ಡಿ.15ರಂದು ಪರಿಷತ್ ಅಧಿವೇಶನ ಕರೆಯುವಂತೆ ವಿಧಾನ ಪರಿಷತ್ ಕಾರ್ಯದರ್ಶಿಗೆ ಸರ್ಕಾರ ಪತ್ರ

|

Updated on: Dec 11, 2020 | 6:14 PM

ಸರ್ಕಾರ ನಿಗದಿ ಮಾಡಿದ ಕಾರ್ಯಕಲಾಪಗಳ ಪಟ್ಟಿಯಂತೆ ಡಿಸೆಂಬರ್ 15ರವರೆಗೆ ಪರಿಷತ್​ ಕಲಾಪ ಮುಂದುವರಿಸುವಂತೆ ನಿರ್ದೇಶನ ನೀಡಲಾಗಿದ್ದು, ಇದಾದ ನಂತರದಲ್ಲ್ಲಿ ಡಿಸೆಂಬರ್​ 15ರಂದು ಮಂಗಳವಾರ ಬೆಳಗ್ಗೆ 11ಗಂಟೆಗೆ ಅಧಿವೇಶನ ಕರೆದು ಸಭಾಪತಿಯವರ ವಿರುದ್ಧ ನೀಡಲಾದ ಅವಿಶ್ವಾಸ ನಿರ್ಣಯದ ಸೂಚನೆ ಕುರಿತು ಚರ್ಚಿಸುವಂತೆ ಪತ್ರ ಬರೆದ ಸರ್ಕಾರ.

ಡಿ.15ರಂದು ಪರಿಷತ್ ಅಧಿವೇಶನ ಕರೆಯುವಂತೆ ವಿಧಾನ ಪರಿಷತ್ ಕಾರ್ಯದರ್ಶಿಗೆ ಸರ್ಕಾರ ಪತ್ರ
ವಿಧಾನಸೌಧ
Follow us on

ಬೆಂಗಳೂರು: ಪರಿಷತ್​ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆ ಮಾಡಿರುವ ಹಿನ್ನೆಲೆಯಲ್ಲಿ ಡಿಸೆಂಬರ್ 15ರಂದು ಪರಿಷತ್ ಅಧಿವೇಶನ ಕರೆಯುವಂತೆ ವಿಧಾನ ಪರಿಷತ್ ಕಾರ್ಯದರ್ಶಿಗೆ ಸರ್ಕಾರ ಪತ್ರ ಬರೆದಿದೆ.

 

 

ವಿಧಾನ ಪರಿಷತ್ ಕಾರ್ಯದರ್ಶಿಗೆ ಸರ್ಕಾರ ಬರೆದ ಪತ್ರ

ಸರ್ಕಾರ ನಿಗದಿ ಮಾಡಿದ ಕಾರ್ಯ ಕಲಾಪಗಳ ಪಟ್ಟಿಯಂತೆ ಡಿಸೆಂಬರ್ 15ರವರೆಗೆ ಪರಿಷತ್​ ಕಲಾಪ ಮುಂದುವರಿಸುವಂತೆ ನಿರ್ದೇಶನ ನೀಡಲಾಗಿದೆ. ಇದಾದ ನಂತರದಲ್ಲಿ ಡಿಸೆಂಬರ್​ 15ರಂದು ಮಂಗಳವಾರ ಬೆಳಗ್ಗೆ 11ಗಂಟೆಗೆ ಅಧಿವೇಶನ ಕರೆದು ಸಭಾಪತಿಯವರ ವಿರುದ್ಧ ನೀಡಲಾದ ಅವಿಶ್ವಾಸ ನಿರ್ಣಯದ ಸೂಚನೆ ಕುರಿತು ಚರ್ಚಿಸಲು ಸಭೆ ಕರೆಯುವಂತೆ ವಿಧಾನ ಪರಿಷತ್ ಕಾರ್ಯದರ್ಶಿಗೆ ಸಂಸದೀಯ ವ್ಯವಹಾರಗಳ ಇಲಾಖೆ ಕಾರ್ಯದರ್ಶಿಯಿಂದ ಬಂದ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಗೋಹತ್ಯೆ ನಿಷೇಧ ವಿಧೇಯಕಕ್ಕೆ ಹಿನ್ನಡೆ: ವಿಧಾನ ಪರಿಷತ್​ನಲ್ಲಿ ಮಂಡನೆಯೇ ಆಗಲಿಲ್ಲ