Just ಒಮ್ಮೆ ಯೋಚಿಸಿ ನೋಡಿ! ಇಡೀ ಜಗತ್ತೇ, ಕಾಣದ ಆ ಒಂದು ಕ್ರಿಮಿಯ ಕಾಟದಿಂದ ಥರಗುಟ್ಟಿದೆ. ಚಿಕ್ಕವರು ಹಾಗಿರಲಿ, ದೊಡ್ಡವರೇ ಬೆಚ್ಚಬೀಳುತ್ತಿದ್ದಾರೆ.. ಏನಪ್ಪಾ ಇದು ಗ್ರಹಚಾರ ಅಂಥಾ! ಅಂಥಾದ್ದರಲ್ಲಿ ದೊಡ್ಡವರೇ ಆಗಲಿ, ಎಂಟೆದೆಯ ಬಂಟನೇ ಆಗಲಿ.. ಒಬ್ಬೊಬ್ಬರೇ ಹೊರಗೆ ತಿರುಗಾಡುವುದಕ್ಕೂ ಭಯಪಡುತ್ತಾರೆ. ಎಲ್ಲಿ ಕೊರೊನಾ ಅಟ್ಯಾಕ್ ಆಗಿಬಿಡುತ್ತದೋ ಎಂದು ಅದರತ್ತಲೇ ಗಿರಕಿ ಹೊಡೆಯುತ್ತಾರೆ.
ನೀನು ನಿಜಕ್ಕೂ ಸ್ಪೆಷಲ್ಲೇ ಬಿಡು ಕಂದಾ!
ಮಗು ಚಿಕ್ಕದಿರಬಹುದು ಆದ್ರೆ, 3 ಗಂಟೆಗಳ ವಿಮಾನ ಪಯಣ ಚಿಕ್ಕದ್ದಲ್ಲ!
ಸಡನ್ ಆಗಿ ಇಡೀ ದೇಶ ಲಾಕ್ ಡೌನ್ ಆಗುತ್ತಿದ್ದಂತೆ ಈ ಬಾಲಕನೂ ಅಲ್ಲೇ ಉಳಿದುಬಿಟ್ಟಿದ್ದಾನೆ. ಅವನ ಅಪ್ಪ-ಅಮ್ಮ ಇಲ್ಲಿ ಬೆಂಗಳೂರಿನಲ್ಲಿ ಲಾಕ್ ಆಗಿದ್ದಾರೆ. ಅಮ್ಮನನ್ನು ಕಾಣದೆ ಮೂರು ತಿಂಗಳಾಗಿದೆ. ಜೊತೆಗೆ ಅದೇನೋ ಕೊರೊನಾ ಅಂತೆ ಎಂದು ಭಯಪಡುವ ಕಾಲದಲ್ಲಿ ಈ ಬಾಲಕ ಬರೋಬ್ಬರಿ ಮೂರು ಗಂಟೆಗಳ ವಿಮಾನ ಪಯಣ ಮುಗಿಸಿ, ಅಮ್ಮನ ಮಡಿಲು ಸೇರಿದ್ದಾನೆ!
ಮೊದ್ಲೇ ವಿಮಾನ! ಜೊತೆಗೆ ಕೊರೊನಾ ಆತಂಕ, ಅಕಸ್ಮಾತ್ ಅವನಿಗೆ ಅಮ್ಮ-ಅಜ್ಜಿಯ ನೆನಪಾಗಿ ಅಳು ಬಂದಿದ್ದರೆ. ಅಥವಾ ಇನ್ಯಾವುದೋ ಅವ್ಯಕ್ತ ಭಾವ, ಭಯ ಕಾಡಿದ್ದರೆ. ಅವನನ್ನು ಸಂತೈಸಲು ಸಹ ಯಾರೂ ಮುಂದಾಗುತ್ತಿರಲಿಲ್ಲ. ಯಾಕೆಂದ್ರೆ ಸೋಷಿಯಲ್ ಡಿಸ್ಟೆನ್ಸಿಂಗು, ಅದೂ ಇದು ಅಂತಾ ಯಾರೇ ಆಗಲಿ ಹೆಜ್ಜೆ ಹಿಂದಿಡುತ್ತಿದ್ದರು. ಅಂಥಾದ್ದರಲ್ಲಿ ಯಾವುದೇ ಆತಂಕ ಕಾಣದೆ, ಮಗು ನಗುನಗುತಾ ಇಂದು ಬೆಳಗ್ಗೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮ್ಮನ ಮಡಿಲು ಸೇರಿದ್ದಾನೆ.
ಅಬ್ಬಾ ನಿಜಕ್ಕೂ ಅವನ ಗುಂಡಿಗೆಗೆ ಒಂದು ಸಲಾಂ ಹೇಳಲೇಬೇಕು..!
Published On - 3:14 pm, Mon, 25 May 20