿಲ್ಲವೆಂದು ರಿಟ್​ ಅರ್ಜಿದಾರರಾದ ರಚನಾ, ಜಾಗೃತ್​ರ ವಾದವಾಗಿದೆ. ಸಿಐಡಿಯ ಸ್ವಯಂಪ್ರೇರಿತ ಕೇಸ್ ರದ್ದು ಅರ್ಜಿ ಕೋರಿದ್ದು, ಹೈಕೋರ್ಟ್​ ವಿಚಾರಣೆಯನ್ನು ಮೇ 19ಕ್ಕೆ‌ ಮುಂದೂಡಿದೆ.

PSI ನೇಮಕಾತಿ ಅಕ್ರಮದಲ್ಲಿ ದೊಡ್ಡವರಿಗೆ ರಕ್ಷಣೆ ಕೊಡ್ತಿದ್ದಾರೆ. ಸಣ್ಣ ಮೀನು ಹಿಡಿದು, ಶಿಕ್ಷೆಕೊಟ್ಟು ಏನೋ ಮಾಡಿದ್ದೇವೆ ಅಂತಾರೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಬಾವಿಕೆರೆ ಗ್ರಾಮದಲ್ಲಿ ಮಾಜಿ ಸಿಎಂ H.D.ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ಹಗರಣದಲ್ಲಿ ದೊಡ್ಡವರ ಕೈವಾಡವಿದೆ ಎಂದು ದೂರು ನೀಡಿದ್ದಾರೆ. ಇದರ ಬಗ್ಗೆ ಸಮಗ್ರವಾದ ಚರ್ಚೆ ಆಗಬೇಕು. ಸರ್ಕಾರ ಎಷ್ಟರ ಮಟ್ಟಿಗೆ ಸತ್ಯ ಹೊರಗಿಡುತ್ತದೆ ನೋಡೋಣ ಎಂದು ಹೇಳಿದ್ದಾರೆ.

DySP ಮಲ್ಲಿಕಾರ್ಜುನ ಸಾಲಿ, ಸಿಪಿಐ ಆನಂದ್​ ಸಿಐಡಿ ವಶ; ಬೆಳಗ್ಗೆಯಿಂದ ವಿಚಾರಣೆ:

545 ಪಿಎಸ್​ಐ ಹುದ್ದೆಗಳಿಗೆ ನೇಮಕಾತಿಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ DySP ಮಲ್ಲಿಕಾರ್ಜುನ ಸಾಲಿ, ಸಿಪಿಐ ಆನಂದ್​ರನ್ನ ಸಿಐಡಿ ಬಂಧಿಸಿದ್ದು, ಕಲಬುರಗಿಯ ಸಿಐಡಿ ಕಚೇರಿಯಲ್ಲಿ ಬೆಳಗ್ಗೆಯಿಂದ ಸಿಐಡಿ ಅಧಿಕಾರಿಗಳು ಇಬ್ಬರ ವಿಚಾರಣೆ ನಡೆಸಿದ್ದಾರೆ. ಬೆಳಗ್ಗೆ 10ಗಂಟೆಯಿಂದ ವಿಚಾರಣೆ ನಡೆಸಿದ್ದ ಅಧಿಕಾರಿಗಳು, ಬೆರಳಚ್ಚು ವಿಭಾಗದ ಪೊಲೀಸ್​ ಇನ್ಸ್​ಪೆಕ್ಟರ್​​​ ಆಗಿದ್ದ ಆನಂದ್, ಮಲ್ಲಿಕಾರ್ಜುನ ಸಾಲಿ ರಾಯಚೂರು ಜಿಲ್ಲೆಯಲ್ಲಿ ಡಿವೈಎಸ್​ಪಿ ಆಗಿದ್ದಾರೆ. ಅಭ್ಯರ್ಥಿ, ಕಿಂಗ್​ಪಿನ್​​ಗೆ ಡೀಲ್​ ಮಾಡುವುದಕ್ಕೆ ಮಲ್ಲಿಕಾರ್ಜುನ ಸಹಾಯ ಮಾಡುತ್ತಿದ್ದ. ಮಲ್ಲಿಕಾರ್ಜುನ ಸಾಲಿ, ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ನಿವಾಸಿ. 2008 ರಲ್ಲಿ ಪೊಲೀಸ ಕಾನಸ್ಟೇಬಲ್ ಆಗಿದ್ದ ಮಲ್ಲಿಕಾರ್ಜುನ ಸಾಲಿ, 2010 ರಲ್ಲಿ ಸರ್ಕಾರಿ ಪ್ರೌಢ ಶಾಲಾ ಶಿಕ್ಷಕನಾಗಿ ಆಯ್ಕೆಯಾಗಿದ್ದ. ಕಾನಸ್ಟೇಬಲ್ ಹುದ್ದೆಗೆ ರಾಜೀನಾಮೆ ನೀಡಿ ಪ್ರೌಢ ಶಾಲೆ ಶಿಕ್ಷಕ ಕೆಲಸ ಪ್ರಾರಂಭಿಸಿದ್ದ ಸಾಲಿ, 2018 ರಲ್ಲಿ ಡಿವೈಎಸ್ಪಿ ಆಗಿ ಆಯ್ಕೆಯಾಗಿದ್ದ. ಎರಡು ವರ್ಷ ಕಾಲ ಆಳಂದ ಡಿವೈಎಸ್ಪಿ ಆಗಿ ಕಾರ್ಯನಿರ್ವಹಿಸಿದ್ದ. ಕೆಲ ದಿನಗಳ ಹಿಂದಷ್ಟೇ ಲಿಂಗಸುಗೂರು ಡಿವೈಎಸ್ಪಿ ಆಗಿ ನೇಮಕಗೊಂಡಿದ್ದ. ಕಿಂಗ್​ಪಿನ್ ರುದ್ರಗೌಡ ಪಾಟೀಲ್ ಸಂಪರ್ಕಕ್ಕೆ ಸಿಲುಕಿ ಸಂಕಷ್ಟಗೀಡಾಗಿದ್ದು, ಅಭ್ಯರ್ಥಿಗಳು ಮತ್ತು ಕಿಂಗ್​ಪಿನ್ ನಡುವೆ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದ್ದ.

