ಶಾಸಕಿ ಕಚೇರಿಯನ್ನೇ ಬಿಡದ ಕಳ್ಳರು: ಲಕ್ಷಾಂತರ ರೂ. ಹಣ, ಚಿನ್ನ-ಬೆಳ್ಳಿ ಆಭರಣ ದೋಚಿದ ಖದೀಮರು

ವಿಜಯನಗರ ಜಿಲ್ಲೆ ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ ಅವರ ಕಚೇರಿಯ ಬೀಗ ಮುರಿದ ಹಣ, ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ. ಹರಪನಹಳ್ಳಿಯ ಕಾಶಿ ಸಂಗಮೇಶ್ವರ ಬಡಾವಣೆಯಲ್ಲಿರುವ ಲತಾ ಮಲ್ಲಿಕಾರ್ಜುನ ಅವರ ಶಾಸಕ ಕಚೇರಿಗೆ ನಾಲ್ವರು ಮುಸುಕುಧಾರಿಗಳು ನುಗ್ಗಿ ಕಳತನ ಮಾಡಿದ್ದಾರೆ. ಈ ಸಂಬಂಧ ಪೊಲೀಸರ ಪ್ರಕರಣ ದಾಖಲಿಸಿಕೊಂಡು ಕಳ್ಳರ ಗ್ಯಾಂಗ್​​ ಪತ್ತೆಗೆ ಶೋಧ ನಡೆಸಿದ್ದಾರೆ.

ಶಾಸಕಿ ಕಚೇರಿಯನ್ನೇ ಬಿಡದ ಕಳ್ಳರು: ಲಕ್ಷಾಂತರ ರೂ. ಹಣ, ಚಿನ್ನ-ಬೆಳ್ಳಿ ಆಭರಣ ದೋಚಿದ ಖದೀಮರು
ಶಾಸಕಿ ಲತಾ ಮಲ್ಲಿಕಾರ್ಜುನ ‌ಕಚೇರಿಗೆ ಕನ್ನ
Edited By:

Updated on: Jul 17, 2025 | 9:56 PM

ವಿಜಯನಗರ, (ಜುಲೈ 17): ಹರಪನಹಳ್ಳಿ(harapanahalli) ವಿಧಾನಸಭಾ ಕ್ಷೇತ್ರದ ಪಕ್ಷೇತರ ಲತಾ ಮಲ್ಲಿಕಾರ್ಜುನ (Latha Mallikarjuna)  ಅವರ ಕಚೇರಿಯ ಬೀಗ ಮುರಿದ ಕಳ್ಳರು ಹಣ, ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ದೋಚಿರುವುದು ಬೆಳಕಿಗೆ ಬಂದಿದೆ. ನಾಲ್ವರು ಮುಸುಕುದಾರಿಗಳು ಹರಪನಹಳ್ಳಿಯ ಕಾಶಿ ಸಂಗಮೇಶ್ವರ ಬಡಾವಣೆಯಲ್ಲಿರುವ ಲತಾ ಮಲ್ಲಿಕಾರ್ಜುನ ಅವರ ಶಾಸಕ ಕಚೇರಿಯ ಬೀಗ ಮುರಿದ ಒಳಗೆ ನುಗ್ಗಿದ್ದು. 2.5 ಲಕ್ಷ ನಗದು ಹಣ ಹಾಗೂ 10.80 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.

ಬುಧವಾರ ಮಧ್ಯರಾತ್ರಿ ಒಂದು ಗಂಟೆಯಿಂದ ಶುಕ್ರವಾರ ನಸುಕಿನ ನಾಲ್ಕು ಗಂಟೆ ನಡುವೆ ಮುಸುಕು ದಾರಿಗಳು ಶಾಸಕರ ಕಚೇರಿಯನ್ನು ದೋಚಿದ್ದಾರೆ. ಈ ಸಂಬಂಧ ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರ ಜಾಲ ಪತ್ತೆಗೆ ಪೊಲೀಸರು ಶೋಧ ನಡೆಸಿದ್ದಾರೆ.

ಇನ್ನು ಘಟನಾ ಸ್ಥಳಕ್ಕೆ ವಿಜಯನಗರ ಪೊಲೀಸ್ ವರಿಷ್ಠಾಧಿಕಾರಿ ಎಸ್ ಜಾಹ್ನವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹರಪನಹಳ್ಳಿ ಡಿವೈಎಸ್ಪಿ ವೆಂಕಟಪ್ಪ ನಾಯಕ ನೇತೃತ್ವದಲ್ಲಿ ಆರೋಪಿಗಳ ಪತ್ತೆಗೆ ತಂಡ ರಚನೆ ಮಾಡಲಾಗಿದೆ.

 

Published On - 9:38 pm, Thu, 17 July 25