Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೊಚಹಾಂ ವಿಧಾನಸಭಾ ಉಪಚುನಾವಣೆಯಲ್ಲಿ ಸೋಲು; ಜನರೇ ಮಾಲೀಕರು ಎಂದು ಪ್ರತಿಕ್ರಿಯಿಸಿದ ನಿತೀಶ್ ಕುಮಾರ್

Bochahan bypoll ಶನಿವಾರ ನಡೆದ ಉಪಚುನಾವಣೆಯಲ್ಲಿ ಲಾಲು ಯಾದವ್ ಅವರ ರಾಷ್ಟ್ರೀಯ ಜನತಾ ದಳ ದೊಡ್ಡ ಗೆಲುವು ದಾಖಲಿಸಿದೆ. ಆರ್​​ಜೆಡಿಯ ಅಮರ್ ಪಾಸ್ವಾನ್ 82,000 ಕ್ಕೂ ಹೆಚ್ಚು ಮತಗಳನ್ನು ಗಳಿಸಿದ್ದು, ಬಿಜೆಪಿಯ ಅಭ್ಯರ್ಥಿ ಬೇಬಿ ಕುಮಾರಿ 46,000 ಮತಗಳಿಸಿದ್ದಾರೆ.

ಬೊಚಹಾಂ ವಿಧಾನಸಭಾ ಉಪಚುನಾವಣೆಯಲ್ಲಿ ಸೋಲು; ಜನರೇ ಮಾಲೀಕರು ಎಂದು ಪ್ರತಿಕ್ರಿಯಿಸಿದ ನಿತೀಶ್ ಕುಮಾರ್
ನಿತೀಶ್ ಕುಮಾರ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Apr 17, 2022 | 6:25 PM

ಪಟನಾ:ಬೊಚಹಾಂ ವಿಧಾನಸಭಾ ಉಪಚುನಾವಣೆಯಲ್ಲಿ (Bochahan bypoll) ಆಡಳಿತಾರೂಢ ಜೆಡಿಯು-ಬಿಜೆಪಿಯ ಸೋಲಿನ ಬಗ್ಗೆ ಪ್ರತಿಕ್ರಿಯಿಸಲು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಅವರನ್ನು ಕೇಳಿದಾಗ ಪ್ರಶ್ನೆಗಳಿಗೆ ಉತ್ತರಿಸುವ ಮೂಡ್​​ನಲ್ಲಿ ಇರಲಿಲ್ಲ. ತೇಜಸ್ವಿ ಯಾದವ್ ಮತ್ತು ಆರ್‌ಜೆಡಿ (RJD) ಇನ್ನೂ ಹೆಚ್ಚಿನ ಸ್ಥಾನ ಗಳಿಸಿದ್ದು, ಈ ಬಗ್ಗೆ ಕೇಳಿದಾಗ ಜನತಾ ದಳ (ಯುನೈಟೆಡ್) ಮುಖ್ಯಸ್ಥರು ‘ಜನತಾ ಮಾಲಿಕ್ ಹೈ’ (ಜನರೇ ಮಾಲೀಕರು) ಎಂದು ಉತ್ತರಿಸಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಶನಿವಾರ ನಡೆದ ಉಪಚುನಾವಣೆಯಲ್ಲಿ ಲಾಲು ಯಾದವ್ ಅವರ ರಾಷ್ಟ್ರೀಯ ಜನತಾ ದಳ ದೊಡ್ಡ ಗೆಲುವು ದಾಖಲಿಸಿದೆ. ಆರ್​​ಜೆಡಿಯ ಅಮರ್ ಪಾಸ್ವಾನ್ 82,000 ಕ್ಕೂ ಹೆಚ್ಚು ಮತಗಳನ್ನು ಗಳಿಸಿದ್ದು, ಬಿಜೆಪಿಯ ಅಭ್ಯರ್ಥಿ ಬೇಬಿ ಕುಮಾರಿ 46,000 ಮತಗಳಿಸಿದ್ದಾರೆ. ಈ ಸೋಲು ಅಧಿಕಾರದ ತಕ್ಷಣದ ಸಮತೋಲನದ ಮೇಲೆ ಪರಿಣಾಮ ಬೀರುವುದಿಲ್ಲ ಆದರೆ ಯಾದವ್ ಮತ್ತು ಆರ್ ಜೆಡಿ ಗೆ ಹೆಚ್ಚಿನ ವೇಗವನ್ನು ನೀಡುತ್ತದೆ. ಇದು 2020 ರ ಚುನಾವಣೆಯಲ್ಲಿ ಬಿಜೆಪಿ-ಜೆಡಿಯು ಜೋಡಿಗೆ ಹೊಡೆತ ನೀಡಿದ್ದು ಆರ್ ಜೆಡಿ 75 ಸ್ಥಾನಗಳನ್ನು ಗೆದ್ದು ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು.  ಜೆಡಿಯು 43 ಸ್ಥಾನಗಳನ್ನು ಗೆದ್ದು ಬಿಜೆಪಿ 74 ಸ್ಥಾನಗಳನ್ನು ಗಳಿಸುವಂತೆ ಮಾಡಿದ ನಂತರ ನಿತೀಶ್ ಅವರನ್ನು ‘ಕಿರಿಯ’ ಪಾಲುದಾರ ಎಂದು ನೋಡಿದಾಗ ಇದು ಆಡಳಿತ ಪಕ್ಷಗಳ ನಡುವಿನ ಉದ್ವಿಗ್ನತೆಯನ್ನು ಹೆಚ್ಚಿಸಿದೆ ಎಂದು ಪರಿಗಣಿಸಲಾಗಿದೆ. ಜೆಡಿಯು ಜೊತೆಗಿನ ಸಂಬಂಧ ಹಳಸಿರುವ ಬಿಜೆಪಿ ಹಲವು ವಿಷಯಗಳಲ್ಲಿ ಮುನ್ನಡೆ ಸಾಧಿಸುತ್ತಿದೆ.

