ಕಾರವಾರ: ಪ್ರವಾಸಿಗರ (tourists) ಸ್ವರ್ಗ ಎಂದೇ ಖ್ಯಾತಿ ಪಡೆದ ಉತ್ತರ ಕನ್ನಡ ಜಿಲ್ಲೆಯಲ್ಲಿ ಪಾರ್ಕ್, ಮ್ಯೂಸಿಯಂಗಳು ನಿರ್ವಣೆ ಇಲ್ಲದೆ ಹದೆಗೆಟ್ಟಿವೆ. ಜೊತೆಗೆ ಮ್ಯೂಸಿಯಂಗಳು ತುಕ್ಕು ಹಿಡಿದು ಹಾಳಾಗುತ್ತಿವೆ. ಕಳೆದ ಮೂರು ವರ್ಷಗಳಲ್ಲಿ ಕೋವಿಡ್ ಹಾವಳಿ ಮತ್ತು ನಿರಂತರ ಮಳೆಯಿಂದ ಪ್ರವಾಸಿಗರಿಲ್ಲದೆ ಪ್ರವಾಸೋದ್ಯಮ ನೆಲಕಚ್ಚಿತ್ತು. ಈಗ ಕೋವಿಡ್ ಕಡಿಮೆಯಾಗಿದ್ದು, ಮಳೆಯು ಕೊಂಚ ಬಿಡುವು ನೀಡಿದೆ. ಈ ಹಿನ್ನಲೆ ಪ್ರವಾಸಿಗರು ಜಿಲ್ಲೆಯತ್ತ ಬರುತ್ತಿದ್ದಾರೆ. ಹೀಗಾಗಿ ಕೊಂಚ ಮಟ್ಟಿಗೆ ಪ್ರವಾಸೋದ್ಯಮ ಚೇತರಿಕೆ ಕಂಡಿದೆ. ಆದರೆ ಜಿಲ್ಲೆಯ ಪ್ರಮುಖ ಪಾಕ್೯, ಮ್ಯೂಸಿಯಂಗಳ ಸ್ಥಿತಿ ನೋಡಿ ಪ್ರವಾಸಿಗರಿಗೆ ನಿರಾಶೆ ಮೂಡಿದೆ.
ಕರ್ನಾಟಕದ ಕಾಶ್ಮೀರ ಎಂದೇ ಖ್ಯಾತಿ ಪಡೆದ ಕಾರವಾರದಲ್ಲಿ ಪಾಕ್೯ಗಳು ಸರಿಯಾದ ನಿರ್ವಹಣೆ ಇಲ್ಲದೆ ಹದಗೆಟ್ಟು ಹೋಗಿವೆ. ಜಿಲ್ಲೆಯಲ್ಲಿ ಪ್ರಮುಖ ವಾರ್ ಶಿಪ್ ಮ್ಯೂಸಿಯಂ ಸರಿಯಾದ ನಿರ್ವಹಣೆ ಇಲ್ಲದೆ ತುಕ್ಕು ಹಿಡಿದು ಹೋಗಿದೆ. ಕಾರವಾರ ನಗರದ ರವೀಂದ್ರನಾಥ ಟಾಗೋರ್ ಬೀಚ್ ಹತ್ತಿರದಲ್ಲಿರುವ ವಾರ್ ಶಿಪ್ ಮ್ಯೂಸಿಯಂ 1934ರಲ್ಲಿ ನಡೆದ ಮಹಾಯುದ್ಧದಲ್ಲಿ ಬಳಕೆ ಯಾದ ಪ್ರಮುಖ ಶಸ್ತ್ರಾಸ್ತ್ರಗಳನ್ನು ಹೋಲುವ ಮತ್ತು ಯುದ್ಧದಲ್ಲಿ ಬಳಕೆಯಾದ ಯುದ್ದ ನೌಕೆಯನ್ನ ಹೀಗೆ ಹಲವು ಈ ಮ್ಯೂಸಿಯಂನಲ್ಲಿ ಇರಿಸಲಾಗಿದೆ. ಆದರೆ ಎಲ್ಲವೂ ತುಕ್ಕು ಹಿಡಿದು, ಬಣ್ಣ ಮಾಸಿ ಕಳೆಗುಂದಿದೆ. ಈ ಹಿನ್ನೆಲೆ ಪ್ರವಾಸಿಗರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಹದಗೆಟ್ಟ ವಾರ್ ಶೀಪ್ ಮ್ಯೂಸಿಯಂ:
ಇನ್ನು ಎರಡನೇ ಮಹಾಯುದ್ಧದಲ್ಲಿ ಬಳಕೆಯಾದ ಯುದ್ಧ ನೌಕೆಯನ್ನು ಈ ಮ್ಯೂಸಿಯಂನಲ್ಲಿ ಇರಿಸಿ ಅದಕ್ಕೆ ಮರು ಜೀವ ತುಂಬಿ, ಯುದ್ಧದಲ್ಲಿ ಯಾವ ರೀತಿ ಇದನ್ನ ಬಳಕೆ ಮಾಡಲಾಯಿತು. ಇದರ ಮಹತ್ವ ಏನು, ಹೇಗೆ ಬಳಕೆ ಮಾಡುತ್ತಿದ್ದರು ಎಂಬುವುದರ ಬಗ್ಗೆ ಸಂಪೂರ್ಣ ವಿವರ ನೀಡುವುದರೊಂದಿಗೆ ಪ್ರತ್ಯಕ್ಷ ಅನುಭವವನ್ನು ನೀಡಲಾಗುತ್ತದೆ. ಹೀಗಾಗಿ ಕಾರವಾರಕ್ಕೆ ಬಂದ ಬಹುತೇಕ ಪ್ರವಾಸಿಗರು ಈ ವಾರ್ ಶೀಪ್ ಮ್ಯೂಸಿಯಂಗೆ ಭೇಟಿ ಕೊಟ್ಟು ಅದರ ಅನುಭವವನ್ನು ಪಡೆದುಕೊಂಡು ಹೋಗುತ್ತಾರೆ. ಆದರೆ ಈಗ ಆ ಮ್ಯೂಸಿಯಂ ಸಂಪೂರ್ಣ ಹದಗೆಟ್ಟು ಹೋಗಿದೆ. ನೌಕೆಯ ಒಳಬಾಗ ತುಕ್ಕು ಹಿಡಿದು ಹಾಳಾಗಿದ್ದರೆ ಹೊರ ಭಾಗದ ಬಣ್ಣವೆಲ್ಲ ಮಾಸಿ ಕಳೆಗುಂದಿದೆ.
ಜೊತೆಗೆ ನಿರ್ವಹಣೆ ಇಲ್ಲದೆ ಈ ಮ್ಯೂಸಿಯಂ ಸೋರಗಿದೆ. ನೂರಾರು ರೂಪಾಯಿ ಹಣಕೊಟ್ಟು ಮ್ಯೂಸಿಯಂ ನೋಡಲು ಹೋದ ಪ್ರವಾಸಿಗರು ಅಲ್ಲಿಯ ವಾಸ್ತವತೆ ನೋಡಿ ಬೇಸರಗೊಂಡಿದ್ದಾರೆ. ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ದೀಪಾವಳಿ ಹಬ್ಬದ ನಿಮಿತ್ತ ಸಾಲು ಸಾಲು ರಜೆ ಹಿನ್ನಲೆ, ಜಿಲ್ಲೆಯ ಮುರಡೇಶ್ವರ, ಗೋಕರ್ಣ, ಕಡಲತೀರಗಳು ಪ್ರವಾಸಿಗರಿಂದ ತುಂಬಿ ತುಳಕುತ್ತಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.