ಮೂರು ದಿನಗಳ ಹಿಂದೆ ಮೃತಪಟ್ಟಿದ್ದ ತಾಯಿಯ ಚಿತಾಭಸ್ಮ ವಿಸರ್ಜನೆಗೆ ತೆರಳಿದ್ದ ಮಗ ನೀರುಪಾಲು

| Updated By: ಸಾಧು ಶ್ರೀನಾಥ್​

Updated on: Jul 21, 2023 | 9:13 PM

ಸಂಜೆಯಾದ್ರು ಕೊಟ್ರೇಶ ಮನೆಗೆ ಬಾರದಿದ್ದಾಗ... ಕುಟುಂಬದ ಸದಸ್ಯರು ಹುಡುಕಾಟ ನಡೆಸಿದ್ದಾರೆ. ಗ್ರಾಮದ ಹೊರವಲಯದಲ್ಲಿರುವ ಚೆಕ್ ಡ್ಯಾಂ ಬಳಿ ಗುರುವಾರ ಬೆಳಿಗ್ಗೆ ಬೈಕ್‌, ಚಪ್ಪಲಿ ಪತ್ತೆಯಾಗಿದ್ದರಿಂದ ನೀರು ಪಾಲಾಗಿರುವ ಶಂಕೆ ವ್ಯಕ್ತವಾಗಿತ್ತು.

ಮೂರು ದಿನಗಳ ಹಿಂದೆ ಮೃತಪಟ್ಟಿದ್ದ ತಾಯಿಯ ಚಿತಾಭಸ್ಮ ವಿಸರ್ಜನೆಗೆ ತೆರಳಿದ್ದ ಮಗ ನೀರುಪಾಲು
ತಾಯಿಯ ಚಿತಾಭಸ್ಮ ವಿಸರ್ಜನೆಗೆ ತೆರಳಿದ್ದ ಮಗ ನೀರುಪಾಲು
Follow us on

ವಿಜಯನಗರ, ಜುಲೈ 21: ಮೂರು ದಿನಗಳ ಹಿಂದೆ ಮೃತಪಟ್ಟಿದ್ದ ತಾಯಿಯ (mother) ಚಿತಾಭಸ್ಮ (ashes) ವಿಸರ್ಜಿಸಲು ತೆರಳಿದ್ದ ಯುವಕ (son) ನೀರಿನಲ್ಲಿ ಮುಳುಗಿ ಸಾವಿಗೀಡಾಗಿರುವ ಘಟನೆ ವಿಜಯನಗರ ಜಿಲ್ಲೆಯ (Vijayanagara) ಹೂವಿನಹಡಗಲಿ ತಾಲೂಕಿನ ಇಟಗಿ ಗ್ರಾಮದಲ್ಲಿ ಜರುಗಿದೆ. ಎಚ್.ಜಿ. ಕೊಟ್ರೇಶ್ (40) ತಾಯಿಯ ಚಿತಾಭಸ್ಮ ನೀರಿಗೆ ಬಿಡಲು ಬುಧವಾರ ಮಧ್ಯಾಹ್ನ ಹಗರಿಬೊಮ್ಮನಹಳ್ಳಿ (Hagaribommanahalli) ರಸ್ತೆಯಲ್ಲಿರುವ ಮಳೆಹಳ್ಳದಲ್ಲಿರುವ ಚೆಕ್ ಡ್ಯಾಂಗೆ ತೆರಳಿದ್ದಾಗ ಅಯತಪ್ಪಿ ನೀರಿಗೆ ಬಿದ್ದಿದ್ದಾರೆ.

ಸಂಜೆಯಾದ್ರು ಕೊಟ್ರೇಶ ಮನೆಗೆ ಬಾರದಿದ್ದಾಗ… ಕುಟುಂಬದ ಸದಸ್ಯರು ಹುಡುಕಾಟ ನಡೆಸಿದ್ದಾರೆ. ಗ್ರಾಮದ ಹೊರವಲಯದಲ್ಲಿರುವ ಚೆಕ್ ಡ್ಯಾಂ ಬಳಿ ಗುರುವಾರ ಬೆಳಿಗ್ಗೆ ಬೈಕ್‌, ಚಪ್ಪಲಿ ಪತ್ತೆಯಾಗಿದ್ದರಿಂದ ನೀರು ಪಾಲಾಗಿರುವ ಶಂಕೆ ವ್ಯಕ್ತವಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ್ದ ಪೊಲೀಸರು ಮತ್ತು ಅಗ್ನಿಶಾಮಕದಳದ ಸಿಬ್ಬಂದಿಯನ್ನು ಕರೆಯಿಸಿ ಚೆಕ್ ಡ್ಯಾಂ ನಲ್ಲಿ ಶೋಧ ನಡೆಸಿದಾಗ ಶವ ಪತ್ತೆಯಾಗಿದೆ. ಇಟ್ಟಿಗಿ ಠಾಣೆಯ ಪಿಎಸ್‌ಐ ವೀರೇಶ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಇದನ್ನೂ ಓದಿ: ರೈಲಿನಲ್ಲಿ ಎರಡು ಬೋಗಿಗಳ ಜಾಯಿಂಟ್ ಮೇಲೆ ಮಗುವಿನೊಂದಿಗೆ ಕುಳಿತು ಮಹಿಳೆ ಅಪಾಯಕಾರಿ ಪ್ರಯಾಣ

ಚೆಕ್ ಡ್ಯಾಂನಲ್ಲಿ ಶವ ಪತ್ತೆಯಾಗುತ್ತಿದ್ದಂತೆ ಕುಟುಂಬದ ಸದಸ್ಯರ ಆಕ್ರಂದನ ಮುಗಿಲುಮುಟ್ಟಿತ್ತು. ಘಟನೆಯ ಕುರಿತು ಹೂವಿನಹಡಗಲಿ ತಾಲೂಕಿನ ಇಟಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯನಗರ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್  ಮಾಡಿ