ಶಿರಸಿಯಲ್ಲಿ ತಲೆಯನ್ನೇ ಕಿತ್ತು ಹರಿದು ಹಾಕಿದ ಕರಡಿ; ವ್ಯಕ್ತಿ ಸ್ಥಳದಲ್ಲೇ ಸಾವು

ಓಂಕಾರ್ ಕಾಡಿಗೆ ತೆರಳಿದ್ದ ವೇಳೆ ಕರಡಿ ಏಕಾಏಕಿ ದಾಳಿ ನಡೆಸಿದೆ. ದಾಳಿ ವೇಳೆ ತಲೆ ಭಾಗವನ್ನೆ ಕಿತ್ತು ಹರಿದು ಹಾಕಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಶಿರಸಿಯಲ್ಲಿ ತಲೆಯನ್ನೇ ಕಿತ್ತು ಹರಿದು ಹಾಕಿದ ಕರಡಿ; ವ್ಯಕ್ತಿ ಸ್ಥಳದಲ್ಲೇ ಸಾವು
ಸಾಂದರ್ಭಿಕ ಚಿತ್ರ
Image Credit source: The Independent
Updated By: ಆಯೇಷಾ ಬಾನು

Updated on: Aug 10, 2022 | 5:51 PM

ಕಾರವಾರ: ಕರಡಿ ದಾಳಿಗೆ ವ್ಯಕ್ತಿ ಓರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ದೇವನಹಳ್ಳಿಯಲ್ಲಿ ನಡೆದಿದೆ. ಓಂಕಾರ ಜೈನ್(52) ಕರಡಿ ದಾಳಿಗೆ ಮೃತಪಟ್ಟಿರುವ ವ್ಯಕ್ತಿ. ಓಂಕಾರ್ ಕಾಡಿಗೆ ತೆರಳಿದ್ದ ವೇಳೆ ಕರಡಿ ಏಕಾಏಕಿ ದಾಳಿ ನಡೆಸಿದೆ. ದಾಳಿ ವೇಳೆ ತಲೆ ಭಾಗವನ್ನೆ ಕಿತ್ತು ಹರಿದು ಹಾಕಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಕೆರೆಯಲ್ಲಿ ಮೊಳಸೆ ಪ್ರತ್ಯಕ್ಷ ಗಾಬರಿಗೊಂಡ ಜನ

ಯಾದಗಿರಿ: ಜಿಲ್ಲೆಯ ಹುಣಸಗಿ ತಾಲೂಕಿನ ರಾಯನಪಾಳ್ಯ ಗ್ರಾಮದ ಕೆರೆಯಲ್ಲಿ ಮೊಳಸೆ ಪ್ರತ್ಯಕ್ಷವಾಗಿದ್ದು ಮೊಸಳೆಯನ್ನು ನೋಡಿ ಜನ ಗಾಬರಿಗೊಂಡ ಘಟನೆ ನಡೆದಿದೆ. ಗ್ರಾಮಸ್ಥರು ಕೆರೆಯಲ್ಲಿ‌ ನೀರು ತರಲು ಹೋದಾಗ ಮೊಸಳೆ ಪ್ರತ್ಯಕ್ಷವಾಗಿದೆ. ಹೀಗಾಗಿ ಜನ ಕೆರೆಗೆ ನೀರು ತರಲು ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಹಾಗೂ ಆದಷ್ಟು ಬೇಗ ಮೊಸಳೆಯನ್ನ ಕೆರೆಯಿಂದ ಸ್ಥಳಾಂತರ ಮಾಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಎಕ್ಸಿಲ್ ಕಟ್ ಆಗಿ ಕೆರೆಗೆ ಬಿದ್ದ ಟ್ರ್ಯಾಕ್ಟರ್

ಧಾರವಾಡ: ಎಕ್ಸಿಲ್ ಕಟ್ ಆಗಿ ಟ್ರ್ಯಾಕ್ಟರ್ ಕೆರೆಗೆ ಬಿದ್ದ ಘಟನೆ ಧಾರವಾಡ ಹೊರವಲಯದ ಕೆಲಗೇರಿ ಕೆರೆಯಲ್ಲಿ ನಡೆದಿದೆ. ಕೆಳಗೆ ಸಿಲುಕಿದ್ದ ಚಾಲಕನನ್ನು ಸ್ಥಳೀಯರು ಹೊರ ತೆಗೆದು ಪ್ರಾಣ ಉಳಿಸಿದ್ದಾರೆ. ಟ್ರ್ಯಾಕ್ಟರ್ ನಲ್ಲಿ ನಾಲ್ಕು ಜನ ಪ್ರಯಾಣಿಸುತ್ತಿದ್ದರು. ನಾಲ್ವರ ಪೈಕಿ ಟ್ರ್ಯಾಕ್ಟರ್ ಕೆಳಗೆ ಸಿಲುಕಿದ್ದ ಚಾಲಕನ್ನು ಸ್ಥಳೀಯರು ರಕ್ಷಿಸಿದ್ದು ಚಾಲಕನ ಸ್ಥೀತಿ ಗಂಭೀರವಾಗಿದೆ. ಮೂವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಧಾರವಾಡ ಜಿಲ್ಲಾಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Published On - 5:11 pm, Wed, 10 August 22