Suspend: ಅಧಿಕೃತವಾಗಿ ಆಯ್ಕೆಯಾಗುವುದಕ್ಕೂ ಮೊದಲೆ PSI ಸಮವಸ್ತ್ರ ಧರಿಸಿ, ತಮ್ಮೂರಿನಲ್ಲಿ ಭಾಷಣ ಬಿಗಿದಿದ್ದ ಕಾನ್ಸ್​​ಟೇಬಲ್ ಸಸ್ಪೆಂಡ್!

ಶಿಸ್ತುಬದ್ಧ ಪೊಲೀಸ್​ ಇಲಾಖೆಯಲ್ಲಿ ಇದ್ದುಕೊಂಡೂ ಸ್ವಯಂ ಅಪರಾಧ ಮಾಡಿಕೊಂಡಿರುವ ಅಭ್ಯರ್ಥಿಯನ್ನು ಈ ಹಿಂದೆ ಆತ ಕಾನ್ಸ್​​ಟೇಬಲ್​​ ಆಗಿ ಸಲ್ಲಿಸುತ್ತಿದ್ದ ಸೇವೆಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡಿ, ಸೇವೆಯಿಂದ ಬಿಡುಗಡೆಗೊಳಿಸಲಾಗಿದೆ.

Suspend: ಅಧಿಕೃತವಾಗಿ ಆಯ್ಕೆಯಾಗುವುದಕ್ಕೂ ಮೊದಲೆ PSI ಸಮವಸ್ತ್ರ ಧರಿಸಿ, ತಮ್ಮೂರಿನಲ್ಲಿ ಭಾಷಣ ಬಿಗಿದಿದ್ದ ಕಾನ್ಸ್​​ಟೇಬಲ್ ಸಸ್ಪೆಂಡ್!
ಅಧಿಕೃತವಾಗಿ ಆಯ್ಕೆಯಾಗುವುದಕ್ಕೂ ಮೊದಲೆ ಸಮವಸ್ತ್ರ ಧರಿಸಿ, ತಮ್ಮೂರಿನಲ್ಲಿ ಭಾಷಣ ಬಿಗಿದಿದ್ದ ಕಾನ್ಸ್​​ಟೇಬಲ್ ಸಸ್ಪೆಂಡ್ ಆದರು!
Follow us
TV9 Web
| Updated By: ಸಾಧು ಶ್ರೀನಾಥ್​

Updated on:May 05, 2022 | 9:12 PM

ಬೆಂಗಳೂರು: 545 ಪೊಲೀಸ್​ ಸಬ್​ ಇನ್ಸ್ ಪೆಕ್ಟರ್​ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮಗಳು (PSI Recruitment Scam) ನಡೆದು ಇಡೀ ಪೊಲೀಸ್​ ವ್ಯವಸ್ಥೆಗೆ ಕಪ್ಪುಚುಕ್ಕೆಯಾಗಿರುವಾಗ ಅದೇ ಶಿಸ್ತುಬದ್ಧ ಪೊಲೀಸ್​ ಇಲಾಖೆಯಲ್ಲಿ ಇದ್ದುಕೊಂಡೂ ಸ್ವಯಂ ಅಪರಾಧ ಮಾಡಿಕೊಂಡಿರುವ ಅಭ್ಯರ್ಥಿಯನ್ನು ಈ ಹಿಂದೆ ಆತ ಕಾನ್ಸ್​​ಟೇಬಲ್​​ ಆಗಿ ಸಲ್ಲಿಸುತ್ತಿದ್ದ ಸೇವೆಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡಿ, ಸೇವೆಯಿಂದ ಬಿಡುಗಡೆಗೊಳಿಸಲಾಗಿದೆ. ಬೆಂಗಳೂರಿನ ವಿವೇಕನಗರ ಠಾಣೆಯ  (Viveknagar constable) ಕಾನ್ಸ್​​ಟೇಬಲ್, ಹಾವೇರಿಯ​​ (Haveri) ಬಸನಗೌಡ ಕರಿಬಸವನಗೌಡ ಸೇವೆಯಿಂದ ಅಮಾನತುಗೊಂಡವರು (Suspend). ಸದರಿ ಕಾನ್ಸ್​​ಟೇಬಲ್​​ ಬಸನಗೌಡ PSI ತಾತ್ಕಾಲಿಕ ನೇಮಕಾತಿ ಪಟ್ಟಿಯಲ್ಲಿ 27ನೇ Rank ನಲ್ಲಿ ಉತ್ತೀರ್ಣನಾಗಿದ್ದರು. ಅವರು ಮಾಡಿದ ಅಪರಾಧವೆಂದರೆ ಆಯ್ಕೆ ಆದೇಶ ಪ್ರತಿ ಅಧಿಕೃತವಾಗಿ ಕೈಗೆ ಸಿಗುವ ಮೊದಲೇ ಸಮವಸ್ತ್ರ ಧರಿಸಿ, ತಮ್ಮೂರಿನಲ್ಲಿ ಭಾಷಣ ಬಿಗಿದಿದ್ದರು.

