ಕಾಡು ಪ್ರಾಣಿಗಳ ಹಾವಳಿಯಿಂದ ಬೇಸೆತ್ತ ಕಾಡಿಂಚಿನ ಜನರು: ಬೆಳೆ ನಾಶ, ಸೂಕ್ತ ಪರಿಹಾರಕ್ಕೆ ರೈತರು ಮನವಿ

ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಭಾಗವತಿ, ನೀಲವಂಗಿ ಗ್ರಾಮದ ಕಾಡಿಂಚಿನ ಜನರು ಕಾಡು ಪ್ರಾಣಿಗಳ ಹಾವಳಿಯಿಂದ ಬೇಸತ್ತಿದ್ದಾರೆ. ಕಾಳಗಿನಕೊಪ್ಪ ಹಾಗೂ ಸಾಂಬ್ರಾಣಿ ಸೇರಿ ಹಲವೆಡೆ ಆನೆ ಉಪಟಳದಿಂದ ರೈತರು ಬೆಳೆದ ಕಬ್ಬು, ಭತ್ತದ ಬೆಳೆ ನಾಶವಾಗಿವೆ. ಸೂಕ್ತ ಪರಿಹಾರಕ್ಕಾಗಿ ಸರ್ಕಾರಕ್ಕೆ ರೈತರು ಮನವಿ ಮಾಡಿದ್ದಾರೆ. 

ಕಾಡು ಪ್ರಾಣಿಗಳ ಹಾವಳಿಯಿಂದ ಬೇಸೆತ್ತ ಕಾಡಿಂಚಿನ ಜನರು: ಬೆಳೆ ನಾಶ, ಸೂಕ್ತ ಪರಿಹಾರಕ್ಕೆ ರೈತರು ಮನವಿ
ಬೆಳೆ ನಾಶ
Updated By: ಗಂಗಾಧರ​ ಬ. ಸಾಬೋಜಿ

Updated on: Nov 11, 2023 | 3:51 PM

ಉತ್ತರ ಕನ್ನಡ, ನವೆಂಬರ್​​​ 11: ಜಿಲ್ಲೆಯ ಹಳಿಯಾಳ ತಾಲೂಕಿನ ಭಾಗವತಿ, ನೀಲವಂಗಿ ಗ್ರಾಮದ ಕಾಡಿಂಚಿನ ಜನರು ಕಾಡು ಪ್ರಾಣಿಗಳ (wild animal) ಹಾವಳಿಯಿಂದ ಬೇಸತ್ತಿದ್ದಾರೆ. ಕಾಳಗಿನಕೊಪ್ಪ ಹಾಗೂ ಸಾಂಬ್ರಾಣಿ ಸೇರಿ ಹಲವೆಡೆ ಆನೆ ಉಪಟಳದಿಂದ ರೈತರು ಬೆಳೆದ ಕಬ್ಬು, ಭತ್ತದ ಬೆಳೆ ನಾಶವಾಗಿವೆ. ಸೂಕ್ತ ಪರಿಹಾರಕ್ಕಾಗಿ ಸರ್ಕಾರಕ್ಕೆ ರೈತರು ಮನವಿ ಮಾಡಿದ್ದಾರೆ. ಇತ್ತೀಚೆಗೆ ಜಿಲ್ಲೆಯ ಕುಮಟಾ ತಾಲೂಕಿನ ಹೆಗಡೆ ಗ್ರಾಮದಲ್ಲಿ ಜನವಸತಿ ಪ್ರದೇಶದಲ್ಲಿ ಓಡಾಡುತ್ತಿದ್ದ ಚಿರತೆಯೊಂದು ಬೋನಿಗೆ ಬಿದ್ದಿತ್ತು.

ಹೆಗಡೆ ಗ್ರಾಮದಲ್ಲಿ ಕಳೆದ ನಾಲ್ಕು ದಿನಗಳಿಂದ ಚಿರತೆ ಕಾಣಿಸಿಕೊಳ್ಳುತ್ತಿತ್ತು. ಚಿರತೆ ಸೆರೆಹಿಡಿಯುವಂತೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ಮನವಿ ಮಾಡಿದ್ದರು. ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ‌ ಸೆರೆಹಿಡಿಯಲು ಗ್ರಾಮದ ಬಳಿ ಬೋನ್ ಇರಿಸಿದ್ದರು. ಡಿಆರ್‌ಎಫ್‌ಓ ರಾಘವೇಂದ್ರ ಹೂವಣ್ಣ ನೇತೃತ್ವದಲ್ಲಿ ಎರಡು ದಿನಗಳ ಕಾರ್ಯಾಚರಣೆ ಬಳಿಕ ಚಿರತೆ ಸೆರೆಸಿಕ್ಕಿತ್ತು.

