ಉತ್ತರ ಕನ್ನಡ: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ (Siddapur, Uttara Kannada) ಮಂಗನ ಕಾಯಿಲೆಗೆ (Monkey Fever) 85 ವರ್ಷದ ವೃದ್ಧೆ ಜಾನಕಿ ಹೆಗಡೆ ಬಲಿಯಾಗಿದ್ದಾರೆ. ಒಂದು ವಾರದಲ್ಲಿ ಮಂಗನ ಕಾಯಿಲೆಯ 8 ಸೋಂಕಿತರು ಪತ್ತೆಯಾಗಿದ್ದಾರೆ. ಸಿದ್ದಾಪುರ ತಾಲೂಕಿನ ಹಲಗೇರಿ, ಕೋಲ್ ಸಿರ್ಸಿ, ಕಾನಸೂರು, ಬೀಳಗಿ ಗ್ರಾಮದಲ್ಲಿ ಹೊನ್ನಾವರ ತಾಲೂಕಿನ ಗೇರುಸೊಪ್ಪದಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡಿದೆ. ಒಂದೇ ವಾರದಲ್ಲಿ 8 ಸೋಂಕಿತರು ಪತ್ತೆಯಿಂದ ಜನರಲ್ಲಿ ಆತಂಕ ಹೆಚ್ಚಾಗಿದೆ. ಮಂಗನ ಕಾಯಿಲೆ ತಡೆಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಹೇಳಿದ್ದಾರೆ.
ಕೃಷ್ಣಾ ನದಿಯಲ್ಲಿ ಮೀನು ಹಿಡಿಯಲು ಹೋಗಿ ಸಹೋದರಿಬ್ಬರು ನಾಪತ್ತೆ
ವಿಜಯಪುರ: ವಿಜಯಪುರ ಜಿಲ್ಲೆ ಕೊಲ್ಹಾರ ತಾಲೂಕಿನ ಬಳೂತಿ ಜಾಕ್ವೆಲ್ ಬಳಿ ಕೃಷ್ಣಾ ನದಿಯಲ್ಲಿ ಮೀನು ಹಿಡಿಯಲು ಹೋಗಿ ಸಹೋದರಿಬ್ಬರು ನಾಪತ್ತೆಯಾಗಿರುವ ಘಟನೆ ನಡೆದಿದೆ. ಕೃಷ್ಣಾ ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದ ಸಹೋದರರಾದ ಬಳೂತಿ ಗ್ರಾಮದ ಬಸಪ್ಪ ಮಳೆಪ್ಪ ದಳವಾಯಿ (29) ಮತ್ತು ಅಜೀತ್ ಮಳೆಪ್ಪ ದಳವಾಯಿ (25) ನಾಪತ್ತೆಯಾದವರು. ನಾಪತ್ತೆಯಾಗಿರುವ ಮೀನುಗಾರ ಸಹೋದರರಿಗಾಗಿ ಹುಡುಕಾಟ ನಡೆದಿದೆ. ಬಳೂತಿ, ರೊಳ್ಳಿ, ನದಿ ದಂಡೆಗಳಲ್ಲಿ ಅಗ್ನಿ ಶಾಮಕ ದಳದಿಂದ ತೀವ್ರ ಹುಡುಕಾಟ ನಡೆದಿದೆ. ಕೊಲ್ಹಾರ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದಿದೆ.
Also Read:
GAIL ಕಂಪನಿ ಅಧಿಕಾರಿಗಳಿಂದಲೂ ಲಂಚ ಪಡೆದ ಚಿಕ್ಕಜಾಲ ಇನ್ಸ್‌ಪೆಕ್ಟರ್ ಹಂಸವೇಣಿ, ಎಸಿಬಿ ಬಲೆಗೆ ಬಿದ್ದು ವಿಲವಿಲ
Also Read:
ಆರ್ಮಿಯಲ್ಲಿ ಹವಾಲ್ದಾರನಾಗಿರುವ ಬಾಗಲಕೋಟೆ ಯುವಕ ಏಷ್ಯನ್ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಕಂಚು ಗೆದ್ದ
Published On - 4:05 pm, Wed, 20 April 22