ದ್ವಾರಕೀಶ್ ಇನ್ನಿಲ್ಲ: ಅಗಲಿದ ನಟನ ಅಂತ್ಯಕ್ರಿಯೆ ಚಾಮರಾಜಪೇಟೆ ಬ್ರಾಹ್ಮಣರ ಚಿತಾಗಾರದಲ್ಲಿ ನಾಳೆ ನಡೆಯಲಿದೆ: ಕೆ ಮಂಜು
ನಟ, ನಿರ್ಮಾಪಕ ದ್ವಾರಕೀಶ್ ನಿಧನ: ಪ್ರತಿದಿನ ವಾಕ್ ಮತ್ತು ಕಟ್ಟುನಿಟ್ಟಾಗಿ ಊಟದ ಕ್ರಮ ಅನುಸರಿಸುತ್ತಿದ್ದ ಅವರು ಸಾಯುತ್ತಾರೆ ಅಂದುಕೊಂಡಿರಲಿಲ್ಲ. ಆದರೆ ವಿಧಿಯಾಟ ಮುಂದೆ ಯಾರೇನು ಮಾಡೋಕಾಗುತ್ತೆ? ಅವರ ಮಗ ಯೋಗೇಶ್ ಮತ್ತು ಅವನ ಪತ್ನಿ ದ್ವಾರಕೀಶ್ ರನ್ನು ಬಹಳ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು ಎಂದು ಮಂಜು ಹೇಳಿದರು.
ಬೆಂಗಳೂರು: ಇಂದು ಬೆಳಗ್ಗೆ ಹೃದಯಾಘಾತದಿಂದ ನಿಧನರಾದ ಹಿರಿಯ ನಟ ದ್ವಾರಕೀಶ್ (Dwarakish) ಅವರ ಅಂತ್ಯಕ್ರಿಯೆ ನಗರದ ಚಾಮರಾಜಪೇಟೆ ಕೆಅರ್ ಮಿಲ್ (KR Mill) ಬಳಿಯಿರುವ ಬ್ರಾಹ್ಮಣರ ಚಿತಾಗಾರದಲ್ಲಿ ನಡೆಯಲಿದೆ ಎಂದು ಖ್ಯಾತ ನಿರ್ಮಾಪಕ ಕೆ ಮಂಜು (K Manju) ಹೇಳಿದರು. ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ದ್ವಾರಕೀಶ್ ಮನೆಯ ಬಳಿ ಟಿವಿ9 ವರದಿಗಾರನೊಂದಿಗೆ ಮಾತಾಡಿದ ಮಂಜು, ಬರೀ ಸಿನಿಮಾವನ್ನೇ ಉಸಿರಾಡುತ್ತಿದ್ದ ದ್ವಾರಕೀಶ್ ಕೇವಲ ಕನ್ನಡ ಮಾತ್ರವಲ್ಲ ಹಿಂದಿಯೂ ಸೇರಿದಂತೆ ಬೇರೆ ಹಲವಾರು ಭಾಷೆಗಳಲ್ಲಿ ಸಿನಿಮಾಗಳನ್ನು ನಿರ್ಮಿಸಿದ್ದರು. ಕೇವಲ ಮೂರು ದಿನಗಳ ಹಿಂದಷ್ಟೇ ಅವರೊಂದಿಗೆ ಮಾತಾಡಿದ್ದೆ ಎಂದು ಹೇಳಿದರು. ಪ್ರತಿದಿನ ವಾಕ್ ಮತ್ತು ಕಟ್ಟುನಿಟ್ಟಾಗಿ ಊಟದ ಕ್ರಮ ಅನುಸರಿಸುತ್ತಿದ್ದ ಅವರು ಸಾಯುತ್ತಾರೆ ಅಂದುಕೊಂಡಿರಲಿಲ್ಲ. ಆದರೆ ವಿಧಿಯಾಟ ಮುಂದೆ ಯಾರೇನು ಮಾಡೋಕಾಗುತ್ತೆ? ಅವರ ಮಗ ಯೋಗೇಶ್ ಮತ್ತು ಅವನ ಪತ್ನಿ ದ್ವಾರಕೀಶ್ ರನ್ನು ಬಹಳ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ದ್ವಾರಕೀಶ್ ಅವರಿಗೆ ಒಟ್ಟು ಆರು ಮಕ್ಕಳು, ಒಬ್ಬನು ಅಮೆರಿಕಾದಲ್ಲಿದ್ದ, ಮೂರು ದಿನಗಳ ಹಿಂದಷ್ಟೇ ಅವನ ಮಾವ ತೀರಿಕೊಂಡ ಕಾರಣ ಬೆಳಗಾವಿಗೆ ಬಂದಿದ್ದಾನೆ, ಇನ್ನೊಬ್ಬನು ದುಬೈನಲ್ಲಿದ್ದಾನೆ ಎಂದು ಮಂಜು ಹೇಳಿದರು. ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ದ್ವಾರಕೀಶ್ ಪಾರ್ಥೀವ ಶರೀರವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಇಡುವ ವ್ಯವಸ್ಥೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಮಾಡುತ್ತಿದೆ ಎಂದು ಅವರು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Dwarakish Death: ಸಿನಿಮಾದಲ್ಲಿ ಲಕ್ಷ ಲಕ್ಷ ಗಳಿಸಿದರೂ ದ್ವಾರಕೀಶ್ ಮನೆ ಮಾರಾಟ ಮಾಡಿದ್ದೇಕೆ? ಇಲ್ಲಿದೆ ಸತ್ಯ ಕಥೆ