ಕರ್ನಾಟಕ ರಾಜ್ಯದಲ್ಲಿ ಮಾತ್ರ ಕಾಂಗ್ರೆಸ್​ ಸ್ವಲ್ಪ ಉಸಿರಾಡುತ್ತಿದೆ; ಮಾಜಿ ಸಿಎಂ ಯಡಿಯೂರಪ್ಪ

ವಿಜಯನಗರ: ಕರ್ನಾಟಕ ರಾಜ್ಯದಲ್ಲಿ ಮಾತ್ರ ಕಾಂಗ್ರೆಸ್ (Congress)​ ಸ್ವಲ್ಪ ಉಸಿರಾಡುತ್ತಿದೆ. ಹಾಗಂತ ಕಾಂಗ್ರೆಸ್​ ಪಕ್ಷವನ್ನು ಲಘುವಾಗಿ ಪರಿಗಣಿಸುವುದು ಬೇಡ ಎಂದು ಜಿಲ್ಲೆಯ ಹೊಸಪೇಟೆಯಲ್ಲಿ ನಡೆಯುತ್ತಿರುವ ರಾಜ್ಯ ಬಿಜೆಪಿ ಕಾರ್ಯಕಾರಿಣಿಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ. ಸಂಘಟನೆ ಬಗ್ಗೆ ಮುಂದಿನ ದಿನಗಳಲ್ಲಿ ಗಂಭೀರವಾಗಿ ತೆಗೆದುಕೊಳ್ಳಿ. ಇಲ್ಲಿರುವವರು ಯಾರೂ ಕಾರ್ಯಕರ್ತರಲ್ಲ, ಎಲ್ಲರೂ ನಾಯಕರು. ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಕಾರ್ಯಕ್ರಮಗಳನ್ನು ಮನೆ ಮನೆಗೆ ತಿಳಿಸಿ ಎಂದು ಹೇಳಿದರು. ಮುಂದಿನ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನಗಳಲ್ಲಿ ಗೆಲ್ಲಬೇಕು. ರಾಜ್ಯಾದ್ಯಂತ […]

ಕರ್ನಾಟಕ ರಾಜ್ಯದಲ್ಲಿ ಮಾತ್ರ ಕಾಂಗ್ರೆಸ್​ ಸ್ವಲ್ಪ ಉಸಿರಾಡುತ್ತಿದೆ; ಮಾಜಿ ಸಿಎಂ ಯಡಿಯೂರಪ್ಪ
ಮಾಜಿ ಸಿಎಂ ಯಡಿಯೂರಪ್ಪ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Apr 17, 2022 | 5:30 PM

ವಿಜಯನಗರ: ಕರ್ನಾಟಕ ರಾಜ್ಯದಲ್ಲಿ ಮಾತ್ರ ಕಾಂಗ್ರೆಸ್ (Congress)​ ಸ್ವಲ್ಪ ಉಸಿರಾಡುತ್ತಿದೆ. ಹಾಗಂತ ಕಾಂಗ್ರೆಸ್​ ಪಕ್ಷವನ್ನು ಲಘುವಾಗಿ ಪರಿಗಣಿಸುವುದು ಬೇಡ ಎಂದು ಜಿಲ್ಲೆಯ ಹೊಸಪೇಟೆಯಲ್ಲಿ ನಡೆಯುತ್ತಿರುವ ರಾಜ್ಯ ಬಿಜೆಪಿ ಕಾರ್ಯಕಾರಿಣಿಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ. ಸಂಘಟನೆ ಬಗ್ಗೆ ಮುಂದಿನ ದಿನಗಳಲ್ಲಿ ಗಂಭೀರವಾಗಿ ತೆಗೆದುಕೊಳ್ಳಿ. ಇಲ್ಲಿರುವವರು ಯಾರೂ ಕಾರ್ಯಕರ್ತರಲ್ಲ, ಎಲ್ಲರೂ ನಾಯಕರು. ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಕಾರ್ಯಕ್ರಮಗಳನ್ನು ಮನೆ ಮನೆಗೆ ತಿಳಿಸಿ ಎಂದು ಹೇಳಿದರು. ಮುಂದಿನ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನಗಳಲ್ಲಿ ಗೆಲ್ಲಬೇಕು. ರಾಜ್ಯಾದ್ಯಂತ ಪ್ರವಾಸಮಾಡಿ ಪಕ್ಷವನ್ನು ಸಂಘಟನೆ ಮಾಡಬೇಕು. ಪ್ರತಿ ತಿಂಗಳು ಕೋರ್​ ಕಮಿಟಿ ಸಭೆ ಮಾಡಿಕೊಂಡು ಬರಬೇಕು. ಯಾವುದೇ ಸಮಸ್ಯೆಗಳಿದ್ದರೆ ಕೋರ್​ ಕಮಿಟಿಯಲ್ಲಿ ಚರ್ಚಿಸಬೇಕು. ಬಿಜೆಪಿ 150 ಸ್ಥಾನ ಗೆಲ್ಲುವುದಕ್ಕಾಗಿ ಎಲ್ಲರೂ ಕೆಲಸ ಮಾಡಬೇಕು ಎಂದರು.

