ಬೆಂಗಳೂರು, ಜುಲೈ 12: ಕರ್ನಾಟಕ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಿಗಮ ಹಗರಣದಲ್ಲಿ ಮಾಜಿ ಸಚಿವ, ಶಾಸಕ ಬಿ ನಾಗೇಂದ್ರ ವಿರುದ್ದ ತನಿಖಾ ಸಂಸ್ಥೆಗಳಿಗೆ ಅನೇಕ ಸಾಕ್ಷ್ಯಗಳು ಸಿಕ್ಕಿವೆ ಎಂಬುದು ತಿಳಿದುಬಂದಿದೆ. ಹಗರಣದ ತನಿಖೆ ನಡೆಸುತ್ತಿರುವ ಎಸ್ಐಟಿ, ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ನಾಗೇಂದ್ರ ವಿರುದ್ಧ ಸಾಕಷ್ಟು ಸಾಕ್ಷ್ಯ ಕಲೆ ಹಾಕಿದ್ದಾರೆ. ಈ ಪೈಕಿ ಅನೇಕ ಸಂಗತಿಗಳು ಹಗರಣದಲ್ಲಿ ನಾಗೇಂದ್ರ ಪಾತ್ರ ಇದೆ ಎಂಬುದನ್ನು ಪುಷ್ಟೀಕರಿಸಿವೆ.
ಈ ಸಾಕ್ಷ್ಯಗಳ ಆಧಾರದಲ್ಲೇ ಇ.ಡಿ ಮೂರು ಬಾರಿ ನಾಗೇಂದ್ರಗೆ ವಿಚಾರಣೆಗೆ ಬುಲಾವ್ ನೀಡಿತ್ತು ಮತ್ತು ಈಗ ವಶಕ್ಕೆ ಪಡೆಡುಕೊಂಡಿದೆ. ಬೆಂಗಳೂರಿನ ಶಾಂಗ್ರಿಲಾ ಹೋಟೆಲ್‌ನಲ್ಲಿ ನಡೆದ ಸಭೆಯೇ ನಾಗೇಂದ್ರ ವಿರುದ್ಧದ ಮೊದಲ ಹಾಗೂ ಪ್ರಮುಖ ಸಾಕ್ಷಿ ಎನ್ನಲಾಗಿದೆ.
ಇದನ್ನೂ ಓದಿ: ವಾಲ್ಮೀಕಿ ನಿಗಮದಲ್ಲಿ ಬಹುಕೋಟಿ ಹಗರಣ: ಶಾಸಕ ನಾಗೇಂದ್ರ ಇಡಿ ವಶಕ್ಕೆ
ಈ ಮಧ್ಯೆ, ಬಹುಕೋಟಿ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಮೂರು ದಿನಗಳಿಂದ ತನಿಖೆ ನಡೆಸುತ್ತಿರುವ ಇಡಿ ಅಧಿಕಾರಿಗಳು ಮಾಜಿ ಸಚಿವ, ಬಳ್ಳಾರಿ ಗ್ರಾಮಾಂತರ ಕಾಂಗ್ರೆಸ್ ಶಾಸಕ ನಾಗೇಂದ್ರ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
(ವರದಿ: ಪ್ರದೀಪ್ ‘ಟಿವಿ9’)
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