24 ಗಂಟೆಯಲ್ಲಿ ತುಂಗಭದ್ರೆಗೆ ಹರಿದುಬಂತು ಬರೋಬ್ಬರಿ 4 ಟಿಎಂಸಿ ನೀರು, ರೈತರು ಫುಲ್ ಖುಷ್

| Updated By: ರಮೇಶ್ ಬಿ. ಜವಳಗೇರಾ

Updated on: Jul 07, 2024 | 11:02 AM

ಬೇಸಿಗೆಯಲ್ಲಿ ನೀರಿನಲ್ಲದೇ ಡೆಡ್ ಸ್ಟೋರೇಜ್​ಗೆ ಇಳಿದಿದ್ದ ತುಂಗಭದ್ರಾ ಜಲಾಶಯದಲ್ಲಿ ಇದೀಗ ಜೀವಕಳೆ ಬಂದಿದೆ. ಮಲೆನಾಡು ಭಾಗದಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ತುಂಗಭದ್ರಾ ಜಲಾಶಯಕ್ಕೆ ನೀರು ಹರಿದುಬರುತ್ತಿದೆ. ಇದರಿಂದ ಕರ್ನಾಟಕದಲ್ಲಿ ನಾಲ್ಕು ಜಿಲ್ಲೆಗಳಿಗೆ ಮಾತ್ರವಲ್ಲ ಆಂಧ್ರ ಪ್ರದೇಶ ರೈತರ ಮೊಗದಲ್ಲಿ ಸಂತಸ ಮನೆ ಮಾಡಿದೆ. ಇನ್ನು ಒಳಹರಿವು ಹೆಚ್ಚಾಗಿದ್ದರಿಂದ ಕಳೆದ 24 ಗಂಟೆಗಳಲ್ಲಿ ಭಾರೀ ಪ್ರಮಾಣದಲ್ಲಿ ನೀರು ಹರಿದುಬಂದಿದೆ. ಹಾಗಾದ್ರೆ, ಸದ್ಯ ತುಂಗಭದ್ರಗೆ ಎಷ್ಟು ಒಳಹರಿವು ಇದೆ. ಎಷ್ಟು? ನೀರು ಸಂಗ್ರಹವಾಗಿದೆ ಎನ್ನುವ ವಿವರ ಇಲ್ಲಿದೆ.

24 ಗಂಟೆಯಲ್ಲಿ ತುಂಗಭದ್ರೆಗೆ ಹರಿದುಬಂತು ಬರೋಬ್ಬರಿ 4 ಟಿಎಂಸಿ ನೀರು, ರೈತರು ಫುಲ್ ಖುಷ್
ತುಂಗಭದ್ರಾ ಜಲಾಶಯ
Follow us on

ವಿಜಯನಗರ/ಕೊಪ್ಪಳ, (ಜುಲೈ 07): ತುಂಗಭದ್ರಾ ಜಲಾಶಯ ಆಂಧ್ರ ಪ್ರದೇಶ ಸೇರಿದಂತೆ ಕರ್ನಾಟಕದ ವಿಜಯನಗರ, ಬಳ್ಳಾರಿ, ರಾಯಚೂರು, ಕೊಪ್ಪಳ ಜಿಲ್ಲೆಗಳ ಜನರ ಜೀವನಾಡಿಯಾಗಿದೆ. ಬೇಸಿಗೆಯಲ್ಲಿ ಡೆಡ್​ ಸ್ಟೋರೇಜ್​ಗೆ ಇಳಿದಿದ್ದ ತುಂಗಭದ್ರೆಗೆ ಇದೀಗ ಜೀವ ಕಳೆಬಂದಿದೆ. ಮಲೆನಾಡು ಭಾಗದಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತುಂಗಭದ್ರಾ ಜಲಾಶಯದ ಒಳ ಹರಿವಿನಲ್ಲಿ ಹೆಚ್ಚಳವಾಗುತ್ತಿದೆ. ಸದ್ಯ ತುಂಗಭದ್ರಾ ಜಲಾಶಯಕ್ಕೆ 50971 ಕ್ಯೂಸೆಕ್ ನೀರು ಹರಿದುಬರುತ್ತಿದೆ. ಈ ಹಿನ್ನೆಲೆಯಲ್ಲಿ ನಿನ್ನೆ(ಜುಲೈ 06) 13.591 ಟಿಎಂಸಿ ಇದ್ದ ನೀರು ಇಂದು (ಜುಲೈ 07) ಏಕಾಏಕಿ ಡ್ಯಾಂನಲ್ಲಿ 17.912 ಟಿಎಂಸಿ ನೀರು ಸಂಗ್ರಹವಾಗಿದೆ. ಈ ಮೂಲಕ ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 4 ಟಿಎಂಸಿ ನೀರು ಸಂಗ್ರಹವಾಗಿರುವುದು ವಿಶೇಷ.