ಪರೀಕ್ಷೆ ಮುಗಿದ ನಂತರ ತಗೆಸಿದ್ದ ಗ್ರೂಪ್ ಪೋಟೋ ಎಲ್ಲಡೆ ವೈರಲ್​ ಆಗಿದ್ದು, ಕಲಬುರಗಿ ನಗರದ ಜ್ಞಾನಜೋತಿ ಇಂಗ್ಲಿಷ್ ಶಾಲೆಯಲ್ಲಿ ಪರೀಕ್ಷೆ ನಡೆದಿತ್ತು. ಪೋಟೋದಲ್ಲಿ ಶಾಲೆ ಸಿಬ್ಬಂದಿ, ಪೊಲೀಸ ‌ಅಧಿಕಾರಿಗಳು, ಶಾಲೆ ಒಡತಿ ದಿವ್ಯಾ ಹಾಗರಗಿ ಫೋಟೋಗೆ ಪೋಸು ನೀಡಿದ್ದಾರೆ. ಪೋಟೋದಲ್ಲಿದ್ದ ಆನಂದ್ ಮೇತ್ರೆಯನ್ನು ಇಂದು ಸಿಐಡಿ ಬಂಧಿಸಿದ್ದಾರೆ. ದಿವ್ಯಾ ಹಾಗರಗಿ, ಹೆಡ್ ಮಾಸ್ಟರ್ ಕಾಶಿನಾಥ್, ಕೊಠಡಿ ಮೇಲ್ವಿಚಾರಕಿಯರಾದ ಅರ್ಚನಾ, ಸುಮಾ, ಸಿದ್ದಮ್ಮ ಕೂಡಾ ಬಂಧನ ಮಾಡಲಾಗಿದೆ. ಇನ್ನು ಪರೀಕ್ಷಾ ‌ಕೇಂದ್ರದ ಉಸ್ತುವಾರಿ ವಹಿಸಿಕೊಂಡಿದ್ದ ಬೆರಳಚ್ಚು ವಿಭಾಗದ ಡಿವೈಎಸ್ಪಿ ಆರ್​ಆರ್ ಹೊಸಮನಿ, ಮಹಿಳಾ ಠಾಣೆ ಸಿಪಿಐ ದಿಲೀಪ್ ಸಾಗರ್ ಅಮಾನತ್ತು ಮಾಡಲಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ, ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow us on

Related Stories

Most Read Stories

Click on your DTH Provider to Add TV9 Kannada