ಮುರುಡೇಶ್ವರ: ನಾಳೆ (ಡಿಸೆಂಬರ್ 31) ರಾತ್ರಿ ಹೊಸ ವರ್ಷಾಚರಣೆಯ ಸಂಭ್ರಮಕ್ಕೆ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ ಬೀಚ್ನ ಕಡಲ ತೀರ ಓಪನ್ ಇರುತ್ತದೆ. ಮುರುಡೇಶ್ವರ ಸಮುದ್ರತೀರದಲ್ಲಿ ಹೊಸ ವರ್ಷದ ಸಂಭ್ರಮವನ್ನು ಆಚರಿಸಲು ಅನುವು ಮಾಡಿಕೊಡಲಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಹೇಳಿದ್ದಾರೆ. ಈ ಬಗ್ಗೆ ಕಾರವಾರದಲ್ಲಿ ಮಾತನಾಡಿದ ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾ, ಕಡಿಮೆ ಸ್ಥಳದಲ್ಲಿ ನಾವು ಸ್ವಿಮ್ಮಿಂಗ್ ಜೋನ್ ಮಾಡಿದ್ದೇವೆ. ನಾಳೆಯಿಂದ ಎಷ್ಟು ಜನ ಬರುತ್ತಾರೆಂದು ನೋಡಿ ಸ್ವಿಮ್ಮಿಂಗ್ ಜೋನ್ ವಿಸ್ತರಣೆ ಮಾಡುತ್ತೇವೆ ಎಂದಿದ್ದಾರೆ.
ಮಂಗಳವಾರದಿಂದ ಮುರುಡೇಶ್ವರದಲ್ಲಿ ಸ್ವಿಮ್ಮಿಂಗ್ ಜೋನ್ ಮತ್ತಷ್ಟು ವಿಸ್ತರಣೆ ಮಾಡಲಾಗುತ್ತದೆ. ಉತ್ತರ ಕನ್ನಡ ಜಿಲ್ಲೆಗೆ ಬರುವಂಥ ಪ್ರವಾಸಿಗರ ರಕ್ಷಣೆಯೇ ನಮ್ಮ ಆದ್ಯತೆ. ಸದ್ಯಕ್ಕೆ ಕಡಲ ತೀರದಲ್ಲಿ ಸುರಕ್ಷತೆ ಕ್ರಮ ಕೈಗೊಂಡಿದ್ದೇವೆ. ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸುವಂತೆ ತಿಳಿಸಲಾಗಿದೆ ಎಂದು ಕಾರವಾರದಲ್ಲಿ ಉತ್ತರ ಕನ್ನಡ ಡಿಸಿ ಲಕ್ಷ್ಮೀ ಪ್ರಿಯಾ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಗೋಕರ್ಣ ಕಡಲತೀರದಲ್ಲಿ ಕೊಚ್ಚಿ ಹೋಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಮುರುಡೇಶ್ವರದ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧವಿತ್ತು. ಕಳೆದ 20 ದಿನಗಳಿಂದ ಜಿಲ್ಲಾಡಳಿತ ನಿರ್ಬಂಧ ವಿಧಿಸಿತ್ತು. ಈ ಹಿಂದೆ ನಾಲ್ವರು ವಿದ್ಯಾರ್ಥಿನಿಯರ ಸಾವು ಉಂಟಾದ ಹಿನ್ನೆಲೆಯಲ್ಲಿ ಪ್ರವೇಶ ನಿರ್ಬಂಧಿಸಲಾಗಿತ್ತು. ಆದರೆ, ಇದೀಗ ಹೊಸ ವರ್ಷದ ಸಂಭ್ರಮಾಚರಣೆಗೆ ಆ ನಿರ್ಬಂಧವನ್ನು ತೆರವುಗೊಳಿಸಲಾಗಿದೆ.
ಇದನ್ನೂ ಓದಿ: ನಾಲ್ವರು ವಿದ್ಯಾರ್ಥಿಗಳ ಸಾವು ಬೆನ್ನಲ್ಲೇ ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ನಾಲ್ವರು ವಿದ್ಯಾರ್ಥಿನಿಯರ ಸಾವಿನ ಬಳಿಕ ಸುರಕ್ಷತೆ ಕೈಗೊಳ್ಳಲು ತಿರ್ಮಾನಿಸಲಾಗಿತ್ತು. ಹಾಗಾಗಿ ಕಳೆದ 20 ದಿನಗಳಿಂದ ಮುರ್ಡೇಶ್ವರ ಕಡಲ ತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ ಇತ್ತು. ಸದ್ಯಕ್ಕೆ ನಾವು ಕಡಲ ತೀರದಲ್ಲಿ ಸುರಕ್ಷತೆ ಕ್ರಮ ಕೈಗೊಂಡಿದ್ದೇವೆ. ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸುವಂತೆ ತಿಳಿಸಲಾಗಿದೆ. ನಾಳೆ ಪೊಲೀಸ್ ಭದ್ರತೆ ಒದಗಿಸಿದರೆ ನಾಳೆಯೇ ಕಡಲ ತೀರ ಓಪನ್ ಮಾಡಲಾಗುವುದು. ಸದ್ಯಕ್ಕೆ ನಮ್ಮ ಬಳಿ ಇದ್ದ ಸಾಧನಗಳನ್ನ ಬಳಸಿ ಕಡಿಮೆ ಸ್ಥಳದಲ್ಲಿ ಸ್ವಿಮಿಂಗ್ ಝೋನ್ ಮಾಡಿದ್ದೇವೆ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾ ಹೇಳಿಕೆ ನೀಡಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