ಮೃತಪಟ್ಟಿದ್ದ ಜಾನುವಾರುಗಳನ್ನು ವಾಹನಕ್ಕೆ ಕಟ್ಟಿಹಾಕಿ ಎಳೆದೊಯ್ದ ಐಆರ್‌ಬಿ‌ ಟೋಲ್ ಸಿಬ್ಬಂದಿ; ಅಮಾನವೀಯ ವಿಡಿಯೋ ವೈರಲ್

| Updated By: preethi shettigar

Updated on: Dec 06, 2021 | 11:27 AM

ಮೃತ ಆಕಳಿನ ಕಾಲಿಗೆ ಹಗ್ಗ ಕಟ್ಟಿ ಐಆರ್‌ಬಿಯ 1033 ವಾಹನದ ಮೂಲಕ ರಾಷ್ಟ್ರೀಯ ಹೆದ್ದಾರಿ ಮೇಲೆಯೇ ಸಿಬ್ಬಂದಿ ಎಳೆಯೊಯ್ದಿದ್ದಾರೆ. ಸದ್ಯ ಈ ಅಮಾನವೀಯ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಸಿಬ್ಬಂದಿ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೃತಪಟ್ಟಿದ್ದ ಜಾನುವಾರುಗಳನ್ನು ವಾಹನಕ್ಕೆ ಕಟ್ಟಿಹಾಕಿ ಎಳೆದೊಯ್ದ ಐಆರ್‌ಬಿ‌ ಟೋಲ್ ಸಿಬ್ಬಂದಿ; ಅಮಾನವೀಯ ವಿಡಿಯೋ ವೈರಲ್
ರಸ್ತೆ ಮೇಲೆಯೇ ಆಕಳು ಎಳೆದೊಯ್ದ ದೃಶ್ಯ
Follow us on

ಕಾರವಾರ: ಮೃತಪಟ್ಟಿದ್ದ ಜಾನುವಾರುಗಳನ್ನು ವಾಹನಕ್ಕೆ ಕಟ್ಟಿಹಾಕಿ ರಸ್ತೆಯ ಮೇಲೆಯೇ ಐಆರ್‌ಬಿ‌ ಟೋಲ್ ಸಿಬ್ಬಂದಿ ಎಳೆದೊಯ್ದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಸಮೀಪ ನಡೆದಿದೆ. ಮೃತ ಆಕಳಿನ ಕಾಲಿಗೆ ಹಗ್ಗ ಕಟ್ಟಿ ಐಆರ್‌ಬಿಯ 1033 ವಾಹನದ ಮೂಲಕ ರಾಷ್ಟ್ರೀಯ ಹೆದ್ದಾರಿ ಮೇಲೆಯೇ ಸಿಬ್ಬಂದಿ ಎಳೆಯೊಯ್ದಿದ್ದಾರೆ. ಸದ್ಯ ಈ ಅಮಾನವೀಯ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಸಿಬ್ಬಂದಿ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಟ್ಕಳ ತಾಲೂಕಿನ ಗಡಿಭಾಗದಲ್ಲಿರುವ ಶಿರೂರು ಟೋಲ್ ಗೇಟ್‌ಗೆ ಸೇರಿದ 1033 ವಾಹನದ ಸಿಬ್ಬಂದಿ ಈ ದುಷ್ಕೃತ್ಯ ಎಸಗಿದ್ದಾರೆ. ಸದ್ಯ ಐಆರ್​ಬಿ ಕಂಪೆನಿ ಸಿಬ್ಬಂದಿಯ ಅಮಾನವೀಯ ಕೃತ್ಯ ಹಾಗೂ ನಿರ್ಲಕ್ಷ್ಯದ ವಿರುದ್ಧ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳದಿದ್ದಲ್ಲಿ ಪ್ರತಿಭಟನೆ ನಡೆಸುವುದಾಗಿ ಹಿಂದೂ ಸಂಘಟನೆಗಳು ಎಚ್ಚರಿಕೆ ನೀಡಿವೆ.

ಉತ್ತರ ಕನ್ನಡ: ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಜಾನುವಾರು ರಕ್ಷಣೆ
ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಜಾನುವಾರುಗಳನ್ನು ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೊಳೆಗದ್ದೆ ಬಳಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 66ರ ಹೊಳೆಗದ್ದೆ ಟೋಲ್‌ಗೇಟ್ ಬಳಿ 13 ಕೋಣ, 9 ಎಮ್ಮೆಗಳನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಜಾನುವಾರು ಸಾಗಿಸುತ್ತಿದ್ದ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಕುಮಟಾ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಪೊಲೀಸರ ತಪಾಸಣೆ ವೇಳೆ ಜಾನುವಾರುಗಳನ್ನು ಕಸಾಯಿಖಾನೆಗೆ ಕೊಂಡೊಯ್ಯುತ್ತಿರುವುದು ಬೆಳಕಿಗೆ ಬಂದಿದೆ. ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆಯಡಿ ಆರೋಪಿಗಳ ಮೇಲೆ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:
ಚಿಕ್ಕಮಗಳೂರು: ಕೊಪ್ಪದಲ್ಲಿ ಮಿತಿಮೀರಿದ ದನಗಳ್ಳರ ಹಾವಳಿ; ಸಿಸಿಟಿವಿಯಲ್ಲಿ ಸೆರೆಯಾಯ್ತು ಕಳ್ಳರ ಆಟಾಟೋಪ

ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಜಾನುವಾರು ರಕ್ಷಣೆ; ನಾಲ್ವರು ಪೊಲೀಸ್ ವಶಕ್ಕೆ

Published On - 11:10 am, Mon, 6 December 21