Hampi Utsav 2024: ‘ಹಂಪಿ ಉತ್ಸವ’ಕ್ಕೆ ಚಾಲನೆ ನೀಡಿದ ಬಳಿಕ ಸಿಎಂ ಸಿದ್ದರಾಮಯ್ಯ ಹೇಳಿದ್ದಿಷ್ಟು

| Updated By: ಗಂಗಾಧರ​ ಬ. ಸಾಬೋಜಿ

Updated on: Feb 02, 2024 | 10:59 PM

ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿರುವ ‘ಹಂಪಿ ಉತ್ಸವ’ಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್, ಕನ್ನಡ ಮತ್ತು ಸಂಸ್ಕ್ರತಿ ಸಚಿವ ಸಚಿವ ಶಿವರಾಜ್ ತಂಗಡಗಿ, ಸಚಿವ ಬಿ. ನಾಗೇಂದ್ರ, ಶಾಸಕರಾದ ಭರತ್ ರೆಡ್ಡಿ ಮತ್ತು ಎಂ.ಪಿ.ಲತಾ ಭಾಗಿ ಸಿಎಂಗೆ ಸಾಥ್​ ನೀಡಿದರು. 

Hampi Utsav 2024: ‘ಹಂಪಿ ಉತ್ಸವ’ಕ್ಕೆ ಚಾಲನೆ ನೀಡಿದ ಬಳಿಕ ಸಿಎಂ ಸಿದ್ದರಾಮಯ್ಯ ಹೇಳಿದ್ದಿಷ್ಟು
ಹಂಪಿ ಉತ್ಸವಕ್ಕೆ ಸಿಎಂ ಚಾಲನೆ
Follow us on

ವಿಜಯನಗರ, ಫೆಬ್ರುವರಿ 2: ಇಂದಿನಿಂದ ಮೂವರು ದಿನಗಳ ಕಾಲ ನಡೆಯಲಿರುವ ‘ಹಂಪಿ ಉತ್ಸವ’ (Hampi Utsav) ಕ್ಕೆ ತಾಯಿ ಭುವನೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಸಿಎಂ ಸಿದ್ದರಾಮಯ್ಯ (Siddaramaiah) ಚಾಲನೆ ನೀಡಿದ್ದಾರೆ. ಈ ವೇಳೆ ನಗಾರಿ ಬಾರಿಸಿ ಸಿದ್ದರಾಮಯ್ಯ ಸಂತಸ ವ್ಯಕ್ತಪಡಿಸಿದ್ದಾರೆ. ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್, ಕನ್ನಡ ಮತ್ತು ಸಂಸ್ಕ್ರತಿ ಸಚಿವ ಸಚಿವ ಶಿವರಾಜ್ ತಂಗಡಗಿ, ಸಚಿವ ಬಿ. ನಾಗೇಂದ್ರ, ಶಾಸಕರಾದ ಭರತ್ ರೆಡ್ಡಿ ಮತ್ತು ಎಂ.ಪಿ.ಲತಾ ಭಾಗಿ ಸಿಎಂಗೆ ಸಾಥ್​ ನೀಡಿದರು.

ಗ್ಯಾರಂಟಿಗಳ ಜೊತೆಗೆ ಬರ ಪರಿಹಾರ ನೀಡಿದ್ದೇವೆ: ಸಿಎಂ ಸಿದ್ದರಾಮಯ್ಯ

‘ಹಂಪಿ ಉತ್ಸವ’ಕೆ ಚಾಲನೆ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಾವು ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಗಳನ್ನು ಈಡೇರಿಸಿದ್ದೇವೆ. ನಮ್ಮ ಸರ್ಕಾರ ಬಂದ ಕೂಡಲೇ 5 ಗ್ಯಾರಂಟಿ ಜಾರಿ ಮಾಡಿದ್ದೇವೆ. ನಮ್ಮನ್ನು ಟೀಕೆ ಮಾಡಿದವರು ಗ್ಯಾರಂಟಿಗಳನ್ನು ಅನುಸರಿಸುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದರು.