ಮೃತಪಟ್ಟ ಸ್ಥಿತಿಯಲ್ಲಿ ಗಂಡು ಚಿರತೆ ಮೃತದೇಹ ಹೆದ್ದಾರಿ ಪಕ್ಕ ಪತ್ತೆ

ಮೃತಪಟ್ಟ ಸ್ಥಿತಿಯಲ್ಲಿ ಗಂಡು ಚಿರತೆ (2) ಮೃತದೇಹ ಜಿಲ್ಲೆಯ ಮುಂಡಗೋಡ ತಾಲೂಕು ಬಳಿಯ ಶಿರಸಿ ಯಿಂದ ಹುಬ್ಬಳ್ಳಿಗೆ ಹೋಗುವ ಹೆದ್ದಾರಿ ಪಕ್ಕ ಪತ್ತೆಯಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಾಹನ ಸವಾರರು ಮಾಹಿತಿ ನೀಡಿದ್ದಾರೆ. ರಸ್ತೆ ಅಪಘಾತದಿಂದ ಗಂಡು ಚಿರತೆ ಮೃತಪಟ್ಟಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಹೆದ್ದಾರಿ ಪಕ್ಕದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ದಾಂದಲೆ, ಬೆಳೆ ನಾಶ: ಒಂಟಿ ಸಲಗ ಸೆರೆ

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಗ್ರಾಮದಲ್ಲಿ ಕಳೆದ ಮೂರು ತಿಂಗಳಿನಿಂದ ದಾಂದಲೆ ಎಬ್ಬಿಸಿ ಇಬ್ಬರ ಸಾವಿಗೆ ಕಾರಣವಾಗಿ ಕೋಟ್ಯಾಂತರ ಮೌಲ್ಯದ ಕಾಫಿ ಬಾಳೆ, ತೆಂಗು, ಅಡಿಕೆ ಬೆಳೆ ನಾಶ ಮಾಡಿದ್ದ ಭುವನೇಶ್ವರಿ ಗ್ಯಾಂಗಿನ 1 ಒಂಟಿ ಸಲಗ ಸೆರೆ ಹಿಡಿಯಲಾಗಿದೆ. 6 ಕಾಡಾನೆಗಳ ಸ್ಥಳಾಂತರಕ್ಕೆ ರಾಜ್ಯ ಸರ್ಕಾರದ ಸೂಚನೆ ಮೇರೆಗೆ ಚಿಕ್ಕಮಗಳೂರು ವಲಯ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಆದೇಶ ನೀಡಿದ್ದಾರೆ.

ಇದನ್ನೂ ಓದಿ: ಮಲೆನಾಡಿನಲ್ಲಿ ಕಾಡಾನೆಗಳ ದಾಂಧಲೆ: ಸೆರೆಹಿಡಿದಿರುವ 7 ಕಾಡಾನೆಗಳನ್ನು ಸ್ಥಳಾಂತರಿಸುವಂತೆ ಆದೇಶ

ಮತ್ತಾವರ ಗ್ರಾಮದಲ್ಲಿ 6 ಕಾಡಾನೆಗಳು ಹಿಂಡು ಬೀಡುಬಿಟ್ಟಿದ್ದು ರಾತ್ರಿ ಗ್ರಾಮಕ್ಕೆ ಎಂಟ್ರಿ ನೀಡಿ ಬೆಳೆ ನಾಶ ಮಾಡಿ ಬೆಳಗಾಗುತ್ತಿದ್ದಂತೆ ಕಾಡು ಸೇರುತ್ತಿವೆ. ಮತ್ತಾವರ ಗ್ರಾಮದಲ್ಲಿ ಬೆಳೆ ನಾಶವಾದ ಕಾಡಿಂಚಿನ ಗ್ರಾಮಗಳಲ್ಲಿ ಮೂರು ಆನೆಗಳನ್ನು ಬಳಸಿ ರೌಂಡ್ಸ್ ಓಡೆಸಲಾಯಿತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.