ಸಮುದ್ರದಲ್ಲಿ ಕಳೆದುಹೋಗಿದ್ದ ಕೋಟಿ ಬೆಲೆಬಾಳುವ ಹವಾಮಾನ ಸಂಶೋಧನಾ ಯಂತ್ರ ಮೀನುಗಾರರಿಗೆ ಪತ್ತೆ

| Updated By: ganapathi bhat

Updated on: Oct 20, 2021 | 5:51 PM

ಉತ್ತರ ಕನ್ನಡ ಜಿಲ್ಲೆಯ ಅರಬ್ಬಿ ಸಮುದ್ರದ ನೇತ್ರಾಣಿ ಮೂಲಕ ಮಹಾರಾಷ್ಟ್ರದ ಬಳಿ ತೇಲಿ ಹೋಗಿದೆ. ಕೋಟಿ ಬೆಲೆಬಾಳುವ ಯಂತ್ರವನ್ನು ಇಂದು ಕಾರವಾರದ ಮೀನುಗಾರರು ಹುಡುಕಿ ತಂದಿದ್ದಾರೆ. ಕಾರವಾರದ ಸಾಗರ ವಿಜ್ಞಾನ ಕೇಂದ್ರಕ್ಕೆ ಯಂತ್ರವನ್ನು ರವಾನೆ ಮಾಡಲಾಗಿದೆ.

ಸಮುದ್ರದಲ್ಲಿ ಕಳೆದುಹೋಗಿದ್ದ ಕೋಟಿ ಬೆಲೆಬಾಳುವ ಹವಾಮಾನ ಸಂಶೋಧನಾ ಯಂತ್ರ ಮೀನುಗಾರರಿಗೆ ಪತ್ತೆ
ಹವಾಮಾನ ಸಂಶೋಧನಾ ಯಂತ್ರ ಮೀನುಗಾರರಿಗೆ ಪತ್ತೆ
Follow us on

ಕಾರವಾರ: ಸಮುದ್ರದಲ್ಲಿ ಕಳಚಿಕೊಂಡು ತೇಲಿಹೋಗಿದ್ದ ಸಾಗರ ವಿಜ್ಞಾನ ಕೇಂದ್ರದ ಹವಾಮಾನ ಸಂಶೋಧನಾ ಯಂತ್ರ (ಬಾಯ್) ಪತ್ತೆಯಾಗಿದೆ. ಅಕ್ಟೋಬರ್ 2 ರಂದು ಲಕ್ಷದ್ವೀಪ ಸಮುದ್ರದಲ್ಲಿ ಕಳಚಿಕೊಂಡಿದ್ದ ಯಂತ್ರ ಇಂದು (ಅಕ್ಟೋಬರ್ 20) ಪತ್ತೆ ಆಗಿದೆ. ಹವಾಮಾನ ವೈಪರಿತ್ಯದಿಂದ ಯಂತ್ರವು ಕಳಚಿಕೊಂಡು ತೇಲಿಹೋಗಿತ್ತು. ಬಳಿಕ ಇದೀಗ, ಮಹಾರಾಷ್ಟ್ರದ ಬಳಿ ಹವಾಮಾನ ಸಂಶೋಧನಾ ಯಂತ್ರ ಪತ್ತೆ ಆಗಿದೆ. ಕಾರವಾರದ ಮೀನುಗಾರರು ಯಂತ್ರವನ್ನು ಹುಡುಕಿ ತಂದಿದ್ದಾರೆ. ಕಾರವಾರದ ಸಾಗರ ವಿಜ್ಞಾನ ಕೇಂದ್ರಕ್ಕೆ ಯಂತ್ರ ರವಾನೆ ಮಾಡಲಾಗಿದೆ.

ಲಕ್ಷ ದ್ವೀಪದಲ್ಲಿ ಹವಾಮಾನ ವೈಪರಿತ್ಯದಿಂದ ಕಳಚಿ ತೇಲಿ ಹೋಗಿದ್ದ ಹವಾಮಾನ ಸಂಶೋಧನಾ ಯಂತ್ರ ಪತ್ತೆ ಆಗಿದೆ. ಹವಾಮಾನ ಸಂಶೋಧನಾ ಯಂತ್ರ ಹತ್ತು ದಿನದಲ್ಲಿ ಏಳುನೂರು ಕಿಲೋಮೀಟರ್ ಸಮುದ್ರದಲ್ಲಿ ಕ್ರಮಿಸಿದೆ. ಉತ್ತರ ಕನ್ನಡ ಜಿಲ್ಲೆಯ ಅರಬ್ಬಿ ಸಮುದ್ರದ ನೇತ್ರಾಣಿ ಮೂಲಕ ಮಹಾರಾಷ್ಟ್ರದ ಬಳಿ ತೇಲಿ ಹೋಗಿದೆ. ಕೋಟಿ ಬೆಲೆಬಾಳುವ ಯಂತ್ರವನ್ನು ಇಂದು ಕಾರವಾರದ ಮೀನುಗಾರರು ಹುಡುಕಿ ತಂದಿದ್ದಾರೆ. ಕಾರವಾರದ ಸಾಗರ ವಿಜ್ಞಾನ ಕೇಂದ್ರಕ್ಕೆ ಯಂತ್ರವನ್ನು ರವಾನೆ ಮಾಡಲಾಗಿದೆ.

ಇದನ್ನೂ ಓದಿ: ಕಾರವಾರ: ಸಮುದ್ರದಲ್ಲಿ ಮುಳುಗುತ್ತಿದ್ದ 4 ಮಕ್ಕಳೂ ಸೇರಿ ಒಂದೇ ಕುಟುಂಬದ 6 ಜನರ ರಕ್ಷಣೆ

ಇದನ್ನೂ ಓದಿ: ಗಗನಕ್ಕೇರಿದ ಮೀನಿನ ದರ; ಧಾರಾಕಾರ ಮಳೆಗೆ ಪೂರೈಕೆ ಸ್ಥಗಿತ, ಕಂಗಾಲಾದ ಮೀನುಗಾರರು