24 ಗಂಟೆಗಳಲ್ಲಿ ಜಲಾಶಯಕ್ಕೆ 4 ಟಿಎಂಸಿ ನೀರು ಹರಿದು ಬಂದಿದೆ. ಸದ್ಯ ಜಲಾಶಯಕ್ಕೆ 50971 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ತುಂಗಭದ್ರಾ ಒಟ್ಟು 105.79 ಟಿಎಂಸಿ ನೀರು ಸಾಮಾರ್ಥ್ಯ ಹೊಂದಿದ್ದು, ಶನಿವಾರ 13.90 ಟಿಎಂಸಿ ಇದ್ದ ನೀರಿನ ಸಂಗ್ರಹ ಇಂದು 17.912 ಟಿಎಂಸಿಗೆ ಏರಿಕೆಯಾಗಿದೆ. ಇನ್ನು ಒಳ ಹರಿವಿನ ಪ್ರಮಾಣದಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಹೀಗಾಗಿ ಜಲಾಶಯ ಬೇಗ ಭರ್ತಿಯಾಗಬಹುದೆಂದು ರೈತರಲ್ಲಿ ಆಶಾಭಾವನೆ ಮೂಡಿಸಿದೆ.

ಇದನ್ನೂ ಓದಿ: Karnataka Dam Water Level: ಕಬಿನಿ ಜಲಾಶಯ ಬಹುತೇಕ ಭರ್ತಿ, ರಾಜ್ಯದ ಡ್ಯಾಂಗಳ ಇಂದಿನ ನೀರಿನ ಮಟ್ಟ ವಿವರ ಹೀಗಿದೆ

ಇದೇ ರೀತಿ ನೀರಿನ ಒಳ ಹರಿವು ಬಂದರೆ ಈ ವಾರದಲ್ಲೇ ಜಲಾಶಯ ಬಹುತೇಕ ಭರ್ತಿಯಾಗಲಿದೆ. ತುಂಗಭದ್ರಾ ಜಲಾಶಯ ತುಂಬಿದ್ರೆ 4 ಜಿಲ್ಲೆಗಳ ಜನರಿಗೆ ಅನುಕೂಲವಾಗಲಿದೆ. ಅಲ್ಲದೇ ಆಂಧ್ರ ಪ್ರದೇಶದ ರೈತರಿಗೂ ಜೀವನಾಡಿಯಾಗಿದೆ. ಕೇವಲ ತುಗಂಭದ್ರಾ ಜಲಾಶಯದ ನೀರನ್ನು ಕೇವಲ ಕೃಷಿ ಚಟುವಟಿಕೆಗಳಿಗೆ ಮಾತ್ರ ಬಳಕೆಯಾಗುತ್ತಿಲ್ಲ. ನಾಲ್ಕು ಜಿಲ್ಲೆಗಳ ಕುಡಿಯಲು ಬಳಕೆ ಮಾಡಲಾಗುತ್ತದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