MS Dhoni IPL 2021 CSK Team Player: ಸವ್ಯಸಾಚಿ ಧೋನಿಗೆ ಸರಿಸಾಟಿ ಯಾರು? ಕ್ರಿಕೆಟ್ ಬದುಕಿನಲ್ಲಿ ಮುಟ್ಟಿದೆಲ್ಲವನ್ನು ಚಿನ್ನವಾಗಿಸಿದ ಆಟಗಾರ ಮಹೇಂದ್ರ!
MS Dhoni Profile: ಎಂಎಸ್ ಧೋನಿ ಐಪಿಎಲ್‌ನಲ್ಲಿ ಇದುವರೆಗೆ 204 ಪಂದ್ಯಗಳನ್ನು ಆಡಿದ್ದಾರೆ. 40.99 ಸರಾಸರಿಯಲ್ಲಿ 4632 ರನ್ ಗಳಿಸಿದ್ದಾರೆ.
ಐಪಿಎಲ್ 2021 ಗೆ ಕ್ಷಣಗಣನೆ ಪ್ರಾರಂಭವಾಗಿದೆ. ವಿಶ್ವದ ಅತಿದೊಡ್ಡ ಕ್ರಿಕೆಟ್ ಲೀಗ್ ಏಪ್ರಿಲ್ 9 ರಿಂದ ಪ್ರಾರಂಭವಾಗಲಿದೆ. ಅಂತಹ ಪರಿಸ್ಥಿತಿಯಲ್ಲಿ, ಐಪಿಎಲ್ 2021ರ ಆರಂಭಕ್ಕೂ ಮೊದಲು, ನಾವು ಎಲ್ಲಾ ತಂಡಗಳಲ್ಲಿ ಅದ್ಭುತ ಆಟ ಆಡಿರುವ ಆಟಗಾರರ ಬಗ್ಗೆ ಮಾತನಾಡಲೇಬೇಕಿದೆ. ಅಂತಹ ಆಟಗಾರರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಹೆಸರು ಮೊದಲ ಸಾಲಿನಲ್ಲಿ ನಿಲ್ಲುತ್ತದೆ. ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಧೋನಿ ವಿಶ್ವದ ಅತ್ಯುತ್ತಮ ಕ್ರಿಕೆಟಿಗ ಮತ್ತು ನಾಯಕ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಬ್ಯಾಟಿಂಗ್‌ನಲ್ಲಿ ಎದುರಾಳಿ ತಂಡವನ್ನು ಒಂಟಿಯಾಗಿ ಎದುರಿಸಬಲ್ಲ ಸಾಮರ್ಥ್ಯ ಧೋನಿಗಿದೆ. ಮತ್ತು ವಿಕೆಟ್ ಕೀಪಿಂಗ್‌ನೊಂದಿಗೆ ಪಂದ್ಯದ ನಿಲುವನ್ನು ಹಲವು ಬಾರಿ ಬದಲಾಯಿಸಿದ್ದಾರೆ. ಎಂ.ಎಸ್.ಧೋನಿಯವರ ಅತ್ಯುತ್ತಮ ನಾಯಕತ್ವವು ಟೀಮ್ ಇಂಡಿಯಾ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಯಶಸ್ಸಿನ ಪರಾಕಾಷ್ಠೆಗೆ ತಂದಿದೆ. ಚೆನ್ನೈ ತಂಡವು ಐಪಿಎಲ್‌ನ ಎರಡನೇ ಅತ್ಯಂತ ಯಶಸ್ವಿ ಫ್ರ್ಯಾಂಚೈಸ್ ಆಗಲು ಧೋನಿ ಒಂದು ಕಾರಣವಾಗಿದ್ದಾರೆ.
