ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ; ಜಿಲ್ಲಾಸ್ಪತ್ರೆಯ ಒಳಗಡೆ ನುಗ್ಗಿದ ನೀರು

ಉತ್ತರ ಕನ್ನಡ ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ಜಿಲ್ಲಾ ಆಸ್ಪತ್ರೆಯ ಡಯಾಲಿಸಿಸ್ ಕೇಂದ್ರಕ್ಕೆ ನೀರು ನುಗ್ಗಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ; ಜಿಲ್ಲಾಸ್ಪತ್ರೆಯ ಒಳಗಡೆ ನುಗ್ಗಿದ ನೀರು
ಉತ್ತರ ಕನ್ನಡ ಜಿಲ್ಲಾಸ್ಪತ್ರೆ
Edited By:

Updated on: Jul 16, 2022 | 7:24 PM

ಉತ್ತರ ಕನ್ನಡ: ಉತ್ತರ ಕನ್ನಡ (Uttar Kannada) ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ಜಿಲ್ಲಾ ಆಸ್ಪತ್ರೆಯ (District Hospital)  ಡಯಾಲಿಸಿಸ್ (Dialysis) ಕೇಂದ್ರಕ್ಕೆ ನೀರು ನುಗ್ಗಿದೆ. ಆಸ್ಪತ್ರೆಯ ಗೋಡೆ ರಂಧ್ರ ಮೂಲಕ ನೀರು ನುಗ್ಗಿದ್ದು, ರೋಗಿಗಳು ಪರದಾಡಿದ್ದಾರೆ. ಬಳಿಕ ಸಿಬ್ಬಂದಿ ನೀರನ್ನು ಹೊರಹಾಕಿದ್ದಾರೆ.

ಭಾರೀ ಮಳೆಗೆ  ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಹೊಸಾಕುಳಿ ಗ್ರಾಮ ಜಲಾವೃತಗೊಂಡಿದೆ. ಮಳೆಯಿಂದ ಹಳ್ಳ ಉಕ್ಕಿಹರಿಯುತ್ತಿದ್ದು, ಇದರಿಂದ ಮನೆಗಳಿಗೆ ನೀರು ನುಗ್ಗಿದೆ. ಕಳೆದ ಬಾರಿ  ಮಳೆಯಾದಾಗ ಬಾಲಕಿಯೊಬ್ಬಳು ಮಾಧ್ಯಮದ ಮೂಲಕ ಸೇತುವೆಗೆ ಮನವಿ ಮಾಡಿದ್ದಳು. ಬಾಲಕಿ ಮನವಿಗೆ ಸ್ಪಂದಿಸಿ ಸ್ಥಳಕ್ಕೆ ಭೇಟಿ ನೀಡಿದ್ದ ಸ್ಥಳಿಯ ಶಾಸಕ ದಿನಕರ ಶೆಟ್ಟಿ, ಅಂದಿನ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್​​​ ​ ಸ್ಥಳಕ್ಕೆ ಭೇಟಿ ನೀಡಿ, ಸೇತುವೆ ನಿರ್ಮಿಸಿಕೊಡುವ ಭರವಸೆ ನೀಡಿದ್ದರು.

ಆದರೆ ಏಳೆಂಟು ತಿಂಗಳು ಕಳೆದರೂ ಶಾಸಕರು, ಸಚಿವರು, ಅಧಿಕಾರಿಗಳು ಗ್ರಾಮದತ್ತ ಮುಖ ಮಾಡಿಲ್ಲ. ಸದ್ಯ ಸುರಿಯುತ್ತಿರುವ ಮಳೆಗೆ ಜನರ ಬದುಕು ತತ್ತರಿಸಿದೆ. ಜೀವ ಪಣಕ್ಕಿಟ್ಟು, ಪ್ರವಾಹ ದಾಟಿ ಶಾಲೆಗೆ ಹೋಗಬೇಕಾದ ದಯನಿಯ ಸ್ಥಿತಿ ಇಲ್ಲಿನ ಮಕ್ಕಳದ್ದಾಗಿದೆ.

ಮಳೆಯಿಂದ ಶರಾವತಿ ನದಿ ಉಕ್ಕಿ ಹರಿಯುತ್ತಿದ್ದು,  ಹೊನ್ನಾವರ ತಾಲೂಕಿನ ಗುಡೇನಕಟ್ಟು ಗ್ರಾಮದ  30ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಮನೆಗಳಿಲ್ಲಿ ಸಿಲುಕಿರುವ ಜನರನ್ನು ಎಸ್‌ಡಿಆರ್‌ಎಫ್‌ ಸಿಬ್ಬಂದಿ ಬೋಟ್‌ ಮೂಲಕ ಕಡತೋಕು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸುತ್ತಿದ್ದಾರೆ. ಗ್ರಾಮಕ್ಕೆ ನೀರು ನುಗ್ಗಿದ ಹಿನ್ನೆಲೆ ಗ್ರಾಮಕ್ಕೆ ಸಂಪರ್ಕ ಕಡಿತವಾಗಿದೆ.

Published On - 6:53 pm, Sat, 16 July 22