AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ವಾಮೀಜಿ ಮಾತ್ರವಲ್ಲ ಹುಡುಗರ ಜೊತೆ ಪತ್ನಿ ಸಂಪರ್ಕ: ಹೆಂಡ್ತಿಯ ಮತ್ತಷ್ಟು ನವರಂಗಿ ಆಟ ಬಿಚ್ಚಿಟ್ಟ ಪತಿ

ಸುಚಿತ್ರಾ ಎಂಬ ವಿವಾಹಿತ ಮಹಿಳೆಯ ಜೊತೆಗೆ ಕಮಲಾಕರ ಭಟ್ ಗುರೂಜಿಯ ಅಕ್ರಮ ಸಂಬಂಧ ಆರೋಪ ವಿಚಾರವಾಗಿ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ನಡೆದ ಗಲಾಟೆಯಲ್ಲಿ ಓರ್ವ ಮೃತಪಟ್ಟಿದ್ದಾನೆ. ಗುರೂಜಿ ಜೊತೆ ಮಹಿಳೆ ಅನೈತಿಕ ಸಂಬಂಧ ಬಗ್ಗೆ ದೂರು ನೀಡಿದ್ದಕ್ಕೆ ಗಲಾಟೆ ನಡೆದಿದ್ದು, ಘಟನೆಯಲ್ಲಿ ಸುಚಿತ್ರಾಳ ಪತಿ ಸಹೋದರ ಸಾವನ್ನಪ್ಪಿದ್ದಾನೆ. ಇದೀಗ ಈ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಪತಿ ಮಹೇಶ್ ಸುಚಿತ್ರಾಳ ಮತ್ತಷ್ಟು ಸ್ಫೋಟಕ ವಿಚಾರಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಸ್ವಾಮೀಜಿ ಮಾತ್ರವಲ್ಲ ಹುಡುಗರ ಜೊತೆ ಪತ್ನಿ ಸಂಪರ್ಕ: ಹೆಂಡ್ತಿಯ ಮತ್ತಷ್ಟು ನವರಂಗಿ ಆಟ ಬಿಚ್ಚಿಟ್ಟ ಪತಿ
ಕಮಲಕರ್, ಸುಚಿತ್ರಾ, ಮಹೇಶ್
ಸೂರಜ್​, ಮಹಾವೀರ್​ ಉತ್ತರೆ
| Edited By: |

Updated on:Feb 03, 2026 | 6:17 PM

Share

ಕಾರವಾರ, (ಫೆಬ್ರವರಿ 03): ಕಮಲಾಕರ ಭಟ್ ಗುರೂಜಿ (kamalakar bhat guruji) ಹಾಗೂ ಸುಚಿತ್ರಾಳ ಅನೈತಿಕ ಸಂಬಂಧ ವಿಚಾರವಾಗಿ ನಡೆದ ಗಲಾಟೆಯಲ್ಲಿ ಓರ್ವ  ಸಾವನ್ನಪ್ಪಿದ್ದಾನೆ. ಗುರೂಜಿ ಜೊತೆ ಸುಚಿತ್ರಾ ಅನೈತಿಕ ಸಂಬಂಧ ಹೊಂದಿರುವ ಬಗ್ಗೆ ದೂರು ನೀಡಿದ್ದಕ್ಕೆ ಉತ್ತರ ಕನ್ನಡದ (Uttara Kannada) ಸಿದ್ಧಾಪುರದಲ್ಲಿ ಗಲಾಟೆ ನಡೆದಿದ್ದು, ಗಲಾಟೆಯಲ್ಲಿ ಸುಚಿತ್ರಾಳ ಪತಿ ಮಹೇಶ್​​ನ ಸಹೋದರ ವಸಂತ್ ನಾಯ್ಕ ಮೃತಪಟ್ಟಿದ್ದಾನೆ. ಇನ್ನು ಘಟನೆಯಲ್ಲಿ ಸುಚಿತ್ರಾ ಪತಿ ಮಹೇಶ್​​ ಹಾಗೂ ಸ್ನೇಹಿತ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪ್ರಕರಣ ಸಂಬಂಧ ಬಗ್ಗೆ ಟಿವಿ9ಗೆ ಪ್ರತಿಕ್ರಿಯಿಸಿರುವ ಹಲ್ಲೆಗೊಳಗಾದ ಮಹೇಶ್, ಅವಳು ಸ್ವಾಮೀಜಿ ಜೊತೆ ಮಾತ್ರವಲ್ಲ ಇತರೆ ಹುಡುಗರ ಜೊತೆ ಸಂಪರ್ಕ ಹೊಂದಿದ್ದಳು. ಅವಳೇ ರೌಡಿಗಳಿಂದ ನಮ್ಮ ಮೇಲೆ ದಾಳಿ ಮಾಡಿಸಿದ್ದಾಳೆಂದು ಸುಚಿತ್ರಾಳ ಮತ್ತಷ್ಟು ನವರಂಗಿ ಆಟ ಬಿಚ್ಚಿಟ್ಟಿದ್ದಾರೆ.

