ಜನವರಿ 9 ರಂದು ರಾಜ್ಯಾದ್ಯಂತ ರೈಲು ತಡೆ ಚಳವಳಿ: ಸರ್ಕಾರಕ್ಕೆ ವಾಟಾಳ್​ ನಾಗರಾಜ್ ಎಚ್ಚರಿಕೆ

ಮರಾಠ ಅಭಿವೃದ್ಧಿ ಪ್ರಾಧಿಕಾರ ರದ್ದುಗೊಳಿಸಬೇಕು. ಇಲ್ಲದಿದ್ದರೆ ಜನವರಿ 9ರಂದು ರಾಜ್ಯಾದ್ಯಂತ 1,000 ಕಡೆ ರೈಲ್ವೇ ಹಳಿಗಳ ಮೇಲೆ ಕುಳಿತು ರೈಲು ತಡೆ ಚಳವಳಿ ನಡೆಸಲಾಗುವುದು ಎಂದು ಕನ್ನಡಪರ ಹೋರಾಟಗಾರ ವಾಟಾಳ್​ ನಾಗಾರಾಜ್ ತಿಳಿಸಿದ್ದಾರೆ.

ಜನವರಿ 9 ರಂದು ರಾಜ್ಯಾದ್ಯಂತ ರೈಲು ತಡೆ ಚಳವಳಿ: ಸರ್ಕಾರಕ್ಕೆ ವಾಟಾಳ್​ ನಾಗರಾಜ್ ಎಚ್ಚರಿಕೆ
ವಾಟಾಳ್​ ನಾಗರಾಜ್​
Updated By: ಸಾಧು ಶ್ರೀನಾಥ್​

Updated on: Dec 22, 2020 | 4:35 PM

ಮೈಸೂರು: ಮರಾಠ ಅಭಿವೃದ್ಧಿ ಪ್ರಾಧಿಕಾರವನ್ನು ರದ್ದು ಮಾಡದಿದ್ದರೆ ರಾಜ್ಯಾದ್ಯಂತ ರೈಲು ತಡೆ ಚಳವಳಿ ನಡೆಸುವುದಾಗಿ ಕನ್ನಡಪರ ಹೋರಾಟಗಾರ ವಾಟಾಳ್​ ನಾಗಾರಾಜ್​ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ. ಮರಾಠ ಅಭಿವೃದ್ಧಿ ನಿಗಮ ರಚನೆಯ ಹಿಂದೆ ರಾಜಕೀಯ ಲಾಭ ಅಡಗಿದೆ. ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ತಮ್ಮ ಲಾಭಕ್ಕಾಗಿ ಈ ಪ್ರಾಧಿಕಾರ ರಚಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.

ಈ ಕೂಡಲೇ ಮರಾಠ ಅಭಿವೃದ್ಧಿ ಪ್ರಾಧಿಕಾರ ರದ್ದುಗೊಳಿಸಬೇಕು. ಇಲ್ಲದಿದ್ದರೆ ಜನವರಿ 9ರಂದು ರಾಜ್ಯಾದ್ಯಂತ ರೈಲು ತಡೆ ಚಳವಳಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ನಮ್ಮ ಆಗ್ರಹಕ್ಕೆ ಸರ್ಕಾರ ಸ್ಪಂದಿಸದೇ ಇದ್ದರೆ ರಾಜ್ಯದ 1,000 ಕಡೆ ರೈಲ್ವೇ ಹಳಿಗಳ ಮೇಲೆ ಕುಳಿತು ಪ್ರತಿಭಟನೆ ನಡೆಸಲಿದ್ದೇವೆ ಎಂದು ತಿಳಿಸಿದ್ದಾರೆ.

ಮರಾಠ ಅಭಿವೃದ್ಧಿ ಪ್ರಾಧಿಕಾರ ರಚಿಸಲು ಸಿಎಂ ಅಸ್ತು : Karnataka Government decides to form Maratha Development Authority

Published On - 4:16 pm, Tue, 22 December 20