‘ಎಸ್​ಟಿ ಸಮುದಾಯಕ್ಕೆ ಶೇ. 7.5ರಷ್ಟು ಮೀಸಲಾತಿ ಕೊಡದಿದ್ದರೆ ರಾಜಕೀಯ ನಿವೃತ್ತಿ’; ಸಚಿವ ಶ್ರೀರಾಮುಲು ಹೇಳಿಕೆ

Sriramulu: ‘ಸರ್ಕಾರ ಎಸ್​ಟಿ ಸಮುದಾಯಕ್ಕೆ ಶೇಕಡಾ 7.5ರಷ್ಟು ಮೀಸಲಾತಿ ಕೊಡದಿದ್ದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲೂ ಸ್ಪರ್ಧಿಸುವುದಿಲ್ಲ ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ. ನಮ್ಮ ಸರ್ಕಾರದ ಅವಧಿಯಲ್ಲಿ ಮೀಸಲಾತಿ ಕೊಡಿಸಿಯೇ ತೀರುವೆ ಎಂದೂ ಅವರು ಭರವಸೆ ನೀಡಿದ್ದಾರೆ.

‘ಎಸ್​ಟಿ ಸಮುದಾಯಕ್ಕೆ ಶೇ. 7.5ರಷ್ಟು ಮೀಸಲಾತಿ ಕೊಡದಿದ್ದರೆ ರಾಜಕೀಯ ನಿವೃತ್ತಿ’; ಸಚಿವ ಶ್ರೀರಾಮುಲು ಹೇಳಿಕೆ
ಸಚಿವ ಶ್ರೀರಾಮುಲು
Follow us
TV9 Web
| Updated By: shivaprasad.hs

Updated on: Apr 17, 2022 | 6:01 PM

ವಿಜಯನಗರ: ಎಸ್​​ಟಿ ಸಮುದಾಯಕ್ಕೆ 7.5% ಮೀಸಲಾತಿಗಾಗಿ ಆಗ್ರಹಿಸಿ ಹೊಸಪೇಟೆಯಲ್ಲಿ ನಡೆಯುತ್ತಿರುವ ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನಾ ಸ್ಥಳಕ್ಕೆ ಸಾರಿಗೆ ಇಲಾಖೆ ಸಚಿವ ಶ್ರೀರಾಮುಲು (Sriramulu) ಭೇಟಿ ನೀಡಿದ್ದು, ಸರ್ಕಾರ ಮೀಸಲಾತಿ ಕೊಡದಿದ್ದರೆ ರಾಜಕೀಯ ನಿವೃತ್ತಿ ಪಡೆಯುವೆ ಎಂದು ಹೇಳಿಕೆ ನೀಡಿದ್ದಾರೆ. ‘‘ನನ್ನ ರಾಜೀನಾಮೆಯಿಂದ ಸಮಸ್ಯೆ ಬಗೆಹರಿಯುತ್ತದೆ ಅಂದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧನಿದ್ದೇನೆ. ನಮ್ಮ ಜಾತಿಗಾಗಿ ಸಚಿವ ಆನಂದ್ ಸಿಂಗ್​ ಸಹ ರಾಜೀನಾಮೆ ಕೊಡುತ್ತಾರೆ’’ ಎಂದು ಶ್ರೀರಾಮುಲು ಹೇಳಿದ್ದಾರೆ. ‘‘ನಮ್ಮ ಸರ್ಕಾರದ ಅವಧಿಯಲ್ಲೇ ಶೇ. 7.5ರಷ್ಟು ಮೀಸಲಾತಿ ಕೊಡಿಸುವೆ’’ ಎಂದು ಭರವಸೆ ನೀಡಿರುವ ಶ್ರೀರಾಮುಲು, ‘‘ರಾಜ್ಯದಲ್ಲಿ ನಮ್ಮ ಸರ್ಕಾರ ಇನ್ನೂ ಒಂದು ವರ್ಷ ಅಧಿಕಾರದಲ್ಲಿರುತ್ತದೆ. ನಮ್ಮ ಸರ್ಕಾರದ ಅವಧಿಯಲ್ಲೇ ಮೀಸಲಾತಿ ಕೊಡಿಸಿಯೇ ತೀರುವೆ. ನನ್ನ ಸಮುದಾಯಕ್ಕೆ ಮೀಸಲಾತಿ ಕೊಡದಿದ್ದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಮುಂದೆ ನಾನು ಗ್ರಾಮ ಪಂಚಾಯಿತಿ ಚುನಾವಣೆಯಲ್ಲೂ ಸ್ಪರ್ಧಿಸಲ್ಲ’’ ಎಂದು ಹೇಳಿದ್ದಾರೆ.

