ಉತ್ತರ ಕನ್ನಡ: ಹಿಂದೂಗಳು (Hindu) ತಮ್ಮ ರಕ್ಷಣೆಗೆ ಮನೆಯಲ್ಲಿ ತಲವಾರ್ ಇಟ್ಟುಕೊಳ್ಳಬೇಕು ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ (Pramod Muthalik) ಶಿರಸಿಯಲ್ಲಿ (Sirsi) ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. ಕ್ಷತ್ರೀಯ ಗುಣ ಬೆಳೆಸಿಕೊಳ್ಳಬೇಕು. ಹಿಂದೂ ಸಂಘಟನೆಗಳು ಒಗ್ಗಟ್ಟಾಗಿ ಹೋಗಬೇಕು. ಬಿಜೆಪಿಯನ್ನು ನಂಬಿ ಕೂತರೆ ಪ್ರಯೋಜನವಿಲ್ಲ. ಕಠಿಣ ಕ್ರಮ ಎಂಬ ಸರ್ಕಾರದ ಬೊಗಳೆ ನಂಬಲು ಜನರು ತಯಾರಿಲ್ಲ. ಸಾಥ್ ಕೊಟ್ಟರೆ ಕೊಡಿ, ಇಲ್ಲ ಒದ್ದು ಮುನ್ನಡೆಯುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ನಾಯಕರು ತುಷ್ಟೀಕರಣದ ಸಲುವಾಗಿ ದೇಶದ್ರೋಹಿಗಳಿಗೂ ದೇಶಭಕ್ತರ ಪಟ್ಟ ಕಟ್ಟಿದ್ದಾರೆ. ಈ ಕಾರಣಕ್ಕಾಗಿಯೇ ಟಿಪ್ಪುನಂತಹ ಹಿಂದೂ ವಿರೋಧಿಯನ್ನು ಕಾಂಗ್ರೆಸ್ ನಾಯಕರು ಮೆರೆಸಿದ್ದಾರೆ. ವೀರ ಸಾವರ್ಕರ್ ಬಗ್ಗೆ ಅರಿಯದ ಮುಸ್ಲಿಂ ಗೂಂಡಾಗಳು ಅವರನ್ನು ಅವಮಾನಿಸಿದ್ದಾರೆ. ಅಂತಹವರನ್ನು ಹುಡುಕಿ ಗುಂಡೇಟು ಹಾಕಬೇಕು.
Published On - 7:59 pm, Mon, 15 August 22