ಇದನ್ನೂ ಓದಿ: ಜಾತಿ ಕಾರಣಕ್ಕೆ ಚನ್ನಕೇಶವ ದೇವಸ್ಥಾನದ ಗರ್ಭಗುಡಿಗೆ ಬಿಡಲಿಲ್ಲ: ಈಶ್ವರಾನಂದಪುರಿ ಸ್ವಾಮೀಜಿ ಬೇಸರ

ಇಂದು ರಾಜ್ಯದಲ್ಲಿ ಭೀಕರ ಬರಗಾಲವಿದೆ. 30 ಲಕ್ಷ ರೈತರಿಗೆ ತಲಾ 2,000 ರೂಪಾಯಿ ಪರಿಹಾರ ನೀಡಿದ್ದೇವೆ. ಗ್ಯಾರಂಟಿಗಳ ಜೊತೆಗೆ ಬರ ಪರಿಹಾರ ನೀಡಿದ್ದೇವೆ. ಗ್ಯಾರಂಟಿಗಳಿಂದ ಹಣ ಉಳಿಯುತ್ತಿದೆ, ಎಲ್ಲೆಡೆ ಓಡಾಡುತ್ತಿದ್ದಾರೆ. ಇದನ್ನು ವಿದೇಶಗಳಲ್ಲಿ ಯುನಿವರ್ಸಲ್ ಬೇಸಿಕ್ ಇನ್ಕಮ್ ಎಂದು ಕರೆಯುತ್ತಾರೆ. ನಾವು ಎಲ್ಲಾ ಜಾತಿ ಧರ್ಮಗಳಿಗೆ ಸಮಾನವಾಗಿ ಕೊಡುತ್ತಿದ್ದೇವೆ. ಇದರಿಂದ ಕರ್ನಾಟಕವೇ ಮಾದರಿಯಾಗಬೇಕು.  ನಾವು ಇನ್ನೊಬ್ಬರನ್ನು ಫಾಲೋ ಮಾಡವುದಿಲ್ಲ. ನಾವೇ ಇನ್ನೊಬ್ಬರಿಗೆ ಮಾದರಿ ಆಗಬೇಕು. ನಾವು ಕರ್ನಾಟದಿಂದ ಸಾಕಷ್ಟು ತೆರೆಗೆ ಕಟ್ಟುತ್ತಿದ್ದೇವೆ. ಆದರೆ ಕಟ್ಟುವಷ್ಟು ತೆರೆಗೆ ಸಿಗುತ್ತಿಲ್ಲ ಎಂದಿದ್ದಾರೆ.

4 ಲಕ್ಷ ಕೋಟಿ ತೆರಿಗೆ ಕೊಡುತ್ತಿದ್ದೇವೆ ಆದರೆ ಕೇಂದ್ರದಿಂದ 50 ಸಾವಿರ ಕೋಟಿ ಬರುತ್ತಿದೆ. ಬರಗಾಲ ಬಂದರೆ ಕೇಂದ್ರದಿಂದ ಒಂದು ಪೈಸೆ ಬಂದಿಲ್ಲ. ಹಾಗಾಗಿ ಕರ್ನಾಟಕದಿಂದ ಫೆ. 7 ರಂದು ಪ್ರತಿಭಟನೆಯನ್ನು ದೆಹಲಿಯಲ್ಲಿ ಮಾಡುತ್ತೇವೆ. ನಮಗೆ ಬರಬೇಕಾದ ಹಣ ಬರುವುದಕ್ಕೆ ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಬಿಜೆಪಿ ಕೋರ್ ಕಮಿಟಿ ಸಭೆ ಅಂತ್ಯ, ರಾಜ್ಯಸಭಾ ಅಭ್ಯರ್ಥಿ ಆಯ್ಕೆ ಬಗ್ಗೆ ಮಹತ್ವದ ತೀರ್ಮಾನ