2008 ರಲ್ಲಿ ಐಪಿಎಲ್ ಆರಂಭದಿಂದಲೂ ಧೋನಿ ಚೆನ್ನೈ ಜೊತೆಗಿದ್ದಾರೆ. ಮೊದಲ ಆವೃತ್ತಿಯಲ್ಲೇ ಈ ತಂಡದ ನಾಯಕತ್ವವಹಿಸಿಕೊಂಡ ಧೋನಿ ಇನ್ನೂ ಈ ಸ್ಥಾನದಲ್ಲಿದ್ದಾರೆ. ಈ ಸಮಯದಲ್ಲಿ, ಅವರು 2010, 2011 ಮತ್ತು 2018 ರಲ್ಲಿ ಮೂರು ಬಾರಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಐಪಿಎಲ್ ಚಾಂಪಿಯನ್ ಆಗಿಸಿದ್ದಾರೆ. ಅಲ್ಲದೆ, ಸಿಎಸ್ಕೆ ಐದು ಬಾರಿ ರನ್ನರ್ ಅಪ್ ಆಗಿತ್ತು. ಐಪಿಎಲ್ 2020 ಕ್ಕಿಂತ ಮೊದಲು, ಚೆನ್ನೈ ಪ್ರತಿ ಬಾರಿಯೂ ಐಪಿಎಲ್ ಪ್ಲೇಆಫ್ ತಲುಪಿತ್ತು. 2015 ರಲ್ಲಿ ಸಿಎಸ್‌ಕೆ ನಿಷೇಧಿಸಿದಾಗ, ರೈಸಿಂಗ್ ಪುಣೆ ಸೂಪರ್‌ಜಿಯಂಟ್ ತೆಗೆದುಕೊಂಡ ಮೊದಲ ಆಟಗಾರ ಧೋನಿ. ಅಂತೆಯೇ, 2018 ರಲ್ಲಿ ಚೆನ್ನೈಗೆ ಹಿಂದಿರುಗಿದಾಗ, ಧೋನಿ ಅವರನ್ನು ಮೊದಲು ಉಳಿಸಿಕೊಳ್ಳಲಾಯಿತು.
ಐಪಿಎಲ್‌ನಲ್ಲಿ ಧೋನಿ ಸಾಧನೆ ಹೀಗಿದೆ ಎಂಎಸ್ ಧೋನಿ ಐಪಿಎಲ್‌ನಲ್ಲಿ ಇದುವರೆಗೆ 204 ಪಂದ್ಯಗಳನ್ನು ಆಡಿದ್ದಾರೆ. 40.99 ಸರಾಸರಿಯಲ್ಲಿ 4632 ರನ್ ಗಳಿಸಿದ್ದಾರೆ. ಧೋನಿ ಐಪಿಎಲ್‌ನಲ್ಲಿ ಇನ್ನೂ ಒಂದು ಶತಕ ಬಾರಿಸಲಿಲ್ಲ ಆದರೆ ಅವರು 23 ಅರ್ಧಶತಕಗಳನ್ನು ಗಳಿಸಿದ್ದಾರೆ. ಅಜೇಯ 84 ರನ್ ಅವರ ಗರಿಷ್ಠ ಸ್ಕೋರ್ ಆಗಿದೆ. 2013 ರ ಐಪಿಎಲ್ ಆವೃತ್ತಿಯಲ್ಲಿ ಅವರಿಗೆ ಉತ್ತಮವಾಗಿತ್ತು. ಆ ಆವೃತ್ತಿಯಲ್ಲಿ ಧೋನಿ 18 ಪಂದ್ಯಗಳಲ್ಲಿ 41.90 ಸರಾಸರಿಯಲ್ಲಿ 461 ರನ್ ಗಳಿಸಿದರು. ಜೊತೆಗೆ ನಾಲ್ಕು ಅರ್ಧಶತಕಗಳನ್ನು ಗಳಿಸಿದ್ದರು. ಇದರ ನಂತರ ಧೋನಿ ಐಪಿಎಲ್ 2018 ರಲ್ಲಿ ಅದ್ಭುತ ಬ್ಯಾಟಿಂಗ್ ಮಾಡಿದರು. 16 ಪಂದ್ಯಗಳಲ್ಲಿ 75.83 ಸರಾಸರಿಯಲ್ಲಿ 455 ರನ್ ಗಳಿಸಿದರು. ಆ ವರ್ಷ ಧೋನಿ ಮೂರು ಅರ್ಧಶತಕಗಳನ್ನು ಗಳಿಸಿದ್ದರು. ಐಪಿಎಲ್ 2020 ಚೆನ್ನೈ ನಾಯಕನಿಗೆ ಕೆಟ್ಟದ್ದಾಗಿತ್ತು. ಈ ಆವೃತ್ತಿಯಲ್ಲಿ ಧೋನಿ ಕೇವಲ 200 ರನ್ ಗಳಿಸಿದರು. ಜೊತೆಗೆ ಅವರ ಬ್ಯಾಟ್‌ನಿಂದ ಒಂದು ಅರ್ಧಶತಕವೂ ಬರಲಿಲ್ಲ.
