ಏಪ್ರಿಲ್​ 21-22ಕ್ಕೆ ಬ್ರಿಟನ್​ ಪ್ರಧಾನಿ ಬೋರಿಸ್ ಜಾನ್ಸನ್ ಭಾರತ ಪ್ರವಾಸ; ಪ್ರಧಾನಿ ಮೋದಿಯೊಂದಿಗೆ ಮಾತುಕತೆ

ಏಪ್ರಿಲ್​ 21-22ಕ್ಕೆ ಬ್ರಿಟನ್​ ಪ್ರಧಾನಿ ಬೋರಿಸ್ ಜಾನ್ಸನ್ ಭಾರತ ಪ್ರವಾಸ; ಪ್ರಧಾನಿ ಮೋದಿಯೊಂದಿಗೆ ಮಾತುಕತೆ
ಬೋರಿಸ್​ ಜಾನ್ಸನ್​

ಭಾರತ ಪ್ರಮುಖ ಆರ್ಥಿಕ ಶಕ್ತಿ ಮತ್ತು ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಈ ಅನಿಶ್ಚಿತತೆಯ ಕಾಲದಲ್ಲಿ ಯುಕೆಯ ಪಾಲಿಗೆ ಅತಿ ಹೆಚ್ಚು ಮೌಲ್ಯಯುತವಾದ ಸಹಭಾಗಿ ಎಂದೂ ಬೋರಿಸ್ ಜಾನ್ಸನ್​ ತಿಳಿಸಿದ್ದಾರೆ.

TV9kannada Web Team

| Edited By: Lakshmi Hegde

Apr 17, 2022 | 7:50 PM

ಬ್ರಿಟನ್ ಪ್ರಧಾನಿ ಬೋರಿಸ್​ ಜಾನ್ಸನ್​ ಅವರು ಏಪ್ರಿಲ್​ 21-22ಕ್ಕೆ ಭಾರತ ಪ್ರವಾಸ ಕೈಗೊಂಡಿದ್ದಾರೆ. ಏಪ್ರಿಲ್​ 21ರಂದು ಭಾರತಕ್ಕೆ ಆಗಮಿಸಲಿರುವ ಅವರು, ಏಪ್ರಿಲ್​ 22ಕ್ಕೆ ವಾಸಪ್​ ಆಗಲಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಬೋರಿಸ್​ ಜಾನ್ಸನ್​, ಈ ವಾರ ನಾನು ಭಾರತಕ್ಕೆ ಹೋಗಲಿದ್ದೇನೆ. ಭಾರತ ಮತ್ತು ಯುಕೆ ಮಧ್ಯೆ ಸುದೀರ್ಘ ಅವಧಿಯ ಸಹಭಾಗಿತ್ವ ಇದೆ. ಅದನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಈ ಭೇಟಿ ತುಂಬ ಮಹತ್ವದ್ದು.  ಈಗೀಗ ನಿರಂಕುಶ ಆಡಳಿತದ ದೇಶಗಳಿಂದ ವಿಶ್ವದ ಶಾಂತಿ ಮತ್ತು ಸಮೃದ್ಧಿಗೆ ಅಪಾಯ ಉಂಟಾಗುತ್ತಿದೆ. ಹೀಗಾಗಿ ಪ್ರಜಾಪ್ರಭುತ್ವವಿರುವ ರಾಷ್ಟ್ರಗಳು, ಮಿತ್ರ ರಾಷ್ಟ್ರಗಳೆಲ್ಲ ಪರಸ್ಪರ ಅಂಟಿಕೊಂಡು ಒಗ್ಗಟ್ಟಾಗಿರುವುದು ತುಂಬ ಮುಖ್ಯ ಎಂದು  ಹೇಳಿದ್ದಾರೆ.