ಉಪಚುನಾವಣೆ ಫಲಿತಾಂಶವನ್ನು ವಿಕಾಸಶೀಲ ಇನ್ಸಾನ್ ಪಕ್ಷವು ಸಂಭ್ರಮಿಸಿತು, ಅದರ ಮುಖ್ಯಸ್ಥ ಮುಖೇಶ್ ಸಹಾನಿ ಅವರನ್ನು ಕೆಲವು ವಾರಗಳ ಹಿಂದೆ ಬಿಜೆಪಿಯಿಂದ ಸಚಿವ ಸ್ಥಾನದಿಂದ ವಜಾಗೊಳಿಸಲಾಗಿತ್ತು.

ವಿಐಪಿ ಟಿಕೆಟ್‌ನಲ್ಲಿ ಸ್ಥಾನ ಪಡೆದ ಹಾಲಿ ಶಾಸಕ ಮುಸಾಫಿರ್ ಪಾಸ್ವಾನ್ ಅವರ ನಿಧನದ ನಂತರ ಉಪಚುನಾವಣೆ ನಡೆದಿತ್ತು. ಅವರ ಪುತ್ರ ಅಮರ್ ಪಾಸ್ವಾನ್ ಸ್ಪರ್ಧಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು ಆದರೆ ಪಕ್ಷದೊಂದಿಗಿನ ಭಿನ್ನಾಭಿಪ್ರಾಯದಿಂದಾಗಿ ಅವರು ಆರ್‌ಜೆಡಿಗೆ ಹೋಗಿದ್ದರು.

ನಮ್ಮ ಸೋಲಿನಲ್ಲಿಯೂ ನಮಗೆ ಗೆಲುವು ಇರುತ್ತದೆ ಇತ್ತೀಚೆಗಷ್ಟೇ ಬಿಹಾರ ಸಂಪುಟದಿಂದ ವಜಾಗೊಂಡ ವಿಕಾಸಶೀಲ್ ಇನ್ಸಾನ್ ಪಕ್ಷದ (VIP) ಮುಖ್ಯಸ್ಥ ಮುಖೇಶ್ ಸಹಾನಿ, ಮಾಜಿ ಮಿತ್ರ ಪಕ್ಷವಾದ ಭಾರತೀಯ ಜನತಾ ಪಕ್ಷ (ಬಿಜೆಪಿ) ಜನತಾ ದಳದ(ಆರ್‌ಜೆಡಿ) ಮುಂದೆ ಸೋತಿರುವ ಬೊಚಹಾಂ ವಿಧಾನಸಭಾ ಉಪಚುನಾವಣೆಯಲ್ಲಿ ತಮ್ಮ ಪಕ್ಷದ ಸೋಲಿನಲ್ಲಿ ಗೆಲುವು ಸಾಧಿಸಿದೆ ಎಂದಿದ್ದಾರೆ. ಬೊಚಹಾಂ  ಅಸೆಂಬ್ಲಿ ಉಪಚುನಾವಣೆಗೆ ವಿಐಪಿಯಲ್ಲಿ ನಂಬಿಕೆಯನ್ನು ತೋರಿಸಿದ್ದಕ್ಕಾಗಿ ನಾವು ಜನರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ. ನಾವು ಗೆಲ್ಲಲು ಸ್ಪರ್ಧಿಸಿದ್ದೇವೆ ಮತ್ತು ಯಶಸ್ವಿಯಾಗಲಿಲ್ಲ. ಆದರೆ ಅಮರ್ ಪಾಸ್ವಾನ್ (ಆರ್‌ಜೆಡಿ) ಗೆಲುವಿಗಾಗಿ ನಾವು ಅಭಿನಂದಿಸುತ್ತೇವೆ. ನಮ್ಮ ಸೋಲಿನಲ್ಲಿಯೂ ನಮಗೆ ಗೆಲುವು ಇರುತ್ತದೆ ”ಎಂದು ಸಹಾನಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.

