ಗಣಿ ಉದ್ಯಮಿ ಖಾರದಪುಡಿ ಮಹೇಶ್ ಪ್ರಕರಣ: 17.24 ಕೋಟಿ ಮೌಲ್ಯದ ಆಸ್ತಿ ಜಪ್ತಿ
ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿ ಸರ್ಕಾರಕ್ಕೆ ಬೊಕ್ಕಸಕ್ಕೆ 103 ಕೋಟಿ ರೂ. ನಷ್ಟ ಉಂಟುಮಾಡಿರುವ ಆರೋಪ ಎದುರಿಸುತ್ತಿರುವ ಗಣಿ ಉದ್ಯಮಿ ಖಾರದಪುಡಿ ಮಹೇಶ್ ಅವರಿಗೆ ಸೇರಿದ 17.24 ಕೋಟಿ ಮೌಲ್ಯದ ಆಸ್ತಿಯನ್ನು ಗುರುವಾರ ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ.
ವಿಜಯನಗರ: ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿ ಸರ್ಕಾರದ ಬೊಕ್ಕಸಕ್ಕೆ 103 ಕೋಟಿ ರೂ. ನಷ್ಟ ಉಂಟುಮಾಡಿರುವ ಆರೋಪ ಎದುರಿಸುತ್ತಿರುವ ಗಣಿ ಉದ್ಯಮಿ ಖಾರದಪುಡಿ ಮಹೇಶ್ (Kharadapudi Mahesh) ಅವರಿಗೆ ಸೇರಿದ 17.24 ಕೋಟಿ ಮೌಲ್ಯದ ಆಸ್ತಿಯನ್ನು ಗುರುವಾರ ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ. ಅಕ್ರಮವಾಗಿ ಅದಿರು ಸಾಗಾಟ ಮಾಡಿದ ಆರೋಪವನ್ನು ಮಹೇಶ್ ಎದುರಿಸುತ್ತಿದ್ದಾರೆ.
ಕೆಲವರಿಗೆ ನಮ್ಮ ಮೇಲೆ ಬಹಳ ಪ್ರೀತಿ ಎಂದ ಖಾರದಪುಡಿ ಮಹೇಶ್
ಜಾರಿ ನಿರ್ದೇಶನಾಲಯದಿಂದ ಆಸ್ತಿ ಜಪ್ತಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಆಸ್ತಿ ಸೀಜ್ ಮಾಡಿರುವುದು ಹಳೇ ಪ್ರಕರಣ. ನಾವು ಕಾನೂನು ಬದ್ದವಾಗಿದ್ದೇವೆ. ಕಾನೂನಿಗೆ ತೆಲೆ ಬಾಗಿಸುತ್ತೇವೆ. ನ್ಯಾಯಾಲಯ ನಿನ್ನೆ ಆದೇಶ ಮಾಡಿದ್ದು, ನಮಗೆ ಮಾಹಿತಿ ಸಿಕ್ಕಿದೆ.
ಇದನ್ನೂ ಓದಿ: ಕುದುರೆ.. ಶೂರ.. ಧೀರ ಅಂತ ತಿವಿದ ಹಿಂದಿನ ಸಿಎಂ ಬೊಮ್ಮಾಯಿ -ಬೊಮ್ಮಾಯಿ ಮಾತಿಗೆ ಡಿಸಿಎಂ ಡಿಕೆ ಶಿವಕುಮಾರ್ಗೂ ನಗು!
ನಮ್ಮ ಅಣ್ಣನ ಮಗನ ಆಸ್ತಿ ಬಿಡುಗಡೆ ಮಾಡಿದೆ. ಇದೆಲ್ಲಾ ಹಳೇಯ ಕೇಸ್. ಈಗ ಮತ್ತೆ ಮತ್ತೆ ಪ್ರಕರಣ ದಾಖಲಿಸುತ್ತಿದ್ದಾರೆ. ನಮ್ಮ ಮೇಲೆ ಕೆಲವರಿಗೆ ಬಹಳ ಪ್ರೀತಿಯಿದೆ. ನಾವು ಕೇವಲ ಟಾನ್ಸ್ ಪೋರ್ಟರ್ಸ್ಗಳು. ನಾವು ಅಕ್ರಮ ಮಾಡಿಲ್ಲ. ಅತಿ ಶ್ರೀಘ್ರದಲ್ಲೇ ನಾವು ದೋಷಮುಕ್ತರಾಗಿ ಬರುತ್ತೇವೆ ಎಂದರು.
ಇದನ್ನೂ ಓದಿ: Chikkaballapur News: ಅಶ್ವತ್ಥನಾರಾಯಣರನ್ನು ನೇಣುಗಂಬಕ್ಕೆ ಹಾಕಬೇಕು; ವಿವಾದಿತ ಹೇಳಿಕೆ ನೀಡಿದ ವೀರಪ್ಪ ಮೊಯ್ಲಿ
ನನ್ನ ಆಸ್ತಿ ಎಲ್ಲಿದೆ ತೋರಿಸಲಿ ಉಚಿತವಾಗಿ ನೀಡುವೆ
ಹುಚ್ಚರ ಮದುವೆಯಲ್ಲಿ ಉಂಡವರೇ ಜಾಣ ಎನ್ನುವಂತೆ ಅಷ್ಟು ಕೋಟಿ, ಇಷ್ಟು ಕೋಟಿ ಅಂತಿದ್ದಾರೆ. ಆದರೆ ನಮ್ಮ ಬಳಿ ಅಷ್ಟೊಂದು ಆಸ್ತಿಯಿಲ್ಲ. ನನ್ನ ಆಸ್ತಿ ಎಲ್ಲಿದೆ ಎಂದು ತೋರಿಸಲಿ, ಅರ್ಧ ಆಸ್ತಿಯನ್ನ ಉಚಿತವಾಗಿ ಕೊಡುವೆ. ನಾನೂ ತುಂಬಾ ಗಟ್ಟಿಯಾಗಿರುವೆ. ನನ್ನ ಸ್ನೇಹಿತರು ಪೋನ್ ಮಾಡಿ ಕೇಳುತ್ತಾರೆ. ಅವರಿಗೆ ಹೇಳಿ ಹೇಳಿ ಸಾಕಾಗಿ ಹೋಗಿದೆ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.