ಕಾರವಾರ: ಕಳೆದ ಒಂದು ವಾರದಿಂದ ಈ ಗ್ರಾಮದಲ್ಲಿ ಕೋತಿಯ ಕಾಟ ಹೆಚ್ಚಾಗಿದೆ. ಊರಿನ ಜನರ ಮೇಲೆ ಕೋತಿ ದಾಳಿ ಮಾಡಿದ್ದು ಭಯ ಹುಟ್ಟುವಂತೆ ಮಾಡಿದೆ. ಹೀಗಾಗಿ ಆಂತಕಗೊಂಡ ಅಲ್ಲಿಯ ಜನ ಗುಂಪು ಗುಂಪಾಗಿ ಕೈಯಲ್ಲಿ ಕೋಲು ಹಿಡಿದು ಕೋತಿಯನ್ನು ಮಟ್ಟ ಹಾಕಲು ರೆಡಿಯಾಗಿದ್ದಾರೆ.
10 ಕ್ಕೂ ಹೆಚ್ಚು ಜನರ ಮೇಲೆ ದಾಳಿ ಮಾಡಿದ ಕೋತಿ
ಉತ್ತರಕನ್ನಡ ಜಿಲ್ಲೆ ಅಂಕೋಲದ ಬಬ್ರೂವಾಡ ಗ್ರಾಮದಲ್ಲಿ ಒಂದೇ ಒಂದು ಕೋತಿ ಗ್ರಾಮದ ಜನರ ನಿದ್ದೆ ಹಾಳು ಮಾಡಿದೆ. ಇಷ್ಟು ದಿನ ನೆಮ್ಮದಿಯಿಂದ ಇದ್ದ ಈ ಊರಿಗೆ ಏಕಾಏಕಿ ಕೋತಿ ಎಂಟ್ರಿ ಕೊಟ್ಟಿದೆ. ಒಂದು ವಾರದಿಂದ ಬಿಟ್ಟೂ ಬಿಡದೆ ಜನರ ಮೇಲೆ ಅಟ್ಯಾಕ್ ಮಾಡ್ತಿದೆ. ಹತ್ತಾರು ಜನರಿಗೆ ಕಚ್ಚಿ ರಕ್ತಸ್ರಾವವಾಗುವಂತೆ ತೀವ್ರವಾಗಿ ಗಾಯ ಮಾಡಿದೆ. ಲಕ್ಷ್ಮಿ ಎಂಬ ವೃದ್ಧೆಯ ಮಂಗನ ದಾಳಿಯಿಂದ ನರಳುವಂತಾಗಿದೆ. ಇನ್ನೂ ಮಂಗನ ಭಯಕ್ಕೆ ಚಿಕ್ಕ ಮಕ್ಕಳು, ವೃದ್ಧರು, ಮಹಿಳೆಯರು ಮನೆಯಿಂದ ಆಚೆ ಬರುವುದಕ್ಕು ಭಯ ಪಡುವಂತಾಗಿದೆ.
ಒಂದು ವಾರದಿಂದ ಯಾವುದೇ ಕೆಲಸಕ್ಕೆ ಹೋಗದೆ ಮಂಗನನ್ನು ಹಿಡಿಯುವುದೇ ಇಲ್ಲಿಯ ಜನ್ರಿಗೆ ದೊಡ್ಡ ಕಾಯಕವಾಗಿದೆ. ಕೈಯಲ್ಲಿ ಕೋಲು ಹಿಡಿದು, ಪಟಾಕಿ ಹಚ್ಚುತ್ತ ಒಂದು ಕಡೆಯಿಂದ ಮತ್ತೊಂದು ಕಡೆ ಮಂಗನನ್ನು ಓಡಿಸುತ್ತಿದ್ದಾರೆ. ಅರಣ್ಯ ಸಿಬ್ಬಂದಿ, ಅರವಳಿಕೆ ತಜ್ಞರು, ಡೇರಿಂಗ್ ಟೀಮ್ ಎಲ್ಲರೂ ಮಂಗನನ್ನು ಹಿಡಿಯಲು ಪ್ರಯತ್ನ ಪಡ್ತಿದ್ದಾರೆ. ವಿಶೇಷ ಅಂದ್ರೆ ಒಂಟಿಯಾಗಿ ಓಡಾಡೋ ಮಹಿಳೆಯರನ್ನೇ ಕೋತಿ ಟಾರ್ಗೆಟ್ ಮಾಡಿ ಕಚ್ಚುತ್ತಿದೆ. ಒಟ್ಟಾರೆ, ಕೋತಿ ಕಾಟದಿಂದ ಗ್ರಾಮಸ್ಥರು ಹೈರಾಣಾಗಿದ್ದು, ಹೇಗಾದ್ರು ಮಂಗ ಸೆರೆ ಸಿಕ್ರೆ ಸಾಕಪ್ಪ ಅಂತ ಅಂದುಕೊಳ್ತಿದ್ದಾರೆ.
ವರದಿ: ವಿನಾಯಕ ಬಡಿಗೇರ, ಟಿವಿ 9 ಕಾರವಾರ
ಇದನ್ನೂ ಓದಿ: ಕಿರುತೆರೆ ಸೀರಿಯಲ್ ನಿರ್ದೇಶಕ ಅರವಿಂದ್ ಕೌಶಿಕ್ ಬಂಧನ: ನಿರ್ಮಾಪಕರಿಗೆ 73 ಲಕ್ಷ ರೂ. ವಂಚಿಸಿದ ಆರೋಪ
ಗೀತಮ್ ಕಾಲೇಜಿನ ಮೇಲೆ ವಿದ್ಯಾರ್ಥಿಗಳು ಕಲ್ಲುತೂರಾಟ ನಡೆಸಿದ್ದಕ್ಕೆ ವಿದ್ಯಾರ್ಥಿನಿ ಸಾವು ಬಿಟ್ಟು ಬೇರೆ ಕಾರಣಗಳಿವೆಯೇ?