ಗ್ಯಾರಂಟಿ ಯೋಜನೆಯಿಂದ ಹಣ ಕೊರತೆ? ಮುರ್ಡೇಶ್ವರ, ಗೋಕರ್ಣದ ಲೈಫ್ ಗಾರ್ಡ್ಸ್​ಗಳಿಗೆ ಕೊಟ್ಟಿಲ್ಲ ಮೂಲ ಸಲಕರಣೆ

| Updated By: ಆಯೇಷಾ ಬಾನು

Updated on: Oct 15, 2024 | 11:39 AM

ಮುರ್ಡೇಶ್ವರ, ಗೋಕರ್ಣಕ್ಕೆ ಬರುವ ಪ್ರವಾಸಿಗರ ಸುರಕ್ಷತೆಗೆ ಹಣದ ಕೊರತೆ ಎದುರಾಗಿದೆ. ಇಲ್ಲಿ ಕೆಲಸ ಮಾಡುವ ಲೈಫ್ ಗಾರ್ಡ್ಸ್ ಗಳಿಗೆ ಕೆಲಸ ಮಾಡಲು ಯಾವುದೇ ಮೂಲ ಸಲಕರಣೆ ಕೊಟ್ಟಿಲ್ಲ. ರಕ್ಷಣೆಗೆ ಅತ್ಯವಶ್ಯಕವಾಗಿರುವ ಬೋಟ್, ರೋಪ್ ಹಾಗೂ ಜಾಕೇಟನ್ನೂ ಕೊಟ್ಟಿಲ್ಲ. ಹೀಗೆ ಆದರೆ ನಾವು ಜನರ ರಕ್ಷಣೆ ಮಾಡುವುದು ಹೇಗೆ ಎಂದು ಅಳಲು ತೋಡಿಕೊಂಡಿದ್ದಾರೆ.

ಗ್ಯಾರಂಟಿ ಯೋಜನೆಯಿಂದ ಹಣ ಕೊರತೆ? ಮುರ್ಡೇಶ್ವರ, ಗೋಕರ್ಣದ ಲೈಫ್ ಗಾರ್ಡ್ಸ್​ಗಳಿಗೆ ಕೊಟ್ಟಿಲ್ಲ ಮೂಲ ಸಲಕರಣೆ
ಸಾಂದರ್ಭಿಕ ಚಿತ್ರ
Follow us on

ಕಾರವಾರ, ಅ.15: ಮುರ್ಡೇಶ್ವರ (Murdeshwar), ಗೋಕರ್ಣಕ್ಕೆ (Gokarna) ಬರುವ ಪ್ರವಾಸಿಗರ ಸುರಕ್ಷತೆಗೆ ಹಣದ ಕೊರತೆ ಎದುರಾಗಿದ್ದು ಜಲ ಕ್ರೀಡೆಗೆ ನಿರ್ಬಂಧ ಹೇರಲು ಪ್ರವಾಸೋದ್ಯಮ ಇಲಾಖೆ (Tourism Department) ನಿರ್ಧಾರ ಮಾಡಿದೆ. ಪ್ರವಾಸೋದ್ಯಮ ಇಲಾಖೆಯ ಎಡವಟ್ಟಿನ ನಿರ್ಧಾರದಿಂದ ಪ್ರವಾಸಿತಾಣ ಕಳೆಗುಂದಿದೆ. ಗ್ಯಾರಂಟಿ ಯೋಜನೆಯ ಇಫೆಕ್ಟ್​ನಿಂದಾಗಿ ಪ್ರವಾಸಿಗರ ರಕ್ಷಣೆಗೆ ಹಣದ ಕೊರತೆ ಎದುರಾಗಿದೆ. ಸೂಕ್ತ ಅನುದಾನ ಇಲ್ಲ ಎಂದು ಸುರಕ್ಷತಾ ಕ್ರಮ ಕೈಗೊಳ್ಳುವಲ್ಲಿ ಪ್ರವಾಸೋದ್ಯಮ ವಿಫಲವಾಗಿದೆ.

