ತನ್ನ ಪತ್ನಿಗೆ ಇಷ್ಟವಾಗುವ ಸೀರೆ ಇಲ್ಲ ಅಂತ ಬಟ್ಟೆ ಅಂಗಡಿ ಸಿಬ್ಬಂದಿಗೆ ಥಳಿಸಿದ ಪತಿ

| Updated By: ವಿವೇಕ ಬಿರಾದಾರ

Updated on: Feb 26, 2024 | 11:39 AM

ಪತ್ನಿಗೆ ಸೀರೆ ಇಷ್ಟವಾಗದ ಹಿನ್ನೆಲೆಯಲ್ಲಿ ಪತಿ ಅಂಗಡಿ ಮಾಲಿಕನಿಗೆ ಬೈದು ಹಲ್ಲೆ ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ಸಿಪಿ ಬಜಾರದಲ್ಲಿ ನಡೆದಿದೆ. ಮಹಮ್ಮದ್ ಹಲ್ಲೆ ಮಾಡಿರುವ ವ್ಯಕ್ತಿ. ಮಹಮ್ಮದ್ ಹಲ್ಲೆ ಮಾಡಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ತನ್ನ ಪತ್ನಿಗೆ ಇಷ್ಟವಾಗುವ ಸೀರೆ ಇಲ್ಲ ಅಂತ ಬಟ್ಟೆ ಅಂಗಡಿ ಸಿಬ್ಬಂದಿಗೆ ಥಳಿಸಿದ ಪತಿ
ಅಂಗಡಿ ಸಿಬ್ಬಂದಿ ಮೇಲೆ ಹಲ್ಲೆ
Follow us on

ಉತ್ತರ ಕನ್ನಡ, ಫೆಬ್ರವರಿ 26: ಪತ್ನಿಗೆ ಸೀರೆ (Saree) ಇಷ್ಟವಾಗದ ಹಿನ್ನೆಲೆಯಲ್ಲಿ ಪತಿ ಅಂಗಡಿ ಮಾಲಿಕನಿಗೆ ಬೈದು ಹಲ್ಲೆ ಮಾಡಿರುವ ಘಟನೆ ಉತ್ತರ ಕನ್ನಡ (Uttar Kannada) ಜಿಲ್ಲೆಯ ಶಿರಸಿ (Sirasi) ನಗರದ ಸಿಪಿ ಬಜಾರದಲ್ಲಿ ನಡೆದಿದೆ. ಮಹಮ್ಮದ್ ಹಲ್ಲೆ ಮಾಡಿರುವ ವ್ಯಕ್ತಿ. ಮಹಮ್ಮದ್ ಹಲ್ಲೆ ಮಾಡಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಶಿರಸಿಯ ನೆಹರುನಗರ ನಿವಾಸಿಯಾಗಿರುವ ಮಹಮ್ಮದ್​ ಕುಟುಂಬದೊಂದಿಗೆ ಫೆ.24 ರಂದು ಸಿಪಿ ಬಜಾರ್​​ನಲ್ಲಿರುವ ಸಾಗರ ಬಟ್ಟೆ ಅಂಗಡಿಗೆ ಬಂದು ಬಟ್ಟೆ ಖರೀದಿ ಮಾಡಿಕೊಂಡು ಹೋಗಿದ್ದಾನು. ಮಹ್ಮಮ್ಮದ್​ ತೆಗೆದುಕೊಂಡು ಹೋದ ಸೀರೆ ಆತನ ಪತ್ನಿ ಇಷ್ಟವಾಗಿಲ್ಲ. ಹೀಗಾಗಿ ಮಹಮ್ಮದ್​ ರಾತ್ರಿ 9 ಗಂಟೆ ಸುಮಾರಿಗೆ ಮತ್ತೆ ಸೀರೆ ಅಂಗಡಿಗೆ ಬಂದಿದ್ದಾನೆ.