ಹುಡುಗರ ಜೊತೆ ಪತ್ನಿ ಸಂಪರ್ಕ

ಇನ್ನು ಹಲ್ಲೆಗೊಳಗಾದ ಮಹೇಶ್ ಟಿವಿ9 ಜತೆ ಮಾತನಾಡಿದ್ದು, ಮದುವೆ ಆಗಿ 15 ವರ್ಷ ಆಗಿದೆ. ನಾನು ಬೆಂಗಳೂರಿನಲ್ಲಿ ಹೊಟೇಲ್ ಕೆಲಸ ಮಾಡುತ್ತಿದ್ದು, ಎರಡು ಮೂರು ತಿಂಗಳಿಗೆ ಒಮ್ಮೆ ಊರಿಗೆ ಬಂದು ಹೋಗುತ್ತಿದ್ದೆ. ಇತ್ತ ಪತ್ನಿ (ಸುಚಿತ್ರಾ) ಫೇಸ್ ಬುಕ್ ನಲ್ಲಿ ಹುಡುಗರ ಜೊತೆ ಪತ್ನಿ ಸಂಪರ್ಕ ಹೊಂದಿದ್ದಳು. ದೀಪು ಎನ್ನುವನ ಜೊತೆ ಸಂಪರ್ಕ ಹೊಂದಿರುವ ವಿಷಯ ನನಗೆ ಗೊತ್ತಾಯಿತು. ಬಳಿಕ ಈ ವಿಚಾರವಾಗಿ ಪ್ರಶ್ನಿಸಿದ್ದಕ್ಕೆ ಅವಳು ಜಗಳ ಮಾಡಿದ್ದಳು. ಆಗ ಅದರ ನಾಯಿ ಬುದ್ದಿ ಬೇಡ ಅಂತ ಸುಮ್ಮನಾದೆ ಎಂದು ಹೆಂಡ್ತಿ ಸುಚಿತ್ರಾಳ ಕಳ್ಳಾಟವನ್ನು ಬಿಚ್ಚಿಟ್ಟರು.

ಇದನ್ನೂ ಓದಿ: ಕಮಲಾಕರ ಭಟ್​ ಗುರೂಜಿ ಜೊತೆ ಮಹಿಳೆ ಅಕ್ರಮ ಸಂಬಂಧ: ದೂರು ನೀಡಿದ್ದಕ್ಕೆ ಹಲ್ಲೆ; ಓರ್ವ ಸಾವು

ಘಟನೆ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟ ಮಹೇಶ್

ಕಳೆದ ಐದು ತಿಂಗಳ ಹಿಂದೆ ನನ್ನ ಎರಡು ಹೆಣ್ಣು ಮಕ್ಕಳನ್ನು ಶಿವಮೊಗ್ಗಕ್ಕೆ ಕರೆದುಕೊಂಡು ಹೋಗಿ ಜ್ಯೋತಿಷಿ ಜೊತೆ ಸೆಟ್ಲ್ ಆಗಿದ್ದಾಳೆ. ಆತನ ಜೊತೆ ಇದ್ದು ಐದು ತಿಂಗಳು ಆಗಿದೆ. ಆದ್ರೆ, ಮಗಳು ನನಗೆ ಮೆಸೇಜ್ ಹಾಕಿ ತಾಯಿ ಬಗ್ಗೆ ದೂರು ಹೇಳಿದ್ದಳು.ನಾನು ತಾಯಿ ಜೊತೆ ಇರುವುದಿಲ್ಲ ಬಂದು ಕರೆದುಕೊಂಡು ಹೋಗು ಅಂತಾ ಹೇಳಿದ್ದಳು. ಇಲ್ಲದಿದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಳು. ಆಗ ವಾಪಸ್ ಊರಿಗೆ ಬಾ ಅಂತಾ ಮಗಳಿಗೆ ಹೇಳಿದ್ದೆ. ಮಗಳು ಸಿದ್ದಾಪುರ ಠಾಣೆಗೆ ಬಂದು ತಾಯಿ ವಿರುದ್ದ ದೂರು ನೀಡಿದ್ದಾಳೆ. ಬಳಿಕ ರಾತ್ರಿ ಪತ್ನಿ ಐವರು ಯುವಕರನ್ನು ಕರೆದುಕೊಂಡು ಬಂದು ನನ್ನ ಮತ್ತು ಅಣ್ಣ ಹಾಗೂ ಸ್ನೇಹಿತನ ಮೇಲೆ ಚಾಕುವಿನಿಂದ ದಾಳಿ ಮಾಡಿದ್ದು, ಘಟನೆಯಲ್ಲಿ ಅಣ್ಣ ಮೃತಪಟ್ಟಿದ್ದಾನೆ. ನನಗೂ ಗಂಭೀರ ಗಾಯ ಆಗಿದ್ದು, ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವೆ. ಇನ್ನು ಸ್ನೇಹಿತನ ಸ್ಥಿತಿ ಗಂಭೀರವಾಗಿದ್ದು, ಆತನನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:04 pm, Tue, 3 February 26