ಮುರ್ಡೇಶ್ವರ, ಗೋಕರ್ಣಕ್ಕೆ ಬರುವ ಪ್ರವಾಸಿಗರ ಸುರಕ್ಷತೆಗೆ ಹಣದ ಕೊರತೆ ಎದುರಾಗಿದೆ. ನಿತ್ಯ ಗೋಕರ್ಣ, ಮುರ್ಡೇಶ್ವರಕ್ಕೆ ಸಾವಿರಾರು ಪ್ರವಾಸಿಗರು ಬರುತ್ತಾರೆ. ಅದರಲ್ಲೂ ಬೋಟಿಂಗ್​ನಂತಹ ಜಲ ಸಾಹಸ ಕ್ರೀಡೆಗಳಲ್ಲಿ ಭಾಗಿಯಾಗಲು ನಿತ್ಯ ಸಾವಿರಾರು ಜನ ಇಲ್ಲಿಗೆ ಭೇಟಿ ನೀಡುತ್ತಾರೆ. ಆದ್ರೆ ಈ ರೀತಿ ಆಟ ಆಡುತ್ತಾ ಪ್ರಾಣ ಕಳೆದುಕೊಂಡವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೆ ಇದೆ. ಪ್ರವಾಸೋದ್ಯಮ ಇಲಾಖೆ ಕಾಟಾಚಾರಕ್ಕೆ ಲೈಫ್ ಗಾರ್ಡ್​ಗಳನ್ನ ನೇಮಕ ಮಾಡಿದೆ. ಏಕೆಂದರೆ ಲೈಫ್ ಗಾರ್ಡ್ಸ್ ಕೆಲಸ ಮಾಡಲು ಯಾವುದೇ ಸಲಕರಣೆ ಕೊಟ್ಟಿಲ್ಲ.

ಇದನ್ನೂ ಓದಿ: ಮುಡಾ ಕೇಸ್​ನಲ್ಲಿ ಸರ್ಚ್ ವಾರಂಟ್ ನೀಡಲು ವಿಳಂಬ: ಲೋಕಾಯುಕ್ತ ಅಧಿಕಾರಿಗಳ ವಿರುದ್ಧ ರಾಜ್ಯಪಾಲರಿಗೆ ದೂರು

ರಕ್ಷಣೆಗೆ ಅತ್ಯವಶ್ಯಕವಾಗಿರುವ ಬೋಟ್, ರೋಪ್ ಹಾಗೂ ಜಾಕೇಟನ್ನೂ ಕೊಟ್ಟಿಲ್ಲ. ಯಾವುದೇ ಸಲಕರಣೆ ಕೊಡದೆ ಬೇರೆಯವರಿಂದ ಕಾಡಿ ಬೇಡಿ ರಕ್ಷಣೆ ಮಾಡುವ ಪರಿಸ್ಥಿತಿ ಇದೆ. ಸಲಕರಣೆ ಕೊಡದೆ ಯಾರಾದ್ರೂ ನೀರು ಪಾಲಾಗಿ ಸಾವನಪ್ಪಿದ್ರೆ ನಮಗೆ ಬಂದು ಬೈತಾರೆ. ಬೇರೆಯವರನ್ನ ಕಾಡಿ ಬೇಡಿ ತಗೊಂಡು ಹೋಗುವಷ್ಟರಲ್ಲಿ ನೀರುಪಾಲಾದ ವ್ಯಕ್ತಿ ಸಾವನಪ್ಪಿರ್ತಾನೆ. ನಮಗೆ ಯಾವುದೇ ಸಲಕರಣೆ ಕೊಡದೆ ಪ್ರವಾಸಿಗರ ರಕ್ಷಣೆ ಮಾಡುವುದು ಹೇಗೆ ಎಂದು Tv9 ಬಳಿ ಮುರ್ಡೇಶ್ವರ ಕಡಲ ತೀರದ ಲೈಫ್ ಗಾರ್ಡ್ ಅಳಲು ತೋಡಿಕೊಂಡಿದ್ದಾರೆ.

ಇನ್ನು ಮತ್ತೊಂದೆಡೆ ಸಲಕರಣೆ ನೀಡಲು ಹಣದ ವ್ಯವಸ್ಥೆ ಇಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾ ಅವರು ಕಡಲ ತೀರ ರಕ್ಷಣೆಗೆ ಅನುದಾನಕ್ಕಾಗಿ ಸರ್ಕಾರಕ್ಕೆ ಮನವಿ ಮಾಡಿದ್ದು ಜಿಲ್ಲಾಧಿಕಾರಿಗಳ ಮನವಿಗೆ ಇದುವರೆಗೂ ಸರ್ಕಾರ ಸ್ಪಂದಿಸಿಲ್ಲ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