ಎಸ್​ಟಿ ಸಮುದಾಯಕ್ಕೆ 7.5% ಮೀಸಲಾತಿಗೆ ಆಗ್ರಹಿಸಿ ಹೊಸಪೇಟೆ ಪಟ್ಟಣದಲ್ಲಿ ಎಸ್​ಟಿ ಸಮುದಾಯದ ಹೋರಾಟ ಸಮಿತಿಯಿಂದ ಪ್ರತಿಭಟನೆ ಮಾಡಲಾಗುತ್ತಿದೆ. ಸಿಎಂ ಕರೆದುಕೊಂಡು ಬರುವ ಭರವಸೆಯನ್ನು ಆನಂದ್ ಸಿಂಗ್ ನೀಡಿದ್ದರು. ಆದರೆ ಹೋರಾಟದ ಸ್ಥಳಕ್ಕೆ ಇನ್ನೂ ಸಿಎಂ ಬೊಮ್ಮಾಯಿ ಆಗಮಿಸಿಲ್ಲ. ಸಿಎಂ ಆಗಮಿಸದಿದ್ದಕ್ಕೆ ಆನಂದ್ ಸಿಂಗ್ ಭೇಟಿ ನೀಡಿ ಭಾಷಣ ಮಾಡಿದ್ದು, ಹೋರಾಟಗಾರರ ಮನವೊಲಿಸು ಪ್ರಯತ್ನಿಸಿದರು. ಸಿಎಂ ಬಸವರಾಜ ಬೊಮ್ಮಾಯಿ ಬರುವ ಪರಿಸ್ಥಿತಿಯಲ್ಲಿ ಇಲ್ಲ. ಕಾರ್ಯಕಾರಿಣಿ ಬಳಿಕ ಸಿಎಂ ಬೊಮ್ಮಾಯಿ ಬ್ಯುಸಿಯಾಗಿದ್ದಾರೆ. ಹೋರಾಟ ಸಮಿತಿಯವರು ಬಂದರೆ ಸಿಎಂ ಭೇಟಿ ಮಾಡಿಸುವೆ ಎಂದು ಸಚಿವ ಆನಂದ್ ಸಿಂಗ್ ಹೇಳಿದ್ದು, ಅವರ ಮಾತಿಗೂ ಬಗ್ಗದ ಪ್ರತಿಭಟನಾಕಾರರು ವೇದಿಕೆಗೆ ಸಿಎಂ ಕರೆತರುವಂತೆ ಪಟ್ಟುಹಿಡಿದಿದ್ದಾರೆ.

ಪ್ರತಿಭಟನಾ ಸ್ಥಳಕ್ಕೆ ಸಚಿವ ಶ್ರೀರಾಮುಲು ಭೇಟಿ ನೀಡಿದ್ದು, ಒಂದು ತಿಂಗಳೊಳಗೆ ಸುಭಾಷ ಅಡಿಯವರ ವರದಿಯನ್ನ ಹಿಂದೆ ಪಡೆಯುತ್ತೇವೆ. ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ ಅವರ ವರದಿ ಜಾರಿಗೊಳಿಸುವೆ. ಶ್ರೀರಾಮುಲುರನ್ನ ಸಮುದಾಯ ಕಳೆದುಕೊಳ್ಳಬಾರದು. ಸಮುದಾಯಕ್ಕಾಗಿ ನಾನು ಜೀವನವನ್ನೆ ಮೀಸಲಿಟ್ಟಿರುವೆ. ವಾಲ್ಮೀಕಿ ಸ್ವಾಮೀಜಿ ಮೀಸಲಾತಿ ಸಿಗುವವರೆಗೂ ಎದ್ದು ಎಳಲ್ಲ ಅಂತಾರೆ. ಆ ಯಪ್ಪ ಯಾರು ಮಾತು ಕೇಳಲ್ಲ. ನೀನೂ ಒಪ್ಪಿಸುತ್ತೀಯಾ ಎಂದು ಪ್ರತಿಭಟನಾಕರಾರನ್ನು ಶ್ರೀರಾಮುಲು ಪ್ರಶ್ನಿಸಿದರು. ನಾನು ಉರುಳು ಸೇವೆ ಮಾಡುತ್ತಾ ಬೆಂಗಳೂರಿಗೆ ಬರುವೆ. ಸ್ವಾಮೀಜಿಯವರನ್ನ ಪ್ರತಿಭಟನೆಯಿಂದ ಹಿಂದೆ ನೀವೂ ಸರಿಸುತ್ತೀರಾ ಎಂದು ಪ್ರತಿಭಟನಾಕಾರರನ್ನ ರಾಮುಲು ಗದರಿದ್ದಾರೆ.

ಇದನ್ನೂ ಓದಿ:

ಲವ್ ಜಿಹಾದ್ ಬದಲು ಲವ್ ಕೇಸರಿ ವಿವಾದ ಪ್ರಕರಣ; ರಾಯಚೂರಿನ ಪಶ್ಚಿಮ ಠಾಣೆ ಪೊಲೀಸರಿಂದ ಇಬ್ಬರ ಬಂಧನ