ಹಂಪಿ ಉತ್ಸವದಿಂದ ವಿಜಯನಗರ ಸಮ್ರಾಜ್ಯದ ಗತವೈಭವನ್ನು ಮತ್ತೆ ಸಾರುತ್ತೇವೆ. ನಮ್ಮ ಸರ್ಕಾರ ನಿಮ್ಮ ಜೊತೆ ಇದೆ. ನಿಮ್ಮ‌ಆಶೀರ್ವಾದ ಸದಾ ಹೀಗೆ ಇರಲಿ. ವಿಜಯನಗರ ಶ್ರೀಕೃಷ್ಣದೇವರಾಯ ಕಾಲದಲ್ಲಿ ದಸರಾ ನಡೆಯುತ್ತಿತ್ತು. ನಂತರದ ದಿನಗಳಲ್ಲಿ ನಾವು ಮೈಸೂರಿನಲ್ಲಿ ಆಚರಿಸುತ್ತಿದ್ದೇವೆ. ಹಂಪಿಯಲ್ಲಿ ನಡೆಯಬೇಕಾದ ದಸರಾ ಮೈಸೂರಲ್ಲಿ ಆಚರಿಸ್ತಿದ್ದೇವೆ. ಹಾಗಾಗಿ ಗತವೈಭವ ನೆನಪಿಸಲು ಹಂಪಿ ಉತ್ಸವ ಆಚರಿಸಲಾಗುತ್ತಿದೆ ಎಂದರು.

ಸಂವಿಧಾನ ಉಳಿದರೆ ನಾವೆಲ್ಲಾ ಉಳಿಯುತ್ತೇವೆ

ಬಸವಾದಿ ಶರಣರು ಹೇಳಿದ ಆದರ್ಶಗಳು ಸಂವಿಧಾನದಲ್ಲಿ ಅಳವಡಿಸಿದ್ದೇವೆ. ಪ್ರತಿಯೊಬ್ಬರು ಇತಿಹಾಸವನ್ನು ತಿಳಿದು ನಡೆಯಬೇಕು. ಸಂವಿಧಾನವನ್ನು ತಿರುಚುವ, ಬದಲಾಯಿಸುವ ಕುತಂತ್ರ ನಡೆಯುತ್ತಿದೆ. ಸಂವಿಧಾನ ಉಳಿದರೆ ನಾವೆಲ್ಲಾ ಉಳಿಯುತ್ತೇವೆ. ಸಂವಿಧಾನ ಉಳಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ ಎಂದು ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯ ಆಡಳಿತ ಇಡೀ ದೇಶಕ್ಕೆ ಮಾದರಿ: ಪರಮೇಶ್ವರ್

ಸಚಿವ ಡಾ.ಪರಮೇಶ್ವರ್​ ಮಾತನಾಡಿ, ಸಿಎಂ ಸಿದ್ದರಾಮಯ್ಯ ಆಡಳಿತ ಇಡೀ ದೇಶಕ್ಕೆ ಮಾದರಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಮಾಜಿಕ ನ್ಯಾಯ ನೀಡುತ್ತಿದ್ದಾರೆ. ಹಂಪಿಯ ಇತಿಹಾಸ ಮುಂದಿನ ಪೀಳಿಗೆಗೂ ಗೊತ್ತಾಗಬೇಕು. ಬಡಜನರಿಗಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಸಾಮಾಜಿಕ ನ್ಯಾಯಕ್ಕಾಗಿ ಸಿದ್ದರಾಮಯ್ಯ ಜೀವನ ಮುಡಿಪಾಗಿಟ್ಟಿದ್ದಾರೆ. ಶ್ರೀಕೃಷ್ಣ ದೇವರಾಯನ ಆಡಳಿತ ಇಂದಿಗೂ ಪ್ರಸ್ತುತವಿದೆ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:54 pm, Fri, 2 February 24