ಕಾರವಾರ: ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಅದೆಷ್ಟೋ ಗ್ರಾಮಗಳು ಇದುವರೆಗೂ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿ. ರಸ್ತೆ, ನೀರು, ವಿದ್ಯುತ್ ಸೇರಿದಂತೆ ಇತರೆ ಮೂಲಭೂತ ಸೌಕರ್ಯಗಳು ಇಲ್ಲ. ಇದಕ್ಕೆ ಪೂರಕವೆಂಬಂತೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದ ಸಣಕಾ ಗ್ರಾಮದ ರಸ್ತೆ ಸಮಸ್ಯೆಯಿಂದಾಗಿ ಆಂಬ್ಯುಲೆನ್ಸ್ ಬರಲಾಗದೇ ರೋಗಿಯನ್ನ ಗ್ರಾಮಸ್ಥರು ಕಂಬಳಿಯಲ್ಲಿ ಆಸ್ಪತ್ರೆಗೆ ಹೊತ್ತೊಯ್ದಿದಿದ್ದಾರೆ. ಹೌದು… ಗ್ರಾಮಕ್ಕೆ ರಸ್ತೆ ಸಂಪರ್ಕವಿಲ್ಲದಿದ್ದರಿಂದ ರೋಗಿಯನ್ನ ಹೊತ್ತು ಆಸ್ಪತ್ರೆಗೆ ಸಾಗಿಸಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಜೋಯಿಡಾ ತಾಲ್ಲೂಕಿನ ಸಣಕಾ ಗ್ರಾಮಕ್ಕೆ ವಾಹನ ಸಂಚಾರಕ್ಕೆ ರಸ್ತೆ ಇಲ್ಲದ ಕಾರಣ ಅನಾರೋಗ್ಯಕ್ಕೆ ತುತ್ತಾಗಿದ್ದ ದ್ರೌಪದಿ ಪಾವು ದೇಸಾಯಿ(80) ವೃದ್ಧೆಯನ್ನು ಗ್ರಾಮಸ್ಥರು ಕಂಬಳಿ ಜೋಲಿಯಲ್ಲೇ ಆಸ್ಪತ್ರೆಗೆ ಸಾಗಿಸಿದ್ದಾರೆ. ಸುಮಾರು 2.5 ಕಿಮೀ ದೂರ ಜೋಲಿಯಲ್ಲೇ ಹೊತ್ತೊಯ್ದು ಬಳಿಕ ವಾಹನದ ಮೂಲಕ ದಾಂಡೇಲಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
12 ಮನೆಗಳಿರುವ ಈ ಸಣಕಾ ಗ್ರಾಮಕ್ಕೆ ವಾಹನ ಸಂಚಾರಕ್ಕೆ ರಸ್ತೆಯೇ ಇಲ್ಲ. ರಸ್ತೆಗಾಗಿ ದಶಕಗಳಿಂದ ಗ್ರಾಮಸ್ಥರು ಹೋರಾಟ ಮಾಡಿದಿದ್ದರೂ ಪ್ರಯೋಜನವಾಗಿಲ್ಲ. ಕೇವಲ ಜನರು ಮಾತ್ರ ಓಡಾಡು ರಸ್ತೆ ಇದ್ದು, ಅದು ಮಳೆಗಾಲದಲ್ಲಿ ಕೆಸರಿನಂತಾಗುತ್ತದೆ. ಇದರಿಂದ ಗ್ರಾಮಸ್ಥರು ಮನೆಬಿಟ್ಟು ಹೊರಹೋಗದಂತಾಗಿದೆ. ಇನ್ನು ಈ ಹಳ್ಳಿಯಲ್ಲಿ ಯಾರಾದರೂ ಅನಾರೋಗ್ಯಕ್ಕೀಡಾದರೆ ಇದೇ ರೀತಿ ಜೋಲಿ ಮೂಲಕ ಹೊತ್ತುಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ.
ಭಾರತ ದೇಶದ ಕಟ್ಟಕಡೆಯ ಹಳ್ಳಿಗಳಿಗೂ ಮೂಲ ಸೌಕರ್ಯ ಕಲ್ಪಿಸುವುದೇ ಮೊದಲ ಆಧ್ಯತೆ ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಪ್ರತಿ ದಿನ ಬೊಬ್ಬಿಡುತ್ತಿವೆ. ಆದ್ರೆ, ರಾಜ್ಯದಲ್ಲಿ ಈ ರೀತಿಯ ಅದೆಷ್ಟೋ ಗ್ರಾಮಗಳು ಮೂಲ ಸೌಕರ್ಯಗಳಿಂದ ವಂಚಿತವಾಗಿವೆ. ಚುನಾವಣೆ ಬಂದಾಗ ಜನರನ್ನು ದೇವರು ಎಂದು ಹೇಳುವ ಅದೆಷ್ಟೋ ಜನಪ್ರತಿನಿಧಿಗಳು ಎಲೆಕ್ಷನ್ ಮುಗಿದ ಮೇಲೆ ಗ್ರಾಮಗಳತ್ತ ಕಣ್ಣೆತ್ತಿ ನೋಡಲ್ಲ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಕಿಕ್ಕಿಸಿ
Published On - 11:03 am, Tue, 4 July 23