ಮಹೇಂದ್ರ ಸಿಂಗ್ ಧೋನಿ ಕೂಡ ವಿಕೆಟ್ ಹಿಂದೆ ಯಶಸ್ವಿಯಾಗಿದ್ದಾರೆ. ಐಪಿಎಲ್‌ನಲ್ಲಿ ಇದುವರೆಗೆ 113 ಕ್ಯಾಚ್‌ಗಳು ಮತ್ತು 39 ಸ್ಟಂಪ್‌ಗಳನ್ನು ಮಾಡಿದ್ದಾರೆ. ಐಪಿಎಲ್ 2020 ಮತ್ತು 2013 ವಿಕೆಟ್ ಕೀಪಿಂಗ್‌ನಲ್ಲಿ ಅವರಿಗೆ ಅತ್ಯುತ್ತಮವಾಗಿದೆ. ಆ ಆವೃತ್ತಿಯಲ್ಲಿ ಧೋನಿ 15 ಕ್ಯಾಚ್‌ಗಳನ್ನು ತೆಗೆದುಕೊಂಡರು.
ಐಪಿಎಲ್‌ನಲ್ಲಿ ಧೋನಿ ಸಾಧನೆ
ವರ್ಷ | ಪಂದ್ಯ | ರನ್ | ಅತ್ಯಧಿಕ ರನ್ | ಸರಾಸರಿ | ಶತಕ | ಅರ್ಧ ಶತಕ |
2020 | 14 | 480 | 47* | 25 | 0 | 0 |
2019 | 15 | 424 | 84* | 83.2 | 0 | 3 |
2018 | 16 | 512 | 79* | 75.83 | 0 | 3 |
2017 | 16 | 105 | 61* | 26.36 | 0 | 1 |
2016 | 14 | 182 | 64* | 40.57 | 0 | 1 |
2015 | 17 | 157 | 53 | 31 | 0 | 1 |
2014 | 16 | 164 | 57* | 74.2 | 0 | 1 |
2013 | 18 | 0 | 67* | 41.9 | 0 | 4 |
2012 | 19 | 433 | 51* | 29.83 | 0 | 1 |
2011 | 16 | 372 | 70* | 43.55 | 0 | 2 |
2010 | 13 | 404 | 66* | 31.88 | 0 | 2 |
2009 | 14 | 362 | 58* | 41.5 | 0 | 2 |
2008 | 16 | 404 | 65 | 41.4 | 0 | 2 |
ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಧೋನಿ
ಆವೃತ್ತಿ | ಪಂದ್ಯ | ರನ್ | ಅತ್ಯಧಿಕ ರನ್ | ಸರಾಸರಿ | ಶತಕ | ದ್ವಿ ಶತಕ | ಅರ್ಧ ಶತಕ |
ಟೆಸ್ಟ್ | 90 | 4876 | 224 | 38.09 | 6 | 1 | 33 |
ಏಕದಿನ | 350 | 10773 | 183 | 50.58 | 10 | 0 | 73 |
T20 | 98 | 1617 | 56 | 37.6 | 0 | 0 | 2 |