ಭಟ್ಕಳದಲ್ಲಿ ಐಸಿಸ್ ನಂಟಿದ್ದ ವ್ಯಕ್ತಿ ವಶಕ್ಕೆ: ನೇಮಕಾತಿಗೆ ಸಹಕರಿಸುತ್ತಿದ್ದ ಆರೋಪ
ಭಟ್ಕಳದಲ್ಲಿ ಐಸಿಸ್ ಉಗ್ರರೊಂದಿಗೆ ನಂಟು ಹೊಂದಿದ್ದ ಎಂಬ ಆರೋಪ ಹೊತ್ತಿರುವ ಜಫ್ರಿ ಜಹ್ವಾರ್ ದಾಮುದಿ ಎಂಬಾತನನ್ನು ಬಂಧಿಸಿದ್ದಾರೆ.
ಕಾರವಾರ: ರಾಷ್ಟ್ರೀಯ ತನಿಖಾ ದಳ (National Investigating Agency – NIA) ಮತ್ತು ಕರ್ನಾಟಕ ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ಉತ್ತರ ಕನ್ನಡ ಜಿಲ್ಲೆ ಭಟ್ಕಳದಲ್ಲಿ ಐಸಿಸ್ ಉಗ್ರರೊಂದಿಗೆ ನಂಟು ಹೊಂದಿದ್ದ ಎಂಬ ಆರೋಪ ಹೊತ್ತಿರುವ ಜಫ್ರಿ ಜಹ್ವಾರ್ ದಾಮುದಿ ಎಂಬಾತನನ್ನು ಬಂಧಿಸಿದ್ದಾರೆ.
ಐಸಿಸ್ ಸಂಘಟನೆಗೆ ಭಾರತದಿಂದ ಯುವಕರು ಸೇರಲು ಪ್ರೇರೇಪಿಸುತ್ತಿದ್ದ ಎಂಬ ಆರೋಪ ಈತನ ಮೇಲಿದೆ. ಈತ ಅಬು ಹಾಜಿರ್ ಅಲ್ ಬದ್ರಿ ಎಂಬ ಹೆಸರಿನ ಪ್ರತ್ಯೇಕ ಸೈಬರ್ ಘಟಕದ ಮೂಲಕ ಐಸಿಸ್ ವಿಚಾರಧಾರೆಗಳನ್ನು ದಕ್ಷಿಣ ಭಾರತದ ವಿವಿಧ ಭಾಷೆಗಳಿಗೆ ಭಾಷಾಂತರಿಸುತ್ತಿದ್ದ. ಎನ್ಕ್ರಿಪ್ಟೆಡ್ ಚಾಟಿಂಗ್ ಸಿಸ್ಟಂಗಳಲ್ಲಿ ಸಕ್ರಿಯನಾಗಿದ್ದ ಎಂದು ಹೇಳಲಾಗಿದೆ. ದಾಳಿ ವೇಳೆ ಮೊಬೈಲ್, ಹಾರ್ಡ್ಡಿಸ್ಕ್ ಹಾಗೂ ಎಸ್ಡಿ ಕಾರ್ಡುಗಳನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.
ಭಟ್ಕಳದಲ್ಲಿ ಎನ್ಐಎ ದಾಳಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ರಾಷ್ಟ್ರೀಯ ತನಿಖಾ ದಳ (National Investigation Agency – NIA) ಶುಕ್ರವಾರ ದಾಳಿ ನಡೆಸಿ, ಐಸಿಸ್ ಉಗ್ರರ ಜೊತೆಗೆ ನಂಟು ಹೊಂದಿದ್ದ ಶಂಕೆಯ ಮೇಲೆ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ಭಟ್ಕಳದ ಉಮರ್ ಸ್ಟ್ರೀಟ್, ಸಾಗರ ರಸ್ತೆಯ ಮನೆ ಮೇಲೆ ದಾಳಿ ನಡೆಸಲಾಗಿದೆ.
ವಿವಿಧೆಡೆ ಕಾರ್ಯಾಚರಣೆ ದೇಶದ ವಿವಿಧೆಡೆ ಇತ್ತೀಚೆಗೆ ಕಾರ್ಯಾಚರಣೆ ನಡೆಸಿದ ರಾಷ್ಟ್ರೀಯ ತನಿಖಾ ದಳದ ಭದ್ರತಾ ಸಿಬ್ಬಂದಿ ಹಲವು ಐಸಿಸ್ ಉಗ್ರರನ್ನು ಬಂಧಿಸಿದ್ದಾರೆ. ರಾಜ್ಯದಲ್ಲಿಯೂ ಇಬ್ಬರು ಶಂಕಿತ ಐಸಿಸ್ ಉಗ್ರರನ್ನು ಬಂಧಿಸಲಾಗಿದೆ. ಬೆಂಗಳೂರಿನ ಶಂಕರ್ ವೆಂಕಟೇಶ್ ಪೆರುಮಾಳ್, ಮಂಗಳೂರಿನ ಅಮರ್ ಅಬ್ದುಲ್ ರೆಹಮಾನ್ ಬಂಧಿತರು. ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತಿಬ್ಬರು ಶಂಕಿತ ಉಗ್ರರನ್ನು ಸೆರೆ ಹಿಡಿಯಲಾಗಿದೆ.
(NIA takes custody a person who allegedly had links with ISIS)
ಇದನ್ನೂ ಓದಿ: ಭಟ್ಕಳದಲ್ಲಿ ಎನ್ಐಎ ದಾಳಿ: ಐಸಿಸ್ ನಂಟು ಶಂಕೆಯ ಮೇಲೆ ಮೂವರು ವಶಕ್ಕೆ
ಇದನ್ನೂ ಓದಿ: Bajrang Dal: ಕರಾವಳಿಯಲ್ಲಿ ಶಾಶ್ವತ ಎನ್ಐಎ ಕಚೇರಿ ಸ್ಥಾಪಿಸುವಂತೆ ಭಜರಂಗದಳ ಆಗ್ರಹ