ಉಪಚುನಾವಣೆಯಲ್ಲಿ ಬಿಜೆಪಿ 36,000 ಮತಗಳಿಂದ ಸೋತಿದೆ. “ಕೆಲವು ರಾಜ್ಯ ನಾಯಕರಿಗೆ (ಬಿಜೆಪಿಯ) ಆತ್ಮಾವಲೋಕನಕ್ಕೆ ಇನ್ನೂ ಸಮಯವಿದೆ ಮತ್ತು ಕೇಂದ್ರ ಬಿಜೆಪಿ ನಾಯಕರನ್ನು ದಾರಿ ತಪ್ಪಿಸುವುದನ್ನು ನಿಲ್ಲಿಸಿ. 2024 (ಲೋಕಸಭಾ ಚುನಾವಣೆ) ಅಥವಾ 2025 (ಬಿಹಾರ ರಾಜ್ಯ ಚುನಾವಣೆ) ಬಿಜೆಪಿಗೆ ಹೆಚ್ಚು ಹಿನ್ನಡೆಯಾಗಲಿದೆ. ಬಿಜೆಪಿ ಬಿಹಾರ ಅಧ್ಯಕ್ಷ ಸಂಜಯ್ ಜೈಸ್ವಾಲ್ ರಾಜೀನಾಮೆ ನೀಡಬೇಕು ಎಂದು ಅವರು ಹೇಳಿದರು.

ಸಹಾನಿ ಅವರು ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸಂಪುಟದಲ್ಲಿ ಸಚಿವರಾಗಿದ್ದರು. ಆದರೆ, ಈ ವರ್ಷದ ಮಾರ್ಚ್‌ನಲ್ಲಿ ಅವರ ಪಕ್ಷದ ಮೂವರು ಶಾಸಕರು ಬಿಜೆಪಿ ಸೇರಿದ ನಂತರ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಲಾಗಿತ್ತು.  ಬೊಚಹಾಂ  ಉಪಚುನಾವಣೆಯಲ್ಲಿ ಆರ್‌ಜೆಡಿಯ ಅಮರ್ ಪಾಸ್ವಾನ್ ಶೇಕಡಾ 48.52 (82,562) ಮತಗಳನ್ನು ಗಳಿಸಿದರೆ, ವಿಐಪಿಯ ಗೀತಾ ಕುಮಾರಿ ಶೇಕಡಾ 17.21 ಮತಗಳನ್ನು ಪಡೆದರು. ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬೇಬಿ ಕುಮಾರಿ ಶೇ.26.98 ರಷ್ಟು ಮತ ಗಳಿಸಿದ್ದಾರೆ.

ಇದನ್ನೂ ಓದಿ: ರಾಮ ದೇವರಲ್ಲ, ಆತ ರಾಮಾಯಣದ ಒಂದು ಪಾತ್ರವಷ್ಟೇ; ಬಿಹಾರದ ಬಿಜೆಪಿ ಮಿತ್ರಪಕ್ಷದ ನಾಯಕನ ಅಚ್ಚರಿಯ ಹೇಳಿಕೆ