ಇನ್ನೊಂದು ಟ್ವೀಟ್​ ಮಾಡಿ, ಭಾರತ ಪ್ರಮುಖ ಆರ್ಥಿಕ ಶಕ್ತಿ ಮತ್ತು ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಈ ಅನಿಶ್ಚಿತತೆಯ ಕಾಲದಲ್ಲಿ ಯುಕೆಯ ಪಾಲಿಗೆ ಅತಿ ಹೆಚ್ಚು ಮೌಲ್ಯಯುತವಾದ ಸಹಭಾಗಿ.  ನನ್ನ ಭಾರತ ಭೇಟಿ ಎರಡೂ ದೇಶಗಳ ಪಾಲಿಗೆ ಅತ್ಯಂತ ಮುಖ್ಯವಾಗಿದೆ. ನಾವು ಉದ್ಯೋಗ ಸೃಷ್ಟಿ, ಆರ್ಥಿಕ ಬೆಳವಣಿಗೆ, ಇಂಧನ ಭದ್ರತೆ ಮತ್ತು ರಕ್ಷಣೆಯವರೆಗೆ ಎಲ್ಲ ವಿಚಾರಗಳ ಬಗ್ಗೆಯೂ ಆಳವಾದ ಚರ್ಚೆ ನಡೆಸುತ್ತೇವೆ ಎಂದು ಹೇಳಿದ್ದಾರೆ. ಅಂದಹಾಗೇ, ಏಪ್ರಿಲ್​ 21ರಂದು ಭಾರತಕ್ಕೆ ತಲುಪಲಿರುವ ಬೋರಿಸ್ ಜಾನ್ಸನ್​ ಏಪ್ರಿಲ್​ 22ರಂದು ದೆಹಲಿಯಲ್ಲಿ ಪ್ರಧಾನಿ ಮೋದಿಯವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಇದೇ ವೇಳೆ ರಷ್ಯಾ-ಉಕ್ರೇನ್ ವಿಚಾರ ಕೂಡ ಪ್ರಮುಖವಾಗಿ ಚರ್ಚೆಗೆ ಬರಲಿದೆ ಎನ್ನಲಾಗಿದೆ.

ಭಾರತ-ಯುಕೆಯ ದ್ವಿಪಕ್ಷೀಯ ಸಂಬಂಧ ಉತ್ತಮವಾಗಿದೆ. ಕಳೆದ ವರ್ಷ ಒಮ್ಮೆ ಬೋರಿಸ್ ಜಾನ್ಸನ್​ ಭಾರತಕ್ಕೆ ಆಗಮಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಕೊರೊನಾ ಕಾರಣದಿಂದ ಇದುವರೆಗೆ ಭೇಟಿ ಕೊಡಲು ಸಾಧ್ಯವಾಗಲಿಲ್ಲ.  ಭಾರತ-ಯುಕೆ ಸಂಬಂಧವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ, ಬ್ರಿಟನ್​ನಲ್ಲಿ ಭಾರತ (ಭಾರತದ ಕಂಪನಿಗಳು) ಸುಮಾರು 530 ಮಿಲಿಯನ್ ಪೌಂಡ್​​ಗಳಷ್ಟು ಹೂಡಿಕೆ ಮಾಡಲು ಕಳೆದ ವರ್ಷ ಮೇ ತಿಂಗಳಲ್ಲಿ ಎರಡೂ  ಸರ್ಕಾರಗಳು ಸಮ್ಮತಿಸಿದ್ದವು.   ಭಾರತದ ಕಂಪನಿಗಳ ಹೂಡಿಕೆಯಿಂದ ಬ್ರಿಟನ್​​ನಲ್ಲಿ ಉದ್ಯೋಗಗಳು ಸೃಷ್ಟಿಯಾಗಿವೆ ಎನ್ನಲಾಗಿದೆ.  ಅಂದಹಾಗೇ, ಏಪ್ರಿಲ್ 1ರಂದು ಬೋರಿಸ್ ಜಾನ್ಸನ್​ ಗುಜರಾತ್​ನ ಅಹ್ಮದಾಬಾದ್​ಗೆ ಬಂದಿಳಿಯಲಿದ್ದಾರೆ. ಸದ್ಯ ಬ್ರಿಟನ್​​ನಲ್ಲಿರುವ  ಆಂಗ್ಲೋ-ಇಂಡಿಯನ್​ ನಾಗರಿಕರಲ್ಲಿ ಅರ್ಧದಷ್ಟು ಜನರ ಪೂರ್ವಜರ ನಗರ ಇದೇ ಅಹ್ಮದಾಬಾದ್. ಹೀಗಾಗಿ ಬೋರಿಸ್ ಜಾನ್ಸನ್​ ಮೊದಲು ಇಲ್ಲಿಗೇ ತಲುಪಲಿದ್ದಾರೆ.

ಇದನ್ನೂ ಓದಿ: ಮಸೀದಿಗಳಲ್ಲಿನ ಲೌಡ್ ಸ್ಪೀಕರ್ ತೆಗೆದುಹಾಕಲು ಮೇ3ರ ವರೆಗೆ ಗಡುವು; ದೇಶಭಕ್ತ ಹಿಂದೂಗಳು ಬೆಂಬಲಿಸುವಂತೆ ಕರೆ ನೀಡಿದ ಎಂಎನ್ಎಸ್

Follow us on

Related Stories

Most Read Stories

Click on your DTH Provider to Add TV9 Kannada