Uttara Kannada:ಅಬ್ಬರದ ಮಳೆಗೆ ಸಂಪರ್ಕ ಕಡಿತ, ಹೃದಯಾಘಾತವಾದ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ಹರಸಾಹಸಪಟ್ಟ ಕುಟುಂಬಸ್ಥರು

| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 27, 2023 | 1:54 PM

ರಾಜ್ಯಾದ್ಯಂತ ಮುಂಗಾರು ಮಳೆ ಅಬ್ಬರ ಜೋರಾಗಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲೂ ಭರ್ಜರಿ ಮಳೆಯಾಗುತ್ತಿದೆ. ಪರಿಣಾಮ ಜೋಯಿಡಾ ತಾಲೂಕಿನ ಕಾತೇಲಿ ಗ್ರಾಮಪಂಚಾಯತಿ ಸೇತುವೆ ಮುಳುಗಡೆಯಿಂದ ಸಂಪರ್ಕ ಕಳೆದುಕೊಂಡಿದೆ. ಈ ವೇಳೆ ಹೃದಯಾಘಾತವಾದ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ಗ್ರಾಮಸ್ಥರು ಹರಸಾಹಸ ಪಡುವ ಧಾರುಣ ಸ್ಥಿತಿ ನಿರ್ಮಾಣವಾಗಿದ್ದು, ಬಳಿಕ ದೋಣಿಯಲ್ಲಿ ಸಾಗಿಸಿದ ಘಟನೆ ನಡೆದಿದೆ.

Uttara Kannada:ಅಬ್ಬರದ ಮಳೆಗೆ ಸಂಪರ್ಕ ಕಡಿತ, ಹೃದಯಾಘಾತವಾದ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ಹರಸಾಹಸಪಟ್ಟ ಕುಟುಂಬಸ್ಥರು
ಹೃದಯಾಘಾತವಾದ ಯುವಕ
Follow us on

ಉತ್ತರ ಕನ್ನಡ, ಜು.27: ರಾಜ್ಯಾದ್ಯಂತ ಮುಂಗಾರು ಮಳೆ ಅಬ್ಬರ ಜೋರಾಗಿದ್ದು, ಹಲವು ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದ್ದು, ಮಹಾಮಳೆಗೆ ಅದೆಷ್ಟೋ ಜೀವಗಳು ಸಾವನ್ನಪ್ಪಿದೆ. ಅದರಂತೆ ಇದೀಗ ಉತ್ತರ ಕನ್ನಡ(Uttara Kannada) ಜಿಲ್ಲೆಯಲ್ಲೂ ಭರ್ಜರಿ ಮಳೆಯಾಗುತ್ತಿದ್ದು. ಪರಿಣಾಮ ಜಿಲ್ಲೆಯ ಜೋಯಿಡಾ ತಾಲೂಕಿನ ಕಾತೇಲಿ ಗ್ರಾಮಪಂಚಾಯತಿ ವ್ಯಾಪ್ತಿಯ ಕಾನೇರಿ ನದಿ ತುಂಬಿ ಹರಿಯುತ್ತಿದೆ. ಇದರಿಂದ ಕೆಲೋಲಿ ಎಂಬ ಗ್ರಾಮ ಸಂಪರ್ಕ ಕಳೆದುಕೊಂಡಿದ್ದು, ಈ ವೇಳೆ ಹೃದಯಾಘಾತವಾದ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ಗ್ರಾಮಸ್ಥರು ಹರಸಾಹಸ ಪಡುವ ಸ್ಥಿತಿ ನಿರ್ಮಾಣವಾಗಿತ್ತು. ಮಾಬುಲು ನಾರಾಯಣ ಗಾವಡ ಹೃದಯಾಘಾತವಾದ ವ್ಯಕ್ತಿ. ಬಳಿಕ ರೋಗಿಯನ್ನ ದೋಣಿ ಮೂಲಕ ಸಾಗಿಸಿ ಜೋಯಿಡಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇನ್ನು ಜಿಲ್ಲೆಯೂ ಅತೀ ಹೆಚ್ಚು ಕಾಡುಗಳಿಂದ ಕೂಡಿದ್ದು, ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಅದೆಷ್ಟೋ ಗ್ರಾಮಗಳು ಇದುವರೆಗೂ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ಹೌದು ಸರಿಯಾದ ರಸ್ತೆ, ನೀರು, ವಿದ್ಯುತ್​ ಸೇರಿದಂತೆ ಇತರೆ ಸೌಕರ್ಯಗಳು ಇಲ್ಲಿಯ ಜನರಿಗೆ ಕನಸಿನ ಮಾತಾಗಿದೆ. ಇನ್ನು ಇಂತಹ ಘಟನೆ ಇದೆ ಮೊದಲೇನೆಲ್ಲ. ಇದೇ ತಿಂಗಳು 4 ರಂದು ಜಿಲ್ಲೆಯ ಜೋಯಿಡಾದ ಸಣಕಾ ಗ್ರಾಮದ ರಸ್ತೆ ಸಮಸ್ಯೆಯಿಂದಾಗಿ ಆಂಬ್ಯುಲೆನ್ಸ್ ಬರಲಾಗದೇ ರೋಗಿಯನ್ನ ಗ್ರಾಮಸ್ಥರು ಕಂಬಳಿಯಲ್ಲಿ ಆಸ್ಪತ್ರೆಗೆ ಹೊತ್ತೊಯ್ದಿದಿದ್ದ ಘಟನೆ ನಡೆದಿತ್ತು.

ಇದನ್ನೂ ಓದಿ:ಅಪ್ಪುಗೆ ಆ ಒಂದು ಆಸೆಯಿತ್ತು, ಆದರೆ ನೆರವೇರಲಿಲ್ಲ: ಅಶ್ವಿನಿ ಪುನೀತ್ ರಾಜ್​ಕುಮಾರ್ ಬಿಚ್ಚಿಟ್ಟ ನೆನಪು

ಹೌದು, ಗ್ರಾಮಕ್ಕೆ ರಸ್ತೆ ಸಂಪರ್ಕವಿಲ್ಲದ ಕಾರಣ, ಅನಾರೋಗ್ಯಕ್ಕೆ ತುತ್ತಾಗಿದ್ದ ದ್ರೌಪದಿ ಪಾವು ದೇಸಾಯಿ(80) ವೃದ್ಧೆಯನ್ನು ಗ್ರಾಮಸ್ಥರು ಕಂಬಳಿ ಜೋಲಿಯಲ್ಲೇ ಸುಮಾರು 2.5 ಕಿಮೀ ನಡೆದು ಆಸ್ಪತ್ರೆಗೆ ಸಾಗಿಸಿದ್ದರು. ಇದೀಗ ಮಹಾಮಳೆಗೆ ಮತ್ತೊಂದು ಇಂತಹ ಮನಕಲುಕುವ ಘಟನೆ ನಡದಿದ್ದು, ಇನ್ನಾದರೂ ಜನಪ್ರತಿನಿಧಿಗಳು ಇತ್ತ ಗಮನಹರಿಸಿ, ಇವರಿಗೆ ಮೂಲಭೂತ ಸೌಕರ್ಯವನ್ನಾದರೂ ಒದಗಿಸಬೇಕಾದ ಪರಿಸ್ಥಿತಿ ಇದೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