ಶಿವನಿಗೆ ಪೂಜಾ ಸಮಯದಲ್ಲಿ ಇಡಬಾರದ ವಸ್ತು ಯಾವುದು ಗೊತ್ತಾ?
ಶಿವನಿಗೆ ಪೂಜಾ ಸಮಯದಲ್ಲಿ ಇಡಬಾರದ ವಸ್ತು ಯಾವುದು ಗೊತ್ತಾ?
Daily Horoscope: ಸೂರ್ಯ ಮೀನ ರಾಶಿಗೆ, ಚಂದ್ರ ಮಿಥುನ ರಾಶಿಯಲ್ಲಿ ಸಂಚಾರ
Daily Horoscope: ಸೂರ್ಯ ಮೀನ ರಾಶಿಗೆ, ಚಂದ್ರ ಮಿಥುನ ರಾಶಿಯಲ್ಲಿ ಸಂಚಾರ
50 ಸಾವಿರ ರೂಪಾಯಿ ನೀಡಿದರು: ದರ್ಶನ್ ಸಹಾಯದ ಬಗ್ಗೆ ಶೈಲಶ್ರೀ ಮಾತು
50 ಸಾವಿರ ರೂಪಾಯಿ ನೀಡಿದರು: ದರ್ಶನ್ ಸಹಾಯದ ಬಗ್ಗೆ ಶೈಲಶ್ರೀ ಮಾತು
‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದ ಹಾಡು ಬಿಡುಗಡೆ ಮಾಡಿದ ಆನೆ; ವಿಡಿಯೋ ಸೂಪರ್
‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದ ಹಾಡು ಬಿಡುಗಡೆ ಮಾಡಿದ ಆನೆ; ವಿಡಿಯೋ ಸೂಪರ್
4 ಪಂದ್ಯಗಳಲ್ಲೂ ಮಾಲೀಕರಿಗೆ ನಿರಾಶೆ ಮೂಡಿಸಿದ ಪಂತ್
4 ಪಂದ್ಯಗಳಲ್ಲೂ ಮಾಲೀಕರಿಗೆ ನಿರಾಶೆ ಮೂಡಿಸಿದ ಪಂತ್
ಜಿಗಣಿಯಲ್ಲಿ ಮನೆಯೊಳಗೆ ನುಗ್ಗಿ ಬಿಂದಾಸಾಗಿ ಮಲಗಿದ ಚಿರತೆ; ಕಂಗಾಲಾದ ಮನೆಮಂದಿ
ಜಿಗಣಿಯಲ್ಲಿ ಮನೆಯೊಳಗೆ ನುಗ್ಗಿ ಬಿಂದಾಸಾಗಿ ಮಲಗಿದ ಚಿರತೆ; ಕಂಗಾಲಾದ ಮನೆಮಂದಿ
ಶಾಸಕರ ಹೆಸರು ಎಫ್​ಐಅರ್​ನಲ್ಲಿ ಬಂದ ನಂತರವೇ ವಿನಯ್ ಅಂತ್ಯ ಸಂಸ್ಕಾರ: ಪ್ರತಾಪ
ಶಾಸಕರ ಹೆಸರು ಎಫ್​ಐಅರ್​ನಲ್ಲಿ ಬಂದ ನಂತರವೇ ವಿನಯ್ ಅಂತ್ಯ ಸಂಸ್ಕಾರ: ಪ್ರತಾಪ
ಮೈಗೆ ದೂರಿನ ಪತ್ರ ಕಟ್ಟಿ ತೆವಳುತ್ತಾ ಸರ್ಕಾರಿ ಕಚೇರಿಗೆ ತೆರಳಿದ ವ್ಯಕ್ತಿ
ಮೈಗೆ ದೂರಿನ ಪತ್ರ ಕಟ್ಟಿ ತೆವಳುತ್ತಾ ಸರ್ಕಾರಿ ಕಚೇರಿಗೆ ತೆರಳಿದ ವ್ಯಕ್ತಿ
ಥೈಲ್ಯಾಂಡ್ ಪ್ರವಾಸ ಮುಗಿಸಿ, ಶ್ರೀಲಂಕಾಗೆ ತೆರಳಿದ ಪ್ರಧಾನಿ ಮೋದಿ
ಥೈಲ್ಯಾಂಡ್ ಪ್ರವಾಸ ಮುಗಿಸಿ, ಶ್ರೀಲಂಕಾಗೆ ತೆರಳಿದ ಪ್ರಧಾನಿ ಮೋದಿ
ಶಾಸಕರಾದ ಪೊನ್ನಣ್ಣ, ಮಂಥರ್​ಗೌಡ ಹೆಸರು ನಾಪತ್ತೆಯಾಗಿವೆ: ವಿನಯ್ ಸಹೋದರ
ಶಾಸಕರಾದ ಪೊನ್ನಣ್ಣ, ಮಂಥರ್​ಗೌಡ ಹೆಸರು ನಾಪತ್ತೆಯಾಗಿವೆ: ವಿನಯ್ ಸಹೋದರ