Ghatiana Dvivarna: ಯಲ್ಲಾಪುರದ ಅರಣ್ಯವಲಯದಲ್ಲಿ ಹೊಸ ಪ್ರಬೇಧದ ಏಡಿ ಪತ್ತೆ

| Updated By: ಆಯೇಷಾ ಬಾನು

Updated on: Aug 17, 2022 | 10:31 PM

ಘಟಿಯಾನ ದ್ವಿವರ್ಣ ಪ್ರಭೇದದ ಏಡಿ: ಅತೀ ಸುಂದರವಾಗಿರುವ ಈ ಏಡಿ ನೋಡಲು ಗುಂಡನೇ ಕಪ್ಪು ಕಣ್ಣು, ಬಿಳಿ ಬಣ್ಣದ ಕೊಕ್ಕೆ, ನೇರಳೆ ಬಣ್ಣದ ನೀಳ ಕಾಲುಗಳನ್ನು ಹೊಂದಿರುವ ಅಪರೂಪದ ಏಡಿಯಾಗಿದೆ.

Ghatiana Dvivarna: ಯಲ್ಲಾಪುರದ ಅರಣ್ಯವಲಯದಲ್ಲಿ ಹೊಸ ಪ್ರಬೇಧದ ಏಡಿ ಪತ್ತೆ
ಘಟಿಯಾನ ದ್ವಿವರ್ಣ ಪ್ರಭೇದದ ಏಡಿ
Follow us on

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಅರಣ್ಯವಲಯದಲ್ಲಿ ಹೊಸ ಪ್ರಬೇಧದ ಸಿಹಿ ನೀರಿನ ಏಡಿ ಪತ್ತೆಯಾಗಿದೆ. ಬಿಳಿ ಮೈ ಬಣ್ಣ ಮತ್ತು ನೇರಳೆ ಬಣ್ಣದ ಕಾಲುಗಳನ್ನ ಹೊಂದಿರುವ ಈ ಏಡಿಯನ್ನು ಘಾಟಿಯಾನ ದ್ವೀವರಣ(Ghatiana Dvivarna) ಎಂದು ಸೈಂಟಿಫಿಕ್ ಹೆಸರು ನಾಮಕರಣ ಮಾಡಲಾಗಿದೆ.

ಅತೀ ಸುಂದರವಾಗಿರುವ ಈ ಏಡಿ ನೋಡಲು ಗುಂಡನೇ ಕಪ್ಪು ಕಣ್ಣು, ಬಿಳಿ ಬಣ್ಣದ ಕೊಕ್ಕೆ, ನೇರಳೆ ಬಣ್ಣದ ನೀಳ ಕಾಲುಗಳನ್ನು ಹೊಂದಿರುವ ಅಪರೂಪದ ಏಡಿಯಾಗಿದೆ. ಹೊಸ ಪ್ರಬೇಧದ ಏಡಿ ಕಂಡು ಅರಣ್ಯ ಅಧಿಕಾರಿಗಳು ತಮ್ಮ ಕ್ಯಾಮಾರದಲ್ಲಿ ಏಡಿಯ ಚಿತ್ರಗಳನ್ನು ಸೆರೆ ಹಿಡಿದಿದ್ದಾರೆ. ಅರಣ್ಯ ಇಲಾಖೆಯ ಸಿಬ್ಬಂದಿ ಪರಶುರಾಮ ಭಜಂತ್ರಿ, ನಿಸರ್ಗ ತಜ್ಞರಾದ ಗೋಪಾಲಕೃಷ್ಣ ಹೆಗಡೆ, ಸಮೀರಕುಮಾರ ಪಾಟಿ ಮತ್ತು ತೇಜಸ್ ಥಾಕರೆ ತಂಡದವರು ಈ ಘಟಿಯಾನ ಪ್ರಭೇದದ ಹೊಸ ಜಾತಿಯ ಸಿಹಿ ನೀರಿನ ಏಡಿಯನ್ನು ಪತ್ತೆ ಹಚ್ಚಿದ್ದಾರೆ.

ವಿಜ್ಞಾನಿಗಳ ಅಧ್ಯಯನದ ಪ್ರಕಾರ ವಿಶ್ವದಲ್ಲಿ ಇದುವರೆಗೂ 4000 ಜಾತಿಯ ಏಡಿಗಳಿವೆ ಎಂದು ಅಂದಾಜಿಸಲಾಗಿದೆ. ಭಾರತದಲ್ಲಿಯೇ 125 ವಿವಿಧ ಜಾತಿಯ ಏಡಿಗಳನ್ನು ಗುರುತಿಸಲಾಗಿದೆ. ಘಟಿಯಾನ ಪ್ರಭೇದದಲ್ಲಿ ಇಲ್ಲಿಯವರೆಗೆ 13 ವಿವಿಧ ಜಾತಿಯ ಸಿಹಿ ನೀರಿನ ಏಡಿಗಳನ್ನು ಗುರುತಿಸಲಾಗಿದ್ದು, ಘಟಿಯಾನ ದ್ವಿವರ್ಣ 14ನೇ ಸಿಹಿ ನೀರಿನ ಏಡಿಯಾಗಿದೆ. ವಿಶ್ವದಲ್ಲಿಯೇ ಜೀವವೈವಿಧ್ಯದ ಹಾಟ್ ಸ್ಪಾಟ್ ಎಂಬ ಖ್ಯಾತಿ ಹೊಂದಿರುವ ಭಾರತದ ಪಶ್ಚಿಮ ಘಟ್ಟಗಳಲ್ಲಿ ಒಟ್ಟು 74 ವಿವಿಧ ಜಾತಿಯ ಏಡಿಗಳನ್ನು ಗುರುತಿಸಿದ್ದಾರೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಸುಸಂದರ್ಭದಲ್ಲಿ ಪಶ್ಚಿಮ ಘಟ್ಟದ ಪ್ರದೇಶದಲ್ಲಿ 75ನೇ ಏಡಿ ಪತ್ತೆ ಹಚ್ಚಿರುವುದು ವಿಶೇಷ ಸಂಗತಿಯಾಗಿದೆ.