ಕಾನ್ಸಟೇಬಲ್ ಹುದ್ದೆಗೆ ರಾಜೀನಾಮೆ ನೀಡದೆ ಪಿಎಸ್ಐ ಬಟ್ಟೆ ಧರಿಸಿದ್ದ, ಪೊಲೀಸ್ ನಿಯಮಾವಳಿಯ ಉಲ್ಲಂಘನೆ ಆರೋಪದ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ. PSI ಸಮವಸ್ತ್ರ ಧರಿಸಿದ್ದ ಫೋಟೋ ವೈರಲ್ ಆಗಿದ್ದ ಹಿನ್ನೆಲೆಯಲ್ಲಿ ಇಲಾಖೆಗೆ ಮುಜುಗರ ತಂದನೆಂದು ವಿವೇಕನಗರ ಠಾಣೆ ಪಿಸಿ ಹಾವೇರಿಯ​​ ಬಸನಗೌಡ ಕರಿಬಸವನಗೌಡ ಸೇವೆಯಿಂದ ಅಮಾನತುಗೊಳಿಸಿ, ಕೇಂದ್ರ ವಿಭಾಗದ ಡಿಸಿಪಿ M.N.ಅನುಚೇತ್ ಆದೇಶ ಹೊರಡಿಸಿದ್ದಾರೆ.

ಪೊಲೀಸ್ ಠಾಣೆಯಲ್ಲೇ ಇನ್ಸ್‌ಪೆಕ್ಟರ್ ಬರ್ತ್‌ಡೇ ಆಚರಣೆ! ಚಾಮರಾಜನಗರದ ಪೂರ್ವ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಆನಂದ್ ತಮ್ಮ ಅಧೀನ ಪೊಲೀಸ್ ಠಾಣೆಯಲ್ಲೇ ಬರ್ತ್‌ಡೇ ಆಚರಣೆ ಮಾಡಿದ್ದಾರೆ. ಶಿಸ್ತುಬದ್ಧ ಪೊಲೀಸ್ ಇಲಾಖೆಯಲ್ಲಿ ಸೇವೆಸಲ್ಲಿಸುವವರು ಪೊಲೀಸ್​ ಠಾಣೆಯಲ್ಲಿ ಹುಟ್ಟುಹಬ್ಬ ಆಚರಿಸುವಂತಿಲ್ಲ. ಆದರೂ ಪೊಲೀಸ್‌ ಇಲಾಖೆಯ ಮೂಲ ನಿಯಮವನ್ನೇ ಗಾಳಿಗೆ ತೂರಿದ ಇನ್ಸ್‌ಪೆಕ್ಟರ್‌ ಆನಂದ್ ತಮ್ಮ ಹುಟ್ಟುಹಬ್ಬವನ್ನು  ಚಾಮರಾಜನಗರದ ಪೂರ್ವ ಪೊಲೀಸ್ ಠಾಣೆಯಲ್ಲಿಯೇ ನಿನ್ನೆ ಗುರುವಾರ ಭರ್ಜರಿಯಾಗಿ ಆಚರಿಸಿಕೊಂಡಿದ್ದಾರೆ.

ಇದನ್ನೂ ಓದಿ: PSI Recruitment: ಪಿಎಸ್ಐ ನೇಮಕ ಆದೇಶ ಕೈ ಸೇರುವುದಕ್ಕೂ ಮುನ್ನವೇ ಹುಟ್ಟೂರಲ್ಲಿ ಸಮವಸ್ತ್ರ ಧರಿಸಿ ಸಂಭ್ರಮಿಸಿದ ಬಸನಗೌಡ!

Published On - 4:16 pm, Thu, 5 May 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