ಬೆಂಗಳೂರಿನಲ್ಲಿ ಮತ್ತೊಂದು ಬ್ಯಾಂಕ್ ದರೋಡೆಗೆ ಯತ್ನ
ಬೆಂಗಳೂರಿನಲ್ಲಿ ಮತ್ತೊಂದು ಬ್ಯಾಂಕ್ ದರೋಡೆಗೆ ಯತ್ನ
ತಂಬಾಕು ಬೆಲೆ ಕುಸಿತ: ಬೆಂಬಲ ಬೆಲೆ ನೀಡುವ ಕುರಿತು ಮೈಸೂರಲ್ಲಿ ಮಹತ್ವದ ಸಭೆ
ತಂಬಾಕು ಬೆಲೆ ಕುಸಿತ: ಬೆಂಬಲ ಬೆಲೆ ನೀಡುವ ಕುರಿತು ಮೈಸೂರಲ್ಲಿ ಮಹತ್ವದ ಸಭೆ
ಧೋನಿ ಆಪ್ತನ ಜೊತೆ ಸುತ್ತಾಡುತ್ತಿರುವ ಪರಮ ಸುಂದರಿ ಕೃತಿ ಸನನ್
ಧೋನಿ ಆಪ್ತನ ಜೊತೆ ಸುತ್ತಾಡುತ್ತಿರುವ ಪರಮ ಸುಂದರಿ ಕೃತಿ ಸನನ್
ಗಾಂಧೀಜಿ ಭಾರತದ ರಾಷ್ಟ್ರಪಿತ ಅಲ್ಲ; ನೆಹರು ಮೊದಲ ಪ್ರಧಾನಿಯಲ್ಲ: ಯತ್ನಾಳ್
ಗಾಂಧೀಜಿ ಭಾರತದ ರಾಷ್ಟ್ರಪಿತ ಅಲ್ಲ; ನೆಹರು ಮೊದಲ ಪ್ರಧಾನಿಯಲ್ಲ: ಯತ್ನಾಳ್
ಅವಧಿ ಮೀರಿದ ಔಷಧಿ ವಿತರಣೆ ಪ್ರಶ್ನಿಸಿದ್ದಕ್ಕೆ ಬೆದರಿಕೆ ಆರೋಪ
ಅವಧಿ ಮೀರಿದ ಔಷಧಿ ವಿತರಣೆ ಪ್ರಶ್ನಿಸಿದ್ದಕ್ಕೆ ಬೆದರಿಕೆ ಆರೋಪ
ತಿನ್ನುವ ತರಕಾರಿಯಲ್ಲಿ ವಿಷ: ಸದ್ದಿಲ್ಲದೇ ಮನಷ್ಯರ ದೇಹ ಸೇರುತ್ತಿದೆ ಕೀಟನಾಶಕ
ತಿನ್ನುವ ತರಕಾರಿಯಲ್ಲಿ ವಿಷ: ಸದ್ದಿಲ್ಲದೇ ಮನಷ್ಯರ ದೇಹ ಸೇರುತ್ತಿದೆ ಕೀಟನಾಶಕ
ಮಣ್ಣು ತುಂಬಿದ ಬುಟ್ಟಿ ಹೊತ್ತ ಸಿದ್ದರಾಮಯ್ಯ, ಡಿಕೆಶಿ:ವಿಡಿಯೋ ನೋಡಿ
ಮಣ್ಣು ತುಂಬಿದ ಬುಟ್ಟಿ ಹೊತ್ತ ಸಿದ್ದರಾಮಯ್ಯ, ಡಿಕೆಶಿ:ವಿಡಿಯೋ ನೋಡಿ
ಈ ಅಣಬೆ ತಿನ್ನುವ ಮುನ್ನ ಜೋಕೆ: ಯಾಮಾರಿದ್ರೆ ಭ್ರಮೆ ಹುಟ್ಟಿಸುತ್ತೆ ಎಚ್ಚರ!
ಈ ಅಣಬೆ ತಿನ್ನುವ ಮುನ್ನ ಜೋಕೆ: ಯಾಮಾರಿದ್ರೆ ಭ್ರಮೆ ಹುಟ್ಟಿಸುತ್ತೆ ಎಚ್ಚರ!
ಲಂಚ ತೆಗೆದುಕೊಳ್ಳುವ ಸಿಕ್ಕಿಬಿದ್ದ ಬಿಜೆಪಿ ಶಾಸಕನ ವಿರುದ್ಧ ಸ್ವಾಮೀಜಿ ಆರೋಪ
ಲಂಚ ತೆಗೆದುಕೊಳ್ಳುವ ಸಿಕ್ಕಿಬಿದ್ದ ಬಿಜೆಪಿ ಶಾಸಕನ ವಿರುದ್ಧ ಸ್ವಾಮೀಜಿ ಆರೋಪ
ತನಗೆ ಕಾಟ ಕೊಟ್ಟವರಿಗೆ ಪಂಚ್ ಕೊಡ್ತಾ ಈ ಮರಿ ಕೋತಿ ‘ಪಂಚ್’?
ತನಗೆ ಕಾಟ ಕೊಟ್ಟವರಿಗೆ ಪಂಚ್ ಕೊಡ್ತಾ ಈ ಮರಿ ಕೋತಿ ‘ಪಂಚ್’?