ಕಾಫಿನಾಡಿನಲ್ಲಿ ರಸ್ತೆ ಮಧ್ಯೆ ಬ್ಯಾಟ್ ಬೀಸಿ ಅಭಿಮಾನಿಗಳನ್ನು ರಂಜಿಸಿದ ಭಾರತೀಯ ಮಹಿಳಾ ಕ್ರಿಕೆಟ್ ಆಟಗಾರ್ತಿ ವೇದಾ ಕೃಷ್ಣಮೂರ್ತಿ

| Updated By: Skanda

Updated on: Apr 13, 2021 | 10:50 AM

ಕ್ರಿಕೆಟ್‍ನಲ್ಲಿ ಸಾಧನೆ ಮಾಡುವ ಕನಸು ಕಂಡಿದ್ದ ನನಗೆ ಅವಕಾಶ ಸಿಕ್ಕಿದೆ. ಎಲ್ಲಾ ಮಹಿಳೆಯರೂ ಕೂಡ ಎಲ್ಲಾ ಕ್ಷೇತ್ರದಲ್ಲೂ ಕಾಲಿಟ್ಟು, ಸಮಾಜದ ಮುಖ್ಯ ವಾಹಿನಿಗೆ ಬರುವಂತಾಗಬೇಕು ಎಂದು ವೇದಾ ಕೃಷ್ಣಮೂರ್ತಿ ಆಶಿಸಿದರು.

ಕಾಫಿನಾಡಿನಲ್ಲಿ ರಸ್ತೆ ಮಧ್ಯೆ ಬ್ಯಾಟ್ ಬೀಸಿ ಅಭಿಮಾನಿಗಳನ್ನು ರಂಜಿಸಿದ ಭಾರತೀಯ ಮಹಿಳಾ ಕ್ರಿಕೆಟ್ ಆಟಗಾರ್ತಿ ವೇದಾ ಕೃಷ್ಣಮೂರ್ತಿ
ಅಭಿಮಾನಿಗಳ ಜೊತೆ ಕ್ರಿಕೆಟ್ ಆಡಿದ ವೇದಾ ಕೃಷ್ಣಮೂರ್ತಿ
Follow us on

ಚಿಕ್ಕಮಗಳೂರು: ಭಾರತೀಯ ಕ್ರಿಕೆಟ್ ತಂಡದ ಮಹಿಳಾ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನಲ್ಲಿ ರಸ್ತೆ ಮಧ್ಯೆಯೇ ಕ್ರಿಕೆಟ್ ಆಡಿ ಅಭಿಮಾನಿಗಳನ್ನು ಚಕಿತಗೊಳಿಸಿದ್ದಾರೆ. ಮೂಲತಃ ಜಿಲ್ಲೆಯ ಕಡೂರು ತಾಲೂಕಿನವರಾದ ವೇದಾ ಕೃಷ್ಣಮೂರ್ತಿ ಖಾಸಗಿ ಕಾರ್ಯಕ್ರಮದ ನಿಮಿತ್ತ ಎನ್.ಆರ್.ಪುರಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅವರನ್ನ ಕಂಡ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದು, ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿ ಪಟ್ಟರು.

ಇದೇ ವೇಳೆ, ಎನ್.ಆರ್.ಪುರದ ಲೆದರ್ ಬಾಲ್ ಕ್ರಿಕೆಟ್ ಕ್ಲಬ್ ಆಟಗಾರರು, ವೇದಾ ಕೃಷ್ಣಮೂರ್ತಿಗೆ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು. ಸನ್ಮಾನದ ಬಳಿಕ ಅಭಿಮಾನಿಗಳು ಬ್ಯಾಟ್ ತಂದು ವೇದಾ ಕೈಗಿಟ್ಟು ಕ್ರಿಕೆಟ್ ಆಡುವಂತೆ ಕೇಳಿಕೊಂಡಿದ್ದು, ಅಭಿಮಾನಿಗಳು ಎಸೆದ ಬಾಲ್‍ಗೆ ವೇದಾ ಎನ್.ಆರ್.ಪುರ ನಗರದ ವಾಟರ್ ಟ್ಯಾಂಕ್ ಸರ್ಕಲ್‍ನಲ್ಲಿ ರಸ್ತೆ ಮಧ್ಯೆಯೇ ಬ್ಯಾಟ್ ಬೀಸಿ ಖುಷಿ ಪಟ್ಟರು.

ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ, ಜಿಲ್ಲೆಯ ಹೆಮ್ಮೆಯ‌ ತಾರೆಯೊಂದಿಗೆ ಕೆಲ ಕಾಲ ಕ್ರಿಕೆಟ್ ಆಡಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ, ಅಭಿಮಾನಿಗಳ ಜೊತೆ ಕಾಲ ಕಳೆದು ವೇದಾ ಕೃಷ್ಣಮೂರ್ತಿ ಅವರು ಖುಷಿಪಟ್ಟಿದ್ದಾರೆ. ಈ ವೇಳೆ ಮಾತನಾಡಿದ ಅವರು ಅವಕಾಶಕ್ಕಾಗಿ ನಾವು ಕಾಯಬಾರದು, ಅವಕಾಶವನ್ನು ನಾವೇ ಹುಡುಕುವ ಪ್ರಯತ್ನ ಮಾಡಬೇಕು. ಇತ್ತೀಚಿಗೆ ಕ್ರಿಕೆಟ್‍ನಲ್ಲಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ಸಿಗುತ್ತಿದೆ. ನಮ್ಮನ್ನ ನಾವು ಮೊದಲು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ವೇದಾ ಕೃಷ್ಣಮೂರ್ತಿಗೆ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದ ಕ್ಷಣ

ಕ್ರಿಕೆಟ್‍ನಲ್ಲಿ ಸಾಧನೆ ಮಾಡುವ ಕನಸು ಕಂಡಿದ್ದ ನನಗೆ ಅವಕಾಶ ಸಿಕ್ಕಿದೆ. ಎಲ್ಲಾ ಮಹಿಳೆಯರೂ ಎಲ್ಲಾ ಕ್ಷೇತ್ರದಲ್ಲೂ ಕಾಲಿಟ್ಟು, ಸಮಾಜದ ಮುಖ್ಯ ವಾಹಿನಿಗೆ ಬರುವಂತಾಗಬೇಕು ಎಂದು ವೇದಾ ಕೃಷ್ಣಮೂರ್ತಿ ಆಶಿಸಿದರು.

ಇದನ್ನೂ ಓದಿ:

MS Dhoni IPL 2021 CSK Team Player: ಸವ್ಯಸಾಚಿ ಧೋನಿಗೆ ಸರಿಸಾಟಿ ಯಾರು? ಕ್ರಿಕೆಟ್​ ಬದುಕಿನಲ್ಲಿ ಮುಟ್ಟಿದೆಲ್ಲವನ್ನು ಚಿನ್ನವಾಗಿಸಿದ ಆಟಗಾರ ಮಹೇಂದ್ರ!

India vs England: ಬದುಕಿನ ಉತ್ಕೃಷ್ಟ ಕ್ರಿಕೆಟ್​ ಸೀಸನ್: ಇಂಗ್ಲೆಂಡ್ ವಿರುದ್ಧ ಸರಣಿಗಳನ್ನು ಗೆದ್ದ ನಂತರ ಕೋಚ್ ರವಿಶಾಸ್ತ್ರಿ ಉದ್ಗಾರ