ಮುಂದುವರೆದು ಮಾತನಾಡಿದ ಶ್ರೀರಾಮುಲು, ‘‘ವಾಲ್ಮೀಕಿ ಶ್ರೀಗಳು ಹಿಂದಿನಿಂದಲೂ ಧರಣಿ ಮಾಡುತ್ತಾ ಬಂದಿದ್ದಾರೆ. ನಾನು ರಕ್ತದಲ್ಲಿ ಬರೆದುಕೊಡುವೆ ಎಂದು ಮಾತು ಕೊಟ್ಟಿದ್ದೇನೆ. ನಾವು ಸದಾ ವಾಲ್ಮೀಕಿ ಸ್ವಾಮೀಜಿಯವರ ಜೊತೆಗೆ ಇದ್ದೇವೆ. ಮೈತ್ರಿ ಸರ್ಕಾರ ನಾಗಮೋಹನದಾಸ್ ಸಮಿತಿ ನೇಮಕ ಮಾಡಿತು. ಬಳಿಕ ಕೆಲವರು ನಾಗಮೋಹನದಾಸ್ ವರದಿ ಜಾರಿ ಬೇಡ ಅಂದರು. ಒಂದು ತಿಂಗಳೊಳಗೆ ಸುಭಾಷ ಅಡಿಯವರ ವರದಿಯನ್ನ ಹಿಂದೆ ಪಡೆಯುತ್ತೇವೆ. ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ ಅವರ ವರದಿ ಜಾರಿಗೊಳಿಸುತ್ತೇವೆ. ’’ ಎಂದಿದ್ದಾರೆ.

ಶ್ರೀರಾಮುಲು ಮೀಸಲಾತಿ ಕೊಡಿಸುವ ಭರವಸೆ ನೀಡಿದ್ದಾರೆ; ಅವರ ಆತ್ಮವಿಶ್ವಾಸವನ್ನು ನಂಬಬೇಕು: ಸಚಿವ ಆನಂದ್ ಸಿಂಗ್

ಶ್ರೀರಾಮುಲು ಭಾಷಣದ ವೇಳೆ ಅರ್ಧಕ್ಕೆ ತಡೆಯೊಡ್ಡಿದ ಸಚಿವ ಆನಂದಸಿಂಗ್, ‘‘ನನ್ನ ರಾಜೀನಾಮೆ ಬೇಕು ಅಂದರೆ ಈಗಲೇ ಕೊಡುವೆ. ನಾನು ನಿಮ್ಮ ಧ್ವನಿಯಾಗಿ ಕೆಲಸ ಮಾಡುವೆ. ಈಡೀ ಅಖಂಡ ಬಳ್ಳಾರಿ ಜಿಲ್ಲೆಯ ಜನರಿಗಾಗಿ ರಾಜೀನಾಮೆ ನೀಡಲು ಸಿದ್ದ. ಮೀಸಲಾತಿ ವಿಚಾರ ಹೊಸಪೇಟೆಗೆ ಮಾತ್ರ ಸೀಮಿತವಾಗಿಲ್ಲ. ಇದು ರಾಜ್ಯದ ಸಮಸ್ಯೆ ಆಗಿದೆ. ಹೋರಾಟವನ್ನು ಮೊಟಕುಗೊಳಿಸಿ. ಶ್ರೀರಾಮುಲು ಮೀಸಲಾತಿ ಕೊಡಿಸುವ ಭರವಸೆ ನೀಡಿದ್ದಾರೆ. ಅವರ ಆತ್ಮವಿಶ್ವಾಸವನ್ನ ನೀವೂ ನಂಬಬೇಕು’’ ಎಂದಿದ್ದಾರೆ.

ಹೋರಾಟಗಾರರ ಮನವೊಲಿಸಿ, ಮನವಿ ಪತ್ರ ಸ್ವೀಕರಿಸಿದ ಇಬ್ಬರು ಸಚಿವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಬಳಿ ಮಾತನಾಡುವುದಾಗಿ ಹೇಳಿದ್ದಾರೆ. ಮುಂದಿನ ಹೋರಾಟದ ರೂಪರೇಷೆಗಳನ್ನು ಸಭೆಯಲ್ಲಿ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೋರಾಟಗಾರರು ನುಡಿದಿದ್ದಾರೆ.

ಇದನ್ನೂ ಓದಿ: ಕರ್ನಾಟಕ ರಾಜ್ಯದಲ್ಲಿ ಮಾತ್ರ ಕಾಂಗ್ರೆಸ್​ ಸ್ವಲ್ಪ ಉಸಿರಾಡುತ್ತಿದೆ; ಮಾಜಿ ಸಿಎಂ ಯಡಿಯೂರಪ್ಪ

ಡಾ.ಸುಧಾಕರ್ ಕೋಟಿಗಟ್ಟಲೆ ಅವ್ಯವಹಾರ‌ದಲ್ಲಿ ಭಾಗಿ; ಸಿಟಿ ರವಿ ಸಹಿತ ಐದಾರು ಸಚಿವರ ವಿರುದ್ಧ ನೇರ ಆರೋಪ ಮಾಡಿದ ಎಂ ಲಕ್ಷ್ಮಣ್