ಇಲ್ಲಿ ಬೇರೆ ಸೀರೆ ಕೊಡಿ ಎಂದು ಹೇಳಿದ್ದಾನೆ. ಆಗ ಅಂಗಡಿಯಲ್ಲಿನ ಸಿಬ್ಬಂದಿ ಬೇರೆ ಬೇರೆ ಸೀರೆಗಳನ್ನು ತೋರಿಸಿದ್ದಾರೆ. ಆದರೆ ಮಹಮ್ಮದ ಸೀರೆಗಳು ಸರಿ ಇಲ್ಲ, ಬೇರೆ ಸೀರೆಗಳನ್ನು ತೋರಿಸಿ ಎಂದಿದ್ದಾನೆ. ಅದಕ್ಕೆ ಸಿಬ್ಬಂದಿ ನಮ್ಮಲ್ಲಿರುವುದು ಇಷ್ಟೆ ಸೀರೆ ಎಂದಿದ್ದಾರೆ. ಅದಕ್ಕೆಇ ಮಹ್ಮಮದ್ ಅವಾಚ್ಯ ಶಬ್ದಗಳಿಂದ ಬೈದು “ನೀನು ಒಳ್ಳೆ ಸೀರೆ ಇಡದೆ ಇದ್ದರೆ ಯಾಕೆ ಅಂಗಡಿ ಇಟ್ಟಿದ್ದೀಯಾ”? ಅಂತ ಬೈದಿದ್ದಾನೆ. ಅದಕ್ಕೆ ಸಿಬ್ಬಂದಿ ಬೈಯಬೇಡ, ನೀನು ಖರೀದಿಸಿದ ಸೀರೆಯ ಹಣ ಮರಳಿ ಕೊಡುತ್ತೇನೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಾಗಲಕೋಟೆ: ರನ್ನಬೆಳಗಲಿ ಮಸೀದಿಯಲ್ಲಿ ಮಾರಾಮಾರಿ: ಡೋಲಿ, ಶವಸಂಸ್ಕಾರಕ್ಕೆ ಜಾಗ ಕೇಳಿದ್ದಕ್ಕೆ ಹಲ್ಲೆ

ಕೂಡಲೆ ಅಂಗಡಿಯಿಂದ ಹೊರಗೆ ಹೋದ ಮಹ್ಮಮದ್​ ತನ್ನ ಗೆಳೆಯ ಸರ್ಪರಾಜ್ ಎಂಬುವನನ್ನು ಕರೆದುಕೊಂಡು ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹೊರ ಊರಿನಿಂದ ಬಂದು ನಮಗೆ ದಾದಾಗಿರಿ ಮಾಡುತ್ತಾರೆ. ಈ ದಿವಸ ಇವರಿಗೆ ಒಂದು ಗತಿ ತೋರಿಸಿಯೇ ಬಿಡುವಾ ಅಂತ ಹೇಳಿ ಸಿಬ್ಬಂದಿಗೆ ಅಡ್ಡಗಟ್ಟಿ ತಡೆದು ನಿಲ್ಲಿಸಿದ್ದಾರೆ. ಬಳಿಕ ಮಹ್ಮಮದ ತಂದೆ ಅಬ್ದುಲ್​ ವಹಾಬ್​ ಖಾನ್​ ಸಿಬ್ಬಂದಿಗೆ ದೂಡಿದ್ದಾನೆ. ಇದರಿಂದ ಅಂಗಡಿ ಸಿಬ್ಬಂದಿ ಕೆಳಗೆ ಬಿದ್ದಿದ್ದಾನೆ.

ಇದನ್ನು ಕಂಡ ಅಂಗಡಿಯ ಪ್ರಕಾಶ್​ ಪಟೇಲ್​ ಎಂಬುವರು ಅಂಗಡಿ ಸಿಬ್ಬಂದಿಗೆ ಎಬ್ಬಿಸಲು ಹೋದಾಗ ಸರ್ಪರಾಜ್​ ತಂದೆ ಅಬ್ದುಲ್​ ಅಸ್ಲಾಂ ಪ್ರಕಾಶ ಪಟೇಲ್​ ಅವರ ಮುಖಕ್ಕೆ ಗುದ್ದಿದ್ದಾನೆ. ಬಳಿಕ ಈ ದಿವ ನೀವು ಉಳಿದುಕೊಂಟಿದ್ದೀರಿ ಇನ್ನೊಂದು ದಿನ ನೀವು ಇಲ್ಲಿ ಹೇಗೆ ಅಂಗಡಿ ನಡೆಸುತ್ತೀರಿ ನಿಮಗೆ ಜೀವ ಸಹಿತ ಬಿಡುವುದಿಲ್ಲ ಅಂತ ಬೆದರಿಕೆ ಹಾಕಿದ್ದಾರೆ ಎಂದು ಎಫ್​ಐಆರ್​ನಲ್ಲಿ ದಾಖಲಾಗಿದೆ. ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