AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಖಿ ಕಟ್ಟಬೇಡಿ ಎಂದು ವಿದ್ಯಾರ್ಥಿಗಳಿಂದ ರಾಖಿ ಬಿಚ್ಚಿಸಿದ ಲೊಯೊಲೊ ಶಾಲೆ ವಿರುದ್ಧ ಆಕ್ರೋಶ, ಪ್ರತಿಭಟನೆ

ರಾಖಿ ಕಟ್ಟಿಕೊಳ್ಳ ಬೇಡಿ ಅದನ್ನ ಕಿತ್ತು ಹಾಕಿ ಎಂದು ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ಮಂಡಳಿ ಆದೇಶಿಸಿದಿಯಂತೆ. ಹೀಗಾಗಿ ಶಾಲಾ ಆಡಳಿತ ಮಂಡಳಿ ವಿರುದ್ಧ ಪೋಷಕರು ಮತ್ತು ಹಿಂದೂಪರ ಸಂಘಟನೆಗಳು ಗರಂ ಆಗಿವೆ.

ರಾಖಿ ಕಟ್ಟಬೇಡಿ ಎಂದು ವಿದ್ಯಾರ್ಥಿಗಳಿಂದ ರಾಖಿ ಬಿಚ್ಚಿಸಿದ ಲೊಯೊಲೊ ಶಾಲೆ ವಿರುದ್ಧ ಆಕ್ರೋಶ, ಪ್ರತಿಭಟನೆ
ರಾಖಿ ಕಟ್ಟಬೇಡಿ ಎಂದು ವಿದ್ಯಾರ್ಥಿಗಳಿಂದ ರಾಖಿ ಬಿಚ್ಚಿಸಿದ ಲೊಯೊಲೊ ಶಾಲೆ ವಿರುದ್ಧ ಆಕ್ರೋಶ, ಪ್ರತಿಭಟನೆ
TV9 Web
| Edited By: |

Updated on:Aug 18, 2022 | 5:22 PM

Share

ಕಾರವಾರ: ಲೊಯೊಲೊ ಶಾಲೆಯಲ್ಲಿ ರಾಖಿ ಹಬ್ಬಕ್ಕೆ ಅಡ್ಡಿ ಆರೋಪ ಹಿನ್ನೆಲೆ ಪ್ರತಿಭಟನೆ ನಡೆಸಲಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದ ಲೊಯೊಲೊ ಶಾಲೆಯಲ್ಲಿ 200 ವಿದ್ಯಾರ್ಥಿಗಳ ರಾಖಿ ಕಿತ್ತು ಹಾಕಿಸಿದ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆ ಶಾಲಾ ಆಡಳಿತ ಮಂಡಳಿ ವಿರುದ್ಧ ಹಿಂದೂ ಸಂಘಟನೆಗಳು ಆಕ್ರೋಶ ಹೊರ ಹಾಕಿವೆ.

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಇಲ್ಲಿನ ಲೋಯೋಲ ಶಿಕ್ಷಣ ಸಂಸ್ಥೆಯ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ರಾಖಿ ಬಿಚ್ಚಿಸಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿಗಳ ಪಾಲಕರು ಹಾಗೂ ಹಿಂದೂ ಪರ ಸಂಘಟನೆಗಳು ಸಂಸ್ಥೆಯ ಮುಂದೆ ಪ್ರತಿಭಟನೆ ನಡೆಸಿ ಆಡಳಿತ ಮಂಡಳಿಯವರನ್ನು ತರಾಟೆ ತೆಗೆದುಕೊಂಡ ಘಟನೆ ಜರುಗಿದೆ.

ಇನ್ನು ಶಾಲೆಯ ಆವರಣದಲ್ಲಿ ಪ್ರಾರ್ಥನೆ ಮಾಡುವ ಸಮಯದಲ್ಲಿ ವಿದ್ಯಾರ್ಥಿಗಳು ಕೈಗೆ ಕಟ್ಟಿಕೊಂಡ ರಾಖಿಯನ್ನು ತೆಗೆಯುವಂತೆ ಲೊಯೋಲಾ ಶಾಲೆಯವರು ಸೂಚಿಸಿದ್ದಾರೆ. ಅದರಂತೆ ಮಕ್ಕಳು ತಮ್ಮ ಕೈಗೆ ಕಟ್ಟಿಕೊಂಡ ರಾಖಿಯನ್ನು ಪರಸ್ಪರವಾಗಿ ರಾಖಿಯನ್ನು ಕತ್ತರಿಯಿಂದ ಕಟ್ ಮಾಡಿಕೊಂಡಿದ್ದೇವೆ ಎಂದು ಶಾಲೆ ಬಿಟ್ಟು ಮನೆಗೆ ಹೋದ ವಿದ್ಯಾರ್ಥಿಗಳು ತಮ್ಮ ಪಾಲಕರಿಗೆ ಈ ವಿಷಯ ತಿಳಿಸಿದ್ದಾರೆ. ನಂತರ ಇದು ಹಿಂದೂಪರ ಸಂಘಟನೆಗಳಿಗೆ ಗಮನಕ್ಕೆ ಬಂದು ಶಾಲೆಗೆ ಮುತ್ತಿಗೆ ಹಾಕಲು ಸರ್ವ ತಯಾರಿ ಮಾಡಿಕೊಂಡಿದ್ದರು ಮುಂಜಾಗ್ರೃತ ಕ್ರಮವಾಗಿ ಪೊಲೀಸರು ಆಡಳಿತ ಕಮೀಟಿಯವರನ್ನು ಹಾಗೂ ಪ್ರಿನ್ಸಿಪಾಲ್ ಅವರನ್ನು ಕರೆಯಿಸಿ ಠಾಣೆಯಲ್ಲಿ ಬಗೆಹರಿಸಲು ಪ್ರಯತ್ನಿಸಿದ್ದರು ಆದರೆ ಹಿಂದೂಪರ ಸಂಘಟನೆಗಳು ಇದ್ದಕ್ಕೆ ಒಪ್ಪದೆ ಶಾಲೆಯ ಎದುರೆ ಪ್ರತಿಭಟನೆ ಮಾಡಲು ಪಟ್ಟು ಹಿಡಿದಿದ್ದಾರೆ..

ಹಿಂದೂಪರ ಸಂಘಟನೆಗಳು ಹಾಗೂ ಪಾಲಕರು ಶಾಲೆಯ ಎದುರು ಪ್ರತಿಭಟನೆ ಆರಂಭಿಸಿದರು. ಆಡಳಿತ ಮಂಡಳಿಯ ಹಾಗೂ ರಾಖಿ ತೆಗೆಯುವಂತೆ ಹೇಳಿದ ಶಿಕ್ಷಕಿಯನ್ನು ಸ್ಥಳಕ್ಕೆ ಕರೆಸುವಂತೆ ಪ್ರತಿಭಟನಾಕಾರರು ಘೋಷಣೆ ಕೂಗುತ್ತಾ ಪಟ್ಟು ಹಿಡಿದರು. ಈ ಸಂದರ್ಭದಲ್ಲಿ ಶಿಕ್ಷಕರು ಸ್ಥಳಕ್ಕೆ ಆಗಮಿಸಿ ಕ್ಷೇಮೆ ಕೇಳುವ ಮೂಲಕ ಸಮಸ್ಯೆ ಬಗೆ ಹರಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 4:29 pm, Thu, 18 August 22