ಬೆಂಗಳೂರು, ಜುಲೈ 10: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ (Valmiki Scheduled Tribes Development Corporation) ನಡೆದಿರುವ 187 ಕೋಟಿ ರೂ. ಹಗರಣ, ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಮಾಜಿ ಸಚಿವ ಬಿ. ನಾಗೇಂದ್ರ ತಲೆದಂಡವಾಗಿದೆ. ಇಂದು ಅವರ ಪಿಎ ಹರೀಶ್‌ನನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ಯೂನಿಯನ್ ಬ್ಯಾಂಕ್‌ನ (Union Bank) ಕೆಲ ಹಿರಿಯ ಅಧಿಕಾರಿಗಳು ಈ ಅವ್ಯವಹಾರದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗುತ್ತಿದೆ. ಒಟ್ಟು ಆರು ಜನ ಯೂನಿಯನ್ ಬ್ಯಾಂಕ್‌ನ ಆಡಳಿತ ಮಂಡಳಿಯವರು ಆರೋಪಿ ಪಟ್ಟಿಯಲ್ಲಿದ್ದು, ಈವರೆಗೆ ಎಲ್ಲರೂ ನಾಪತ್ತೆ ಆಗಿದ್ದಾರೆ ಎನ್ನಲಾಗುತ್ತಿದೆ.
ಜೊತೆಗೆ ಡೆಪ್ಯೂಟಿ ಬ್ರಾಂಚ್ ಮುಖ್ಯಸ್ಥ ದೀಪ ಹಾಗೂ ಕ್ರೆಡಿಟ್ ಆಫೀಸರ್ ಕೃಷ್ಣಮೂರ್ತಿ ಎಂಬುವವರ ಹೆಸರೂ ಕೂಡ ಸಿಬಿಐ ಎಫ್ಐಆರ್ನಲ್ಲಿ ಉಲ್ಲೇಖವಾಗಿದೆ. ಸುಚಿಸ್ಮಿತಾ ಹೆಸರು ಸಹ ಸಿಬಿಐ ಪ್ರಕರಣದಲ್ಲಿ ಉಲ್ಲೇಖಿಸಲಾಗಿದೆ.
ವಾಲ್ಮೀಕಿ ನಿಗಮಕ್ಕೆ ಸರ್ಕಾರದಿಂದ ವರ್ಗಾವಣೆಗೊಂಡ ಕೋಟಿ ಕೋಟಿ ಹಣವನ್ನು ಹೇಗೆ ಅದನ್ನು ಸ್ವಂತಕ್ಕೆ ಬಳಿಸಿಕೊಂಡಿದ್ದಾರೆ ಎನ್ನುವುದನ್ನ ನೋಡುವುದಾದರೆ, ನೆಟ್ ಬ್ಯಾಂಕಿಂಗ್, ಆರ್ಟಿಜಿಎಸ್, ಗೂಗಲ್ ಪೇ, ಪೋನ್ ಪೇ ಮುಖಾಂತರ ಹಣವನ್ನು ಹಂಚಿಕೆ ಮಾಡಿರುವುದು ಬೆಳಕಿಗೆ ಬಂದಿದೆ.
ಇದನ್ನೂ ಓದಿ: ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ: ನಾಗೇಂದ್ರ ಪಿಎ ಹರೀಶ್ ಬಂಧನ, ಯಾರು ಈತ? ಇಲ್ಲಿದೆ ವಿವರ
ಹೀಗೆ ಯೂನಿಯನ್ ಬ್ಯಾಂಕ್ ಅಫ್ ಇಂಡಿಯಾದಿಂದ ಬಂದಿದ್ದ ಹಣವನ್ನು ಕಡಲೆಪುರಿಯಂತೆ ಹಂಚಿ ಕ್ಯಾಶ್ ರೂಪಕ್ಕೆ ತರಲಾಗಿತ್ತು. ಬರೋಬ್ಬರಿ 94 ಕೋಟಿ 74 ಲಕ್ಷ ರೂ. ಅನ್ನು ಹಂಚಿಕೆ ಮಾಡಿ ಕ್ಯಾಶ್ ಮಾಡಿಕೊಂಡಿದ್ದಾರೆ. ಹೀಗೆ ಹಣವನ್ನ ಕಳಿಸಿದವರಿಗೆಲ್ಲ ಪುನಃ ಕ್ಯಾಶ್ ಪಡೆಯುವಾಗ ಇಂತಿಷ್ಟು ಕಮೀಷನ್ ನೀಡಿಲಾಗಿದೆ. ಈ ಬಗ್ಗೆ A9 ಸತ್ಯನಾರಾಯಣ ಇಟಕಾರಿ ಬಾಯ್ಬಿಟ್ಟಿದ್ದಾರೆ.
ಇದನ್ನೂ ಓದಿ: ವಾಲ್ಮೀಕಿ ನಿಗಮದ ಹಗರಣಕ್ಕೆ ಹವಾಲಾ ಲಿಂಕ್! ಎಸ್ಐಟಿ ತನಿಖೆಯಲ್ಲಿ ಬಯಲು
ವಾಲ್ಮೀಕಿ ನಿಗಮದ ಅಧಿಕಾರಿ ಚಂದ್ರಶೇಖರನ್ ಮೇ 26ರಂದು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಇವರ ಸಾವಿನ ಬೆನ್ನಲ್ಲೇ ನಿಗಮದಲ್ಲಿ ನಡೆದಿದ್ದ ಬಹುಕೋಟಿ ಹಗರಣ ಬಟಾಬಯಲಾಗಿತ್ತು. ಐಟಿ ಕಂಪನಿಗಳು ಮತ್ತು ಹೈದರಾಬಾದ್ ಮೂಲದ ಸಹಕಾರಿ ಬ್ಯಾಂಕ್‌ನ ವಿವಿಧ ಖಾತೆಗಳಿಗೆ 88.62 ಕೋಟಿ ರೂ. ಅಕ್ರಮವಾಗಿ ವರ್ಗಾವಣೆ ಮಾಡಲಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.