ಕಾರವಾರದ ಬೈತಕೋಲ್ ಬ್ರೇಕ್ ವಾಟರ್‌ನಲ್ಲಿ ಗಾಳಕ್ಕೆ ಸಿಕ್ಕ ಅಪರೂಪದ ಡಿಸ್ಕೊ ಫಿಶ್; ಇಲ್ಲಿದೆ ವಿಡಿಯೋ

| Updated By: ಗಂಗಾಧರ​ ಬ. ಸಾಬೋಜಿ

Updated on: Apr 17, 2022 | 6:31 PM

ಮಾಣಿಗೌಡ ಎಂಬ ಮೀನುಗಾರನ ಗಾಳಕ್ಕೆ ಸಿಕ್ಕ ಅಪರೂಪದ ಮೀನು ಸಿಕ್ಕಿದೆ. ಕಲರ್‌ಪುಲ್ ಮೀನು ನೋಡಿ ಮೀನುಗಾರರು ಖುಷಿ ಪಟ್ಟಿದ್ದಾರೆ.

ಕಾರವಾರ: ನಗರದ ಬೈತಕೋಲ್ ಬ್ರೇಕ್ ವಾಟರ್‌ ಮೀನುಗಾರನ ಗಾಳಕ್ಕೆ ಅಪರೂಪದ ಡಿಸ್ಕೊ ಮೀನು ಸಿಕ್ಕಿದೆ. ಡಿಸ್ಕೊ (ತಂಬೂಸ್ ಮೀನು) ಎಂದು ಕರೆಯುವ ಕಲರ್ ಪುಲ್ ಮೀನು. ಮಾಣಿಗೌಡ ಎಂಬ ಮೀನುಗಾರನ ಗಾಳಕ್ಕೆ ಸಿಕ್ಕ ಅಪರೂಪದ ಮೀನು ಸಿಕ್ಕಿದೆ. ಕಲರ್‌ಪುಲ್ ಮೀನು ನೋಡಿ ಮೀನುಗಾರರು ಖುಷಿ ಪಟ್ಟಿದ್ದಾರೆ. ಈ ಡಿಸ್ಕೊ ಮೀನು (Disco Fish) ಹೆಚ್ಚಾಗಿ ಅಮೆಜಾನ್ ನದಿಯಲ್ಲಿ ಕಂಡುಬರುತ್ತವೆ. ಇದು 12 ವರ್ಷಗಳ ಜೀವಿತಾವಧಿ ಹೊಂದಿರುತ್ತದೆ. ಇದು ಸಾಮಾನ್ಯವಾಗಿ 25 ಸೆಂಟಿಮೀಟರ್ ಉದ್ದವಾಗಿದ್ದು, ದುಂಡಾದ ಮತ್ತು ಚಪ್ಪಟೆ ಆಕಾರ, ಮತ್ತು ತಲೆಯಿಂದ ಬಾಲಕ್ಕೆ ಹೋಗುವ ರೇಖೆಗಳನ್ನು ಹೊಂದಿದೆ. ನೀರಿನ ಮೂಲಕ ವೇಗವಾಗಿ ಚಲಿಸಲು ರೆಕ್ಕೆಗಳು ತ್ರಿಕೋನ ಆಕಾರದಲ್ಲಿರುತ್ತವೆ. ಅವರ ಕಣ್ಣುಗಳು ದೊಡ್ಡದಾಗಿರುತ್ತವೆ ಮತ್ತು ಸಾಮಾನ್ಯವಾಗಿ ಕೆಂಪು ಬಣ್ಣದ್ದಾಗಿರುತ್ತವೆ.

ಇದನ್ನೂ ಓದಿ:

‘ಎಸ್​ಟಿ ಸಮುದಾಯಕ್ಕೆ ಶೇ. 7.5ರಷ್ಟು ಮೀಸಲಾತಿ ಕೊಡದಿದ್ದರೆ ರಾಜಕೀಯ ನಿವೃತ್ತಿ’; ಸಚಿವ ಶ್ರೀರಾಮುಲು ಹೇಳಿಕೆ

ಕರ್ನಾಟಕ ರಾಜ್ಯದಲ್ಲಿ ಮಾತ್ರ ಕಾಂಗ್ರೆಸ್​ ಸ್ವಲ್ಪ ಉಸಿರಾಡುತ್ತಿದೆ; ಮಾಜಿ ಸಿಎಂ ಯಡಿಯೂರಪ್ಪ