ವಿಜಯನಗರ, ಅಕ್ಟೋಬರ್ 13: ಪ್ಯಾಲೆಸ್ಟೀನ್ (Palestine) ಬೆಂಬಲಿಸಿ ವಿಡಿಯೋ ಹಂಚಿಕೊಂಡಿದ್ದ ಮುಸ್ಲಿಂ ಯುವಕನ ವಿರುದ್ಧ ಸುಮುಟೋ ಪ್ರಕರಣ ದಾಖಲು ಮಾಡಲಾಗಿದೆ. ಆಲಂ ಬಾಷಾ ವಿವಾದಾತ್ಮಕ ಪೋಸ್ಟ್ ಹಂಚಿಕೊಂಡಿದ್ದ ಯುವಕ. ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯ PSI ಮುನಿರತ್ನ ನೀಡಿದ ದೂರಿನ ಆಧಾರದ ಮೇಲೆ CRPC 108-151 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಯುವಕನನ್ಮು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇಸ್ರೇಲ್ ಮತ್ತು ಪ್ಯಾಲೆಸ್ಟೀನ್ ಮಧ್ಯೆ ಯುದ್ಧ ನಡೆಯುತ್ತಿದೆ. ಭಾರತ ಯುದ್ಧ ಪೀಡಿತ ಇಸ್ರೇಲ್ಗೆ ಬೆಂಬಲ ಘೋಷಣೆ ಮಾಡಿದೆ. ಆದರೆ ಭಾರತೀಯ ಮುಸ್ಲಿಂ ಆಗಿ ಪ್ಯಾಲೆಸ್ಟೀನ್ ಹಾಗೂ ಹಮಾಸ್ ಉಗ್ರರಿಗೆ ಬೆಂಬಲಿಸಿ ಆಲಂ ಬಾಷಾ ಪೋಸ್ಟ್ ಹಂಚಿಕೊಂಡಿದ್ದ.
ಇದನ್ನೂ ಓದಿ: ಇಸ್ರೇಲ್ ಮತ್ತು ಹಮಾಸ್ ಸಂಘರ್ಷ: ಇಸ್ರೇಲ್ನಿಂದ ಆಗಮಿಸಿದ ಕನ್ನಡಿಗ ಈರಣ್ಣ ಹೇಳಿದ್ದಿಷ್ಟು
ವಾಟ್ಸಾಪ್ ಸ್ಟೇಟಸ್ನಲ್ಲಿ ಯುದ್ಧ ಪೀಡಿತ ಪ್ಯಾಲೆಸ್ಟೀನ್ ಭಾವಚಿತ್ರ ಹಾಕಿ ವಿಡಿಯೋ ಹಂಚಿಕೊಂಡಿದ್ದು, ನಾವು ಪ್ಯಾಲೆಸ್ಟೀನ್ ಪರವಾಗಿದ್ದೇವೆ. ಪ್ಯಾಲೆಸ್ಟೀನ್ ಜಿಂದಾಬಾದ್ ಅಂತ ಬರೆಯಲಾಗಿದೆ.
ಆಲಂ ಬಾಷಾ ಹೊಸಪೇಟೆಯ ಸಿದ್ದಲಿಂಗಪ್ಪ ಚೌಕಿಯ ನಿವಾಸಿ ಆಗಿದ್ದು, ಅಲ್ಪಸಂಖ್ಯಾತ ಇಲಾಖೆ ಕಚೇರಿಯಲ್ಲಿ ಅಟೆಂಡರ್ ಕೆಲಸ ಮಾಡುತ್ತಿದ್ದ.
ಇಸ್ರೇಲ್ ಮತ್ತು ಹಮಾಸ್ ಯುದ್ಧ ಪೀಡಿತ ಪ್ರದೇಶಗಳಲ್ಲಿ ಸಿಕ್ಕಿಬಿದ್ದ ನಾಗರಿಕರನ್ನು ಮರಳಿ ಭಾರತಕ್ಕೆ ಕರೆತರಲಾಗುತ್ತಿದ್ದು, ಇದಕ್ಕಾಗಿ ‘ಆಪರೇಷನ್ ಅಜಯ್’ ಕೂಡ ಪ್ರಾರಂಭಿಸಲಾಗಿದೆ. ನಿನ್ನೆ ನಿನ್ನೆ ರಾತ್ರಿ ಇಸ್ರೇಲ್ನಿಂದ 212 ಭಾರತೀಯರನ್ನು ಹೊತ್ತ ಮೊದಲ ವಿಮಾನ ಭಾರತಕ್ಕೆ ಆಗಮಿಸಿದೆ.
ಇದನ್ನೂ ಓದಿ: ಇಸ್ರೇಲ್ನಲ್ಲಿ ಸಿಲುಕಿದ ಬಾಗಲಕೋಟೆ ಯುವತಿ: ಕುಟುಂಬಸ್ಥರಿಗೆ ಧೈರ್ಯ ತುಂಬಿದ ಸಿಎಂ ಸಿದ್ದರಾಮಯ್ಯ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಏರ್ಪೋರ್ಟ್ಗೆ ಆಗಮಿಸಿದ ವಿಜಯಪುರ ಮೂಲದ ಈರಣ್ಣ ಪ್ರತಿಕ್ರಿಯೆ ನೀಡಿದ್ದು, ಇಸ್ರೇಲ್ನಲ್ಲಿ ಯಾವುದೇ ಆತಂಕದ ಪರಿಸ್ಥಿತಿ ಇಲ್ಲ. ಗಾಜಾ ಗಡಿಯಿಂದ 300 ಕಿ.ಮಿ ದೂರದ ಪ್ರದೇಶದಲ್ಲಿ ಇದ್ದೆವು . ನಾವಿದ್ದ ಪ್ರದೇಶದಲ್ಲಿ ಯಾವುದೆ ದಾಳಿ ಇರಲಿಲ್ಲ. ಆದರೆ ಮೊದಲ ಬಾರಿಗೆ ಸೈರನ್ ಮೊಳಗಿತ್ತು.
ನಾಲ್ಕು ವರ್ಷದಲ್ಲಿ ಮೊದಲ ಬಾರಿ ನಾನು ಸೈರನ್ ಕೇಳಿದ್ದು. ಸೈರನ್ ಕೇಳಿದಾಗ ಸ್ವಲ್ಪ ಭಯ ಆಗಿತ್ತು. ಯಾವುದೇ ದಾಳಿ ನಡೆಯಲಿಲ್ಲ. ನಾವೆಲ್ಲ ಸೇಫಾಗಿ ಇದ್ದೆವು. ಮನೆಯವರ ಜೊತೆ ಮಾತಾಡಿದ್ದೇವೆ. ಡಿಸೆಂಬರ್ಗೆ ವಾಪಾಸ್ ಹೋಗುತ್ತೇನೆ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:21 pm, Fri, 13